





ಪುತ್ತೂರು: ಕೆದಂಬಾಡಿ ಗ್ರಾಮದ ಕೆರೆಮೂಲೆ ದಿ.ಸಂಕಪ್ಪ ಪೂಜಾರಿಯವರ ಪುತ್ರ ದಿವಾಕರ (38) ರವರು ಏ.27 ರಿಂದ ನಾಪತ್ತೆಯಾಗಿದ್ದಾರೆ.


ಅಡುಗೆ ಕೆಲಸಕ್ಕೆ ಸಹಾಯಕರಾಗಿ ಹೋಗುತ್ತಿದ್ದ ಇವರು ಏ.27 ರಂದು ಮನೆಯಿಂದ ಹೊರಗೆ ಹೋದವರು ತಿರುಗಿ ಬಾರದೆ ನಾಪತ್ತೆಯಾಗಿದ್ದಾರೆ. ಇವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದಿವಾಕರ್ ಅವರ ಚಿಕ್ಕಪ್ಪ ಸೀತಾರಾಮ ಪೂಜಾರಿಯವರು ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.







 
            
