





ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಬಿಜೇರು ನಿವಾಸಿ, ನೇರ್ಲ ಗಣೇಶಭವನ ಹೋಟೆಲ್ ಮಾಲಕ ರವಿ ಬಿಜೇರು(53ವ.)ಅವರು ಅಲ್ಪಕಾಲದ ಅನಾರೋಗ್ಯದಿಂದ ಮೇ 1 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.


ರವಿ ಬಿಜೇರು ಅವರು ಎ.26ರಂದು ಮತದಾನ ಮಾಡಿ ಹೋಟೆಲ್ಗೆ ಬಂದವರು ಮೆದುಳಿನ ರಕ್ತಸ್ರಾವಕ್ಕೊಳಗಾಗಿ ದಿಢೀರ್ ಕುಸಿದು ಬಿದ್ದಿದ್ದರು. ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿಂದ ಮೇ 1ರಂದು ಬೆಳಿಗ್ಗೆ ಮನೆಗೆ ಬಂದವರು ರಾತ್ರಿ ವೇಳೆ ನಿಧನರಾದರು. ಮೃತರು ಪತ್ನಿ ಶಶಿಕಲಾ ಹಾಗೂ ಐವರು ಸಹೋದರರನ್ನು ಅಗಲಿದ್ದಾರೆ.














