





ಉಪ್ಪಿನಂಗಡಿ: ಇಲ್ಲಿನ ಮಠದ ಬದ್ರಿಯಾ ಜಮಾಅತ್ ಕಮಿಟಿಯ ಆಶ್ರಯದಲ್ಲಿ ಮಾದಕ ದ್ರವ್ಯಗಳ ವಿರುದ್ಧ ಜನಜಾಗೃತಿ ಅಭಿಯಾನ ನಡೆಸಲಾಯಿತು.


ಜಮಾಅತ್ ಕಮಿಟಿಯ ಇಮಾಮ್ ಸೈಯ್ಯದ್ ಮುಹಮ್ಮದ್ ಇಂಬಿಚ್ಚಿಕೋಯ ತಂಙಳ್ ದುವಾ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಇಬ್ರಾಹೀಂ ಎಂ. ‘ಡ್ರಗ್ಸ್ ಪಿಡುಗು ಮತ್ತು ಅದರ ದುಷ್ಪರಿಣಾಮ’ಗಳ ಬಗ್ಗೆ ವಿವರಿಸಿದರು. ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಅವಿನಾಶ್ ಎಚ್. ‘ಡ್ರಗ್ಸ್ ದುರುಪಯೋಗ ಹಾಗೂ ಸೋಶಿಯಲ್ ಮೀಡಿಯಾ ದುರ್ಬಳಕೆಯ ಅಪಾಯ’ದ ಬಗ್ಗೆ ವಿವರಿಸಿದರು.





ಉಪ್ಪಿನಂಗಡಿ ಮಾಲಿಕುದ್ದೀನಾರ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಸಲಾಂ ಫೈಝಿ ಮಾತನಾಡಿ, ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಾಗಿ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ ಆದರ್ಶ ಮತ್ತು ಮಾರ್ಗದರ್ಶನವನ್ನು ಅನುಸರಿಸುವ ಮಹತ್ತ್ವವನ್ನು ತಿಳಿಸಿದರು.
ಸಭೆಯಲ್ಲಿ ಜಮಾಅತ್ನ ಅಧ್ಯಕ್ಷ ಅಬ್ದುಲ್ ರಹಿಮಾನ್ ಮಠ, ಪ್ರಧಾನ ಕಾರ್ಯದರ್ಶಿ ಆಸಿಫ್ ಎಂ.ಕೆ., ಕಾರ್ಯದರ್ಶಿ ಅಬ್ದುಲ್ ಬಶೀರ್ ಭಾರತ್, ಕೋಶಾಧಿಕಾರಿ ಅಬ್ದುಲ್ ರಜಾಕ್ ಕೊಪ್ಪಳ, ಆದಂ ಕೊಪ್ಪಳ, ಕುವ್ವತ್ತುಲ್ ಇಸ್ಲಾಂ ಮದರಸದ ಪ್ರಧಾನ ಅಧ್ಯಾಪಕ ಕಲಂದರ್ ಶಾಫಿ ಅಝ್ಹರಿ ಉಸ್ತಾದ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ಕೆರೆಮೂಲೆ, ಜಮಾಅತ್ ಸದಸ್ಯರು, ಉಪಸ್ಥಿತರಿದ್ದರು.
ಸಭೆಯಲ್ಲಿ ಡ್ರಗ್ಸ್ ಜನಜಾಗೃತಿ ಅಭಿಯಾನದ ಹೊಸ ಸಮಿತಿಯನ್ನು ರಚಿಸಲಾಯಿತು. ಎಂ.ಬಿ. ನಝೀರ್ ಮಠ ಸ್ವಾಗತಿಸಿದರು. ನಾಸಿರ್ ವೈ. ಎನ್. ಕೆ. ಕಾರ್ಯಕ್ರಮ ನಿರ್ವಹಿಸಿದರು.









