ಪುತ್ತೂರು: 2023-24 ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸವಣೂರಿನ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶೇ. 100 ಫಲಿತಾಂಶ ಬಂದಿರುತ್ತದೆ. ಶಾಲೆಯ ಗುಣಾಂಕ 84 ಆಗಿದ್ದು ಎ ಶ್ರೇಣಿಯನ್ನು ಪಡೆದಿರುತ್ತದೆ.
ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಒಟ್ಟು 69 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಓರ್ವ ವಿದ್ಯಾರ್ಥಿನಿ ವಿಶಿಷ್ಟ ಶ್ರೇಣಿಯಲ್ಲಿ, 53 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 15 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕನ್ನಡ ಮಾಧ್ಯಮದಲ್ಲಿ ಚಿಸ್ಮಿತಾ ಅತ್ಯಧಿಕ ಅಂಕ 585 ಪಡೆದಿರುತ್ತಾಳೆ. ಕುಲದೀಪ (555 ), ಶಾನಿಕಾ (549), ಧನ್ವಿತ್ (541), ಪಿ.ವಿ.ಧನ್ಯಾ (536), ಸನ್ವಿತಾ (533), ಸನತ್ ಕುಮಾರ್ (531), ಸುಮಂತ್(530), ಜಸ್ಮಿತಾ ಟಿ ಎಸ್ (526), ಪ್ರತಿಜ್ಞಾ(525), ಫಾತಿಮತ್ ಕಾಮಿಲಾ (523), ಯಶ್ವಿತಾ(521), ಮಹಮ್ಮದ್ ಅನ್ಸೀರ್ (518), ಪ್ರತೀಕ್ಷಾ ಪಿ. (515), ತೃಪ್ತಿ (514), ದೀಕ್ಷಾ( 510), ಸಾಕ್ಷಿ ( 509) ಮತ್ತು ಕಿರಣ ಭಂಡಾರಿ (507) ಅಂಕಗಳನ್ನು ಪಡೆದಿರುತ್ತಾರೆ.
ಆಂಗ್ಲ ಮಾಧ್ಯಮದಲ್ಲಿ ಗ್ರೀಷ್ಮಾ (527) ಮತ್ತು ಅಶ್ವಿತಾ (520) ಅಂಕಗಳನ್ನು ಪಡೆದಿರುತ್ತಾರೆ. ತುಳುವಿನಲ್ಲಿ 11 ವಿದ್ಯಾರ್ಥಿಗಳು 100 ಅಂಕಗಳನ್ನು ಪಡೆದಿರುತ್ತಾರೆ. ಎರಡು ಮಾಧ್ಯಮಗಳಲ್ಲಿಯೂ ಶೇ.100 ಫಲಿತಾಂಶ ಪಡೆದು ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳಿಗೆ, ಕಾರಣಕರ್ತರಾದ ಮುಖ್ಯ ಗುರುಗಳು ಮತ್ತು ಎಲ್ಲಾ ಶಿಕ್ಷಕ ವೃಂದದವರಿಗೆ ವಿಶೇಷ ಅಭಿನಂದನೆಗಳನ್ನು ಶಾಲಾ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರು, ಕಾರ್ಯಾಧ್ಯಕ್ಷರು, ಅಧ್ಯಕ್ಷರು ಮತ್ತು ಸದಸ್ಯರು ಸಲ್ಲಿಸಿರುತ್ತಾರೆ.