ಪುತ್ತೂರು: 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ವೆ ಕಲ್ಪಣೆ ಸರಕಾರಿ ಪ್ರೌಢಶಾಲೆ ಎ ಗ್ರೇಡ್ನೊಂದಿಗೆ 100% ಫಲಿತಾಂಶ ಪಡೆದುಕೊಂಡಿದೆ. ಹಸೈನಾರ್ ರೆಂಜಲಾಡಿ ಮತ್ತು ಸಫಿಯಾರವರ ಪುತ್ರಿ ಫಾತಿಮತ್ ಹುಸ್ನ 578 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮಹಮ್ಮದ್ ಹನೀಫ್ ನೇರೋಳ್ತಡ್ಕ ಮತ್ತು ರುಕ್ಯಾರವರ ಪುತ್ರಿ ಆಯಿಷತುಲ್ ನುಸ್ರತ್ ಎಂ.ಎಸ್ 564 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಯೂಸುಫ್ ಸೊರಕೆ ಮತ್ತು ಜುಬೈದಾರವರ ಪುತ್ರಿ ಶಿರ್ಮಾ ಫಾತಿಮಾ 509 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಇಬ್ರಾಹಿಂ ಕೂಡುರಸ್ತೆ ಮತ್ತು ರುಕ್ಯಾರವರ ಪುತ್ರಿ ಫಾತಿಮತ್ ಮುಬಶ್ಶಿರ 507 ಅಂಕಗಳನ್ನು ಪಡೆದುಕೊಂಡಿದ್ದು, ಅಬ್ದುಲ್ ಖಾದರ್ ಬಾಳಾಯ ಮತ್ತು ಸಫಿಯಾರವರ ಪುತ್ರಿ ಆಯಿಷತುಲ್ ಹಾಫಿಲ 502 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಪರೀಕ್ಷೆಗೆ ಹಾಜರಾದ 22 ಮಕ್ಕಳ ಪೈಕಿ 2 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 12 ಮಂದಿ ಪ್ರಥಮ ಶ್ರೇಣಿಯಲ್ಲಿ ಮತ್ತು 8 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಜಯರಾಮ ಶೆಟ್ಟಿ ಕೆ ತಿಳಿಸಿದ್ದಾರೆ.