ಅತ್ಯಲ್ಪ ಅವಧಿಯಲ್ಲಿ ಬಹಳಷ್ಟು ಬೆಳೆದು ನಿಂತ ಸಹಕಾರಿ: ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ
ಸದಾ ಮುನ್ನಡೆ ಸಾಧಿಸಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಸ್ವಂತಕಟ್ಟಡ ನಿರ್ಮಾಣ: ಕೆ. ಕೃಷ್ಣ ಶೆಟ್ಟಿ
ಪುತ್ತೂರು: ಸೌಂದರ್ಯ ಸೌಹಾರ್ದ ಸಹಕಾರಿ ಸಂಘವು ಅತ್ಯಲ್ಪ ಅವಧಿಯಲ್ಲಿ ಬಹಳಷ್ಟು ಬೆಳೆದು, ಸ್ವಂತ ಕಟ್ಟಡ ಹೊಂದಿದ ಸಹಕಾರಿ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮಾಜದಲ್ಲಿರುವ ಎಲ್ಲರ ಜೊತೆಗೂ ಸೌಹಾರ್ದದಿಂದ ಬಾಳಿದರೆ ಸಮಾಜವು ನಮ್ಮೊಡನೆ ಸೌಹಾರ್ದದ ಬದುಕನ್ನು ಬೆಳೆಸುತ್ತದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಎಸ್. ಬಿ.ಬಿ. ಸೆಂಟರ್ ನಲ್ಲಿ ಕಳೆದ ಹಲವಾರು ವರುಷಗಳಿಂದ ವ್ಯವಹಾರ ನಡೆಸುತ್ತಿರುವ, ಬೆಂಗಳೂರಿನ ಹಾವನೂರು ಬಡಾವಣೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ನ ಪ್ರಧಾನ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಂಸ್ಥೆಯಿಂದ ಸಮಾಜ ಬೆಳೆಯಬೇಕು ಹಾಗೆಯೇ ಸಮಾಜದಿಂದ ಸಹಕಾರ ಬೆಳೆಯಬೇಕು.ನಮ್ಮ ಬದುಕಿಗೆ ಸಂಪತ್ತು ಅವಶ್ಯಕ. ಅದನ್ನು ಕೂಡಿಟ್ಟುಕೊಂಡರೆ ಆಪತ್ತು ಖಂಡಿತ. ಧಾನ ಗುಣ ನಮ್ಮಲ್ಲಿ ಬಂದಾಗ ನೆಮ್ಮದಿ ಸಾಧ್ಯ ಎಂದರು.
ಸಂಘದ ವ್ಯವಸ್ಥಾಪಕ ನಿರ್ದೇಶಕ ಕೆ. ಕೃಷ್ಣ ಶೆಟ್ಟಿರವರು ಮಾತನಾಡಿ ಹತ್ತು ವರ್ಷದ ಹಿಂದೆ 20 ಲಕ್ಷ ಶೇರು ಬಂಡವಾಳದಲ್ಲಿ ಪ್ರಾರಂಭವಾದ ಸಹಕಾರಿಯು 125 ಕೋಟಿ ಠೇವಣಿ ಇದ್ದು, 115 ಕೋಟಿಯನ್ನು ಸದಸ್ಯರಿಗೆ ಸಾಲ ನೀಡಿದೆ, ಹತ್ತು ವರ್ಷಗಳಲ್ಲಿ 3.75 ಕೋಟಿ ರೂಪಾಯಿ ಲಾಭ ಗಳಿಸಿದೆ. 5 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿಸಿ ಸಂಘ ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು.
ಸಹಕಾರಿ ಸಂಘದ ಅಧ್ಯಕ್ಷರಾದ ಸೌಂದರ್ಯ ಪಿ. ಮಂಜಪ್ಪ, ಉಪಾಧ್ಯಕ್ಷೆ ಎಂ. ಸುನಿತಾ, ನಿರ್ದೇಶಕರಾದ ಎಂ.ಕೀರ್ತನ್ ಕುಮಾರ್, ವರುಣ್ ಕುಮಾರ್, ಪ್ರತಿಕ್ಷಾ, ಕೋ ಅಪರೇಟಿವ್ ಸಂಘಟನೆಯ ರಾಜ್ಯ ಅಧ್ಯಕ್ಷ ವೈ ಕುಮಾರ್, ಕೆ.ಎಸ್.ಎಸ್.ಎಫ್ ಸಿ.ಎಲ್. ನಿರ್ದೇಶಕ ಶರಣಗೌಡ ಜಿ. ಪಾಟೀಲ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯಕಾರ್ಯ ನಿರ್ವಹಣಾಧಿಕಾರಿ ಹೇಮಂತ್ ಬಿ.ವಿ. ರವರು ಸ್ವಾಗತಿಸಿ, ಸಿಬ್ಬಂದಿ ಶೃಂಗ ವಿ. ರವರು ವಂದಿಸಿದರು. ನಿರ್ದೇಶಕರಾದ ರಾಜಶೇಖರ ಮೂರ್ತಿ ಹೆಚ್.ಎಂ ಹಾಗೂ ಸಿಬ್ಬಂದಿ ಹರೀಶ್ ಪಿ. ಕಾರ್ಯಕ್ರಮ ನಿರೂಪಿಸಿದರು.
ಸದಸ್ಯರ ನಂಬಿಕೆಗೆ ಚ್ಯುತಿ ಬಾರದ ರೀತಿಯಲ್ಲಿ ವ್ಯವಹಾರ
ಪೇಜಾವರ ಶ್ರೀಗಳ ಆಶೀರ್ವಾದದಿಂದಾಗಿ ಸಂಘ ನಿರಂತರವಾಗಿ ಬೆಳೆಯುತ್ತಿದೆ. ಸಂಘದ ಸರ್ವ ಸದಸ್ಯರ ನಿಷ್ಟೆ, ನಂಬಿಕೆ ಉಳಿಸಿಕೊಂಡು ಇಂದು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮನಾಗಿ ಉತ್ತಮ ಸೇವೆ ಸಲ್ಲಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಸದಸ್ಯರ ನಂಬಿಕೆಗೆ ಚ್ಯುತಿ ಬಾರದ ರೀತಿಯಲ್ಲಿ ವ್ಯವಹಾರ ನಡೆಸಿ ಸ್ವಂತ ಕಟ್ಟಡ ನಿರ್ಮಾಣವಾಗಿದೆ.
ಸೌಂದರ್ಯ ಪಿ. ಮಂಜಪ್ಪ
ಅಧ್ಯಕ್ಷರು
ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್