ಕೌಡಿಚ್ಚಾರ್:ತಮಿಳು ಕಾರ್ಮಿಕ ಮುಖಂಡ, ಕಾಂಗ್ರೆಸ್ ಮುಖಂಡರೂ ಆಗಿದ್ದ ಶಿವಕುಮಾರ್ ಕೌಡಿಚ್ಚಾರ್(49ವ.)ರವರು ಬೆಳಗಾವಿಯ ಖಾನಾಪುರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕೌಡಿಚ್ಚಾರ್ ಸಿಆರ್‌ಸಿ ಕಾಲನಿ ದಿ.ರಾಮಸ್ವಾಮಿಯವರ ಮಗ ಶಿವಕುಮಾರ್ ಅವರು ಸ್ನೇಹಿತರೊಂದಿಗೆ ಸೇರಿ ಕಳೆದ ಹಲವು ವರ್ಷಗಳಿಂದ ಧಾರವಾಡ,ಬೆಳಗಾವಿ,ತಮಿಳ್ನಾಡುನಲ್ಲಿ ಕಾಡುತ್ಪತ್ತಿ ವ್ಯಾಪಾರ ನಡೆಸುತ್ತಿದ್ದು ವಾರದ ಹಿಂದೆಯಷ್ಟೆ ಕೌಡಿಚ್ಚಾರ್‌ನಿಂದ ಧಾರವಾಡಕ್ಕೆ ಹೋಗಿದ್ದರು.ಮೇ 10ರಂದು ಮಧ್ಯಾಹ್ನ ಅವರು ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಬೈಕ್ ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿದೆ.ಪರಿಣಾಮ ಶಿವಕುಮಾರ್ ಅವರು ಗಂಭೀರ ಗಾಯಗೊಂಡು ಸಾವಿಗೀಡಾಗಿರುವುದಾಗಿ ತಿಳಿದು ಬಂದಿದೆ.
ಈ ಹಿಂದೆ ಹಲವು ವರ್ಷಗಳ ಕಾಲ ರಬ್ಬರ್ ಟ್ಯಾಪರ್ ಆಗಿ ಕೆಲಸ ಮಾಡಿಕೊಂಡಿದ್ದ ಶಿವಕುಮಾರ್ ಅವರು ಕಾಂಗ್ರೆಸ್, ತಮಿಳು ಕಾರ್ಮಿಕ ಮುಖಂಡನಾಗಿಯೂ ಗುರುತಿಸಿಕೊಂಡಿದ್ದರು.ರಬ್ಬರ್ ಕಾರ್ಮಿಕರ ಪರ ಹಲವು ಹೋರಾಟಗಳು ಇವರ ನೇತೃತ್ವದಲ್ಲಿ ನಡೆದಿತ್ತು.
ಅಪಘಾತದ ಮಾಹಿತಿ ತಿಳಿದು ಅವರ ತಮ್ಮ ಉದಯ ಕುಮಾರ್ ಸೇರಿದಂತೆ ಮೃತರ ಮನೆಯವರು ಅಲ್ಲಿಗೆ ತೆರಳಿದ್ದಾರೆ.ಮೃತದೇಹ ಮೇ.11ರಂದು ಕೌಡಿಚ್ಚಾರ್‌ಗೆ ಆಗಮಿಸಲಿದೆ.ಮೃತರು ಪತ್ನಿ ಸಾವಿತ್ರಿ, ಇಂಜಿನಿಯರಿಂಗ್ ಮುಗಿಸಿ ಚೆನೈಯಲ್ಲಿ ಉದ್ಯೋಗದಲ್ಲಿರವ ಪುತ್ರ ಹೃತಿಕ್ ರಾಹುಲ್, ಇಂಜಿನಿಯರಿಂಗ್ ಓದುತ್ತಿರುವ ಪುತ್ರಿಯರಾದ ಸುಶ್ಮಿತಾ ಪ್ರಿಯಾಂಕ, ಸಹನಾ ಪ್ರಿಯಾಂಕ ಅವರನ್ನು ಅಗಲಿದ್ದಾರೆ.