ಪುತ್ತೂರು: ಪುತ್ತೂರು ಬೊಳುವಾರು ಬಸ್ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿದ್ದ ಭಾರಿ ಗಾತ್ರದ ಮಾವಿನ ಮರವೊಂದು ಧರಶಾಯಿಯಾದ ಘಟನೆ ಎ.27ರಂದು ನಡೆದಿದ್ದು, ಘಟನೆಯಿಂದ ಮರದ ಪಕ್ಕದಲ್ಲೇ ಪಾರ್ಕ್ ಮಾಡಲಾಗಿದ್ದ ವಾಹನಗಳಿಗೆ ಯಾವುದೇ ಹಾನಿಯಾಗದೆ ಪಾರಾಗಿದ್ದು, ಬಿದ್ದ ಮರದಲ್ಲಿದ್ದ ಮಾವಿನ ಕಾಯಿ ಕೊಯ್ಯಲು ಜನ ಮುಗಿ ಬಿದ್ದಿದ್ದಾರೆ.
ಬೊಳುವಾರು ಬಸ್ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲೇ ಹಲವು ವರ್ಷಗಳಿಂದ ಇದ್ದ ಮಾವಿನ ಮರವೊಂದು ಸಂಜೆ ವೇಳೆ ಆಕಸ್ಮಿಕವಾಗಿ ಧರಶಾಯಿಯಾಗಿದೆ. ಸದಾ ಜನರ ಸಂಪರ್ಕದಲ್ಲಿರುವ ಈ ಸ್ಥಳದಲ್ಲಿ ಮರ ಬಿದ್ದ ಸಂದರ್ಭ ಯಾರೂ ಇಲ್ಲದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಆದರೆ ಮರದ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಒಂದು ಟೆಂಪೋ ಮತ್ತು ದ್ವಿಚಕ್ರ ವಾಹನಕ್ಕೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಮಾವಿನ ಮರ ತುಂಬಾ ಮಾವಿನ ಕಾಯಿ ತುಂಬಿದ್ದರಿಂದ ಜನರೆಲ್ಲರೂ ಮಾವಿನ ಕಾಯಿ ಹೆಕ್ಕುವುದರಲ್ಲಿ ನಿರತರಾಗಿದ್ದಾರೆ.