ಮೇ.1: ಚೆನ್ನಾವರ ಉಳ್ಳಾಕುಲು ದೈವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ,ವರ್ಷಾವಧಿ ನೇಮೋತ್ಸವ

0

ಕಾಪು ರಂಗ ತರಂಗ ಕಲಾವಿದರ ಅಭಿನಯದ ಒರಿಯೆ ನಾಟಕ ಪ್ರದರ್ಶನ

ಸವಣೂರು: ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಚೆನ್ನಾವರಗಡಿಗುತ್ತು ಶ್ರೀ ಉಳ್ಳಾಕುಲು ಮಾಡ ,ಗ್ರಾಮ ದೈವ ಅಬ್ಬೆಜಲಾಯ ಹಾಗೂ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಮೇ.1ರಂದು ವರ್ಷಾವಧಿ ನೇಮೋತ್ಸವ ನಡೆಯಲಿದೆ.

ದೈವಸ್ಥಾನದಲ್ಲಿ ಮೇ.1ರಂದು ಬೆಳಿಗ್ಗೆ 7.30ರಿಂದ ಗಣಹೋಮ, ನವಕ ಕಲಶ ,ಬೆಳಿಗ್ಗೆ 11ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 6.30ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ, ರಾತ್ರಿ 11ರಿಂದ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
ಮೇ.2ರಂದು ಬೆಳಿಗ್ಗೆ 5ರಿಂದ ಗ್ರಾಮದೈವ ಶ್ರೀ ಅಬ್ಬೆಜಲಾಯ ದೈವದ ನೇಮೋತ್ಸವ ನಡೆಯಲಿದೆ.

ಕಾಪು ರಂಗ ತರಂಗ ಕಲಾವಿದರ ಅಭಿನಯದ ಒರಿಯೆ ನಾಟಕ ಪ್ರದರ್ಶನ
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೇ.1ರಂದು ರಾತ್ರಿ 8ರಿಂದ ಅಭ್ಯುದಯ ಯುವಕ ಮಂಡಲ ಚೆನ್ನಾವರ, ಯುವಶಕ್ತಿ ಫ್ರೆಂಡ್ಸ್ ಚೆನ್ನಾವರ-ಮಾಡಾವು ಫ್ರೆಂಡ್ಸ್ ಇದರ ಆಶ್ರಯದಲ್ಲಿ ಉಳ್ಳಾಕುಲು ಸೇವಾ ಸಮಿತಿ ಚೆನ್ನಾವರ ಇದರ ಸಹಯೋಗದೊಂದಿಗೆ ಕಾಪು ರಂಗತರಂಗ ಕಲಾವಿದರು ಅಭಿನಯದ ಸಂದೀಪ್ ಶೆಟ್ಟಿ ಮಾಣಿಬೆಟ್ಟು ರಚನೆಯ ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆಯ ಈ ವರ್ಷದ ನೂತನ ನಾಟಕ ಒರಿಯೆ ತುಳು ನಾಟಕ ಪ್ರದರ್ಶನ ನಡೆಯಲಿದೆ ಎಂದು ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಚೆನ್ನಾವರ, ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸುಬ್ರಾಯ ಗೌಡ ಪಾಲ್ತಾಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here