ಸವಣೂರು: ಕಡಬ ತಾಲ್ಲೂಕಿನ ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕದ ಆದಿನಾಗಬ್ರಹ್ಮ ಮೊಗೇರ್ಕಳ ನೂತನ ಗರಡಿ, ಕೊರಗಜ್ಜ, ಗುಳಿಗ ದೈವದ ಕಟ್ಟೆಯ ಪುನರ್ ಪ್ರತಿಷ್ಠೆ ಹಾಗೂ ದೈವಗಳ ನೇಮೋತ್ಸವ ಏ.30ರಿಂದ ಮೇ.2ರವರೆಗೆ ಜರುಗಲಿದೆ.
ಎ.30ರಂದು ಬೆಳಿಗ್ಗೆ 10ಕ್ಕೆ ಸವಣೂರು ಬಸದಿ ವಠಾರದಿಂದ ನೇರೋಳ್ತಡ್ಕದವರೆಗೆ ಹೊರೆಕಾಣಿಕೆ ಮೆರವಣಿಗೆ, ಸಂಜೆ 6ರಿಂದ ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದಶುದ್ಧಿ, ಬಿಂಬ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಪ್ರಾಕಾರ ಬಲಿ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ ನಡೆಯಲಿದೆ.
ಮೇ 1ರಂದು ಬೆಳಿಗ್ಗೆ 7ಕ್ಕೆ ಗಣಹೋಮ, ಭಜನೆ, ಮಿಥುನ ಲಗ್ನದಲ್ಲಿ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ಕ್ಕೆ ಆದಿನಾಗಬ್ರಹ್ಮ ಮೊಗೇರ್ಕಳ ಭಂಡಾರ ತೆಗೆಯುವುದು, 6ರಿಂದ ಸಾಂಸ್ಕೃತಿಕ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9.30ಕ್ಕೆ ಆದಿನಾಗಬ್ರಹ್ಮ ಮೊಗೇರ್ಕಳ ದೈವಗಳ ಗರಡಿ ಇಳಿಯುವುದು, ನೇಮ, 12.30ಕ್ಕೆ ತನ್ನಿಮಾನಿಗ ಗರಡಿ ಇಳಿಯುವುದು, ನೇಮ ನಡೆಯಲಿದೆ. 2ರಂದು ಬೆಳಿಗ್ಗೆ 6ಕ್ಕೆ ಹರಕೆ, ಪ್ರಸಾದ ವಿತರಣೆ, 6.30ರಿಂದ ಗುಳಿಗ ದೈವದ ನೇಮ, ಕೊರಗಜ್ಜ ದೈವದ ನೇಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.