ದ.ಕ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರವರು ಅಂದಾಜು 1,00,000 ಕ್ಕೂಹೆಚ್ಚು ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಹಾಗೆಯೇ ಪುತ್ತೂರು ಕ್ಷೇತ್ರದಿಂದ 18 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಲಿದ್ದಾರೆ. ನಮ್ಮ ಜಿಲ್ಲೆ ಬುದ್ಧಿವಂತರ ಜಿಲ್ಲೆ. ಕಳೆದ ಮೂವತ್ತು ವರ್ಷಗಳಿಂದ ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುವ ವ್ಯಕ್ತಿಗಳನ್ನೆ ಆರಿಸಿ ಕಳುಹಿಸಿದ್ದಾರೆ.ಜನರು ಯಾವುದೇ ಆಮಿಷಗಳಿಗೆ ಮಾರು ಹೋಗುವುದಿಲ್ಲ.ಕಾರ್ಯಕರ್ತರ ಅವಿರತ ಶ್ರಮಕ್ಕೆ ಫಲ ಸಿಕ್ಕಿಯೇ ಸಿಗುತ್ತದೆ.ಮೂರನೇ ಬಾರಿ ನರೇಂದ್ರ ಮೋದಿಜೀಯವರು ಪ್ರಧಾನಿ ಆಗುವುದಕ್ಕೆ ದ.ಕ ಲೋಕಸಭಾ ಸದಸ್ಯರ ಪಾಲು ಖಂಡಿತ ಇರಲಿದೆ.