ನಿಡ್ಪಳ್ಳಿ: ಮೂಡಬಿದಿರೆಯ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ನಿಡ್ಪಳ್ಳಿ ಗುತ್ತು ಚಾವಡಿಗೆ ಮೇ.3 ರಂದು ಆಗಮಿಸಿ ಆಶೀರ್ವಚನ ನೀಡಿದರು. ಬೆಟ್ಟಂಪಾಡಿ ಕಜೆ ತರವಾಡು ಮನೆ ಮತ್ತು ದೈವಗಳ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಮಹಾಸ್ವಾಮಿಗಳು ಸಂಜೆ ನಿಡ್ಪಳ್ಳಿ ಗುತ್ತು ಮನೆಗೆ ಭೇಟಿ ನೀಡಿ ಫಲಹಾರ ಸ್ವೀಕರಿಸಿದರು.
ನಿಡ್ಪಳ್ಳಿ ಗುತ್ತು ಮನೆಯ ಪ್ರಮೋದ್ ಆರಿಗ, ಪ್ರವೀಣ್ ಎನ್.ಆರಿಗ ಮತ್ತು ಮನೆಯವರು ಸ್ವಾಮಿಗಳನ್ನು ಸ್ವಾಗತಿಸಿ ಫಲಪುಷ್ಪ ನೀಡಿ ಗೌರವಿಸಿದರು. ಗುತ್ತು ಮನೆಯವರು ಹಾಗೂ ಅವರ ಕುಟುಂಬಸ್ಥರು, ಊರ ಭಕ್ತಾದಿಗಳು ಉಪಸ್ಥಿತರಿದ್ದು ಸ್ವಾಮಿಗಳ ಆಶೀರ್ವಾದ ಪಡೆದರು. ಅಲ್ಲದೆ ಮೈಸೂರು ಅರಮನೆಯಲ್ಲಿ ವಯಲಿನ್ ವಾದಕರಾಗಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ ಇವರು ಸ್ವಾಮಿಗಳ ಜತೆಯಲ್ಲಿ ಆಗಮಿಸಿ ಗುತ್ತು ಮನೆಯಲ್ಲಿ ವಯಲಿನ್ ನುಡಿಸಿ ಸೇರಿದವರ ಮನಸ್ಸಿಗೆ ಮುದ ನೀಡಿದರು.