





ಪುತ್ತೂರು: ಏ.23ರಂದು ಪುತ್ತೂರಿನಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ರೋಡ್ ಶೋ ನಡೆದ ಸಂದರ್ಭ ವ್ಯಕ್ತಿಯೊಬ್ಬರ ಕಿಸೆಯಲ್ಲಿದ್ದ ನಗದು ನಾಪತ್ತೆಯಾದ ಕುರಿತು ವರದಿಯಾಗಿದೆ.



ಆರ್ಯಾಪು ಗ್ರಾಮದ ಚಂದ್ರಕುಮಾರ್ ಎಂಬವರು ನಗದು ಕಳೆದುಕೊಂಡವರು. ತನ್ನ ಕಿಸೆಯಲ್ಲಿ ರೂ.45 ಸಾವಿರ ಇಟ್ಟಿದ್ದು, ಏ.23ರಂದು ಮಧ್ಯಾಹ್ನ ಗಂಟೆ 12ರಿಂದ 2 ಗಂಟೆಯ ಸಮಯದಲ್ಲಿ ದರ್ಬೆಯಲ್ಲಿ ಅಣ್ಣಾಮಲೈ ಅವರ ರೋಡ್ ಶೋ ಸಂದರ್ಭ ಪ್ಯಾಂಟಿನ ಕಿಸೆಯಲ್ಲಿದ್ದ ರೂ.500 ನೋಟಿನ ಕಂತೆಯ ರೂ.45 ಸಾವಿರ ಅಂಗಡಿಗೆ ಹೋಗಿ ನೋಡಿದಾಗ ಹಣ ನಾಪತ್ತೆಯಾಗಿತ್ತು.ಈ ಹಣ ಆಕಸ್ಮಿಕವಾಗಿ ಕಿಸೆಯಿಂದ ಬಿದ್ದಿರಬಹುದು ಅಥವಾ ಯಾರಾದರೂ ಕಿಸೆಯಿಂದ ತೆಗೆದಿರಬಹುದು ಎಂಬ ಸಂಶಯವಿದೆ ಎಂದು ಅವರು ಗಾಯ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.











