ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ, ಮೇ 2ರಂದು ಬಾಲಾಲಯ ಪ್ರತಿಷ್ಠೆ

0

ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರ ಅಂಗವಾಗಿ ಎ.29 ಸೋಮವಾರ ಸಾಯಂಕಾಲ ದೇವತಾ ಪ್ರಾರ್ಥನೆ, ಪ್ರಾಸಾದ ಶುದ್ದಿ,ರಾಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತುಬಲಿ ನಡೆಯಿತು.

ಎ.30 ರಂದು ಬೆಳಿಗ್ಗೆ ಶ್ರೀ ದೇವರಿಗೆ ಕ್ಷಾಳನಾದಿ ಬಿಂಬ ಶುದ್ದಿ,ಪ್ರಾಯಶ್ಚಿತ್ತ ಹೋಮ,ಶಾಂತಿ ಹೋಮ,ದ್ರವ್ಯ ಕಲಶ ಪೂರಣ,ದ್ರವ್ಯಕಲಶಾಭಿಷೇಕ,ಅನುಜ್ಞಾ ಬಲಿ,ಅನುಜ್ಞಾ ಪ್ರಾರ್ಥನೆ ಸಂಜೆ ಬಾಲಬಿಂಬ ಜಲಾಧಿವಾಸ,ಬಿಂಬಶುದ್ದಿಕಲಶಾಧಿವಾಸ ನಡೆಯಿತು. ಮೇ.1 ರಂದು ಬೆಳಿಗ್ಗೆ ಶಯ್ಯಾ ಪೂಜೆ,ನಿದ್ರಾ ಕುಂಭ ಪೂಜೆ,ಕುಂಭೇಶ ಕರ್ಕರಿ ಪೂಜೆ,ಸಂಹಾರ ತತ್ವಹೋಮ,ಸಂಹಾರ ತತ್ವಕಲಶಾಭಿಷೇಕ,ಜೀವ ಕಲಶ ಪೂಜೆ,ಜೀವೋದ್ವಾಸನೆ ,ಜೀವಕಲಶ, ಶಯ್ಯಾ ನಯನ,ಬಾಲಬಿಂಬ ಶುದ್ದಿ ಪ್ರಕ್ರಿಯೆ, ಸಾಯಂಕಾಲ ಧ್ಯಾನಾಧಿವಾಸ,ಅಧಿವಾಸ ಹೋಮ,ಶಿರಸ್ತತ್ವ ಹೋಮ,ದ್ರವ್ಯಕಲಶ ಪೂರಣೆ,ಅಧಿವಾಸ ಹೋಮ,ಪೀಠಶುದ್ದಿ,ಪೀಠಾಧಿವಾಸ ನಡೆಯಲಿದೆ.


ಮೆ.2ರಂದು ಗುರುವಾರ ಬೆಳಿಗ್ಗೆ ಗಣಪತಿ ಹೋಮ,ಗಣಪತಿ ಲಕ್ಷ್ಮೀ ನಾರಾಯಣ ದೇವರುಗಳ ಅನುಜ್ಞಾ ಕಲಶಾಭಿಷೇಕ,ಪೂರ್ವಾಹ್ನ 10 ರಿಂದ 10:30 ರ ಸಮಯ ಮಿಥುನ‌ ಲಗ್ನದಲ್ಲಿ ಬಾಲಾಲಯದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವರ ಬಾಲಬಿಂಬ ಪ್ರತಿಷ್ಠೆ,ದ್ರವ್ಯಕಲಶಾಭಿಷೇಕ,ಪ್ರಸನ್ನ ಪೂಜೆ,ಶ್ರೀ ಗಣಪತಿ ,ಶ್ರೀ ಲಕ್ಷ್ಮೀ ನಾರಾಯಣ ದೇವರುಗಳ ಮತ್ತು ರುದ್ರಚಾಮುಂಡಿ ದೈವದ ಮತ್ತು ಗಂಗಾ ದೇವಿಯ ಬಾಲಾಲಯ ಪ್ರತಿಷ್ಠೆ, ಪ್ರಾಸಾದ ವಿಸರ್ಜನಾ ಪ್ರಕ್ರಿಯೆ ನಡೆಯಲಿದೆ.

LEAVE A REPLY

Please enter your comment!
Please enter your name here