





ಪುತ್ತೂರು: ಕೆನರಾ ಬ್ಯಾಂಕ್ ಪುತ್ತೂರು ಶಾಖೆಯ ಸಿಬ್ಬಂದಿಯೋರ್ವರ ಮಗ ಬೆಂಗಳೂರುನಲ್ಲಿ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ವರದಿಯಾಗಿದೆ.


ಧರ್ಮಸ್ಥಳ ಕಟ್ಟಡದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಎಟೆಂಡರ್ ಆಗಿರುವ ಪಡ್ನೂರು ಪಂಜಿಗುಡ್ಡೆ ನಿವಾಸಿ ತನಿಯಪ್ಪ ನಾಯ್ಕ್ ಎಂಬವರ ಮಗ ಗುರುರಾಜ್(22ವ.)ಮೃತಪಟ್ಟವರು.ಬೆಂಗಳೂರುನಲ್ಲಿ ಕಿಸ್ಕೋ ಕಂಪೆನಿಯಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಗುರುರಾಜ್ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು ನ.25ರಂದು ಕೆಲಸಕ್ಕೆ ಹೊರಡುವ ಮೊದಲು ಬಾತ್ರೂಂಗೆ ಹೋಗಿದ್ದ ವೇಳೆ ಅಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.





ಗುರುರಾಜ್ ಹಾಗೂ ಇತರ ಇಬ್ಬರು ಪಿಜಿಯಲ್ಲಿ ಒಟ್ಟಿಗೇ ಇದ್ದು ನ.25ರಂದು ಗುರುರಾಜ್ ಅವರೋರ್ವರೇ ಇದ್ದರು.ಗುರುರಾಜ್ ಅವರು ತಂದೆಯೊಟ್ಟಿಗೆ ದೂರವಾಣಿಯಲ್ಲಿ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದರು.
ಸಂಜೆ ವೇಳೆಗೆ ಇನ್ನೇನು ಕೆಲಸಕ್ಕೆ ಹೋಗಲು ರೆಡಿಯಾಗಲೆಂದು ಸ್ನಾನಗೃಹಕ್ಕೆ ಹೋಗಿದ್ದ ವೇಳೆ ಅಲ್ಲಿ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದರು.ಆದರೆ ರೂಮಲ್ಲಿ ಯಾರೂ ಇರದೇ ಇದ್ದುದರಿಂದ ಯಾರಿಗೂ ವಿಷಯ ತಿಳಿಯಲಿಲ್ಲ.ಪಿಜಿಯಲ್ಲಿ ಜೊತೆಗಿರುತ್ತಿದ್ದವರು ನ.26ರಂದು ಮಧ್ಯಾಹ್ನದ ವೇಳೆಗೆ ಬಂದಾಗಲಷ್ಟೆ ಗುರುರಾಜ್ ಅವರು ಸ್ನಾನಗೃಹದಲ್ಲಿ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಮೃತದೇಹವನ್ನು ಬೆಂಗಳೂರುನಿಂದ ಪಂಜಿಗುಡ್ಡೆಗೆ ತಂದು ಅಂತ್ಯ ಸಂಸ್ಕಾರ ನಡೆಯಲಿದೆ.ಮೃತ ಗುರುರಾಜ್ ಅವರು ತಂದೆ,ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ.










