ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಸನ್ಮಾನ
ಪುತ್ತೂರು: ಅರಿಯಡ್ಕ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ವಾರ್ಷಿಕ ಮಹಾಸಭೆ, ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವು ಗ್ರಾಮ ಸಮಿತಿಯ ಅಧ್ಯಕ್ಷ ಭರತ್ ಪೂಜಾರಿ ಓಲ್ತಾಜೆ ಸಭಾ ಅಧ್ಯಕ್ಷತೆಯಲ್ಲಿ ಮೇ .12 ರಂದು ಮಜ್ಜಾರಡ್ಕ ಸಭಾಭವನದಲ್ಲಿ ನಡೆಯಿತು.
ಪುತ್ತೂರು ತಾಲೂಕು ಬಿಲ್ಲವ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಪುತ್ತೂರು ಮಹಿಳಾ ವೇದಿಕೆಯ ವಿಮಲಾ ಸುರೇಶ್, ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ, ಪುತ್ತೂರು ಯವವಾಹಿನಿ ಅಧ್ಯಕ್ಷರು ಜಯರಾಮ ಕೆಮ್ಮಿಂಜೆ, ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಮಹೇಶಚಂದ್ರ ಸಾಲಿಯಾನ್, ಮುಖ್ಯಕಾರ್ಯನಿರ್ವಾಹನಾಧಿಕಾರಿ ಉದಯ ಕೋಲಾಡಿ, ಅರಿಯಡ್ಕ ಮಹಿಳಾ ವೇದಿಕೆ ಅಧ್ಯಕ್ಷೆ ಶಮ್ಮಿಲತಾ ಪುರುಷೋತ್ತಮ ಗೋಳ್ತಿಲ,ವೇದಿಕೆ ಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ, ಅಭಿನಂದನೆ
ಪ್ರಗತಿ ಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ, ಚಂದಪ್ಪ ಪೂಜಾರಿ ಮಜ್ಜರಡ್ಕ , ನಾರಾಯಣ ಪೂಜಾರಿ (ಯಕ್ಷಗಾನ ಕಲಾವಿದರು), ಯಕ್ಷಿತಾ.ಎಂ (ಗಾಯಕಿ), ಪುಷ್ಪಲತಾ ಮರತ್ತಮೂಲೆ (ಗ್ರಾ.ಪಂ ಸದಸ್ಯೆ) ಗೀತಾ ಕುಮಾರಿ.ಎಂ (ಸರ್ಕಾರಿ ಶಿಕ್ಷಕಿ), ಪುಷ್ಪಾವತಿ ಪಾಪೆಮಜಲು (ಸರ್ಕಾರಿ ಶಿಕ್ಷಕಿ),ಜಯರಾಮ ಪೂಜಾರಿ ಕುಕ್ಕುತಡಿ, ಚಂದ್ರಶೇಖರ ಪೂಜಾರಿ.ಎ (ಆರಕ್ಷಕರು) ಸುರೇಶ್ ಪೂಜಾರಿ ಸುಶಾ, ದಿನೇಶ ಮರತ್ತಮೂಲೆ, ಕೋಚಣ್ಣ ಪೂಜಾರಿ ಎಂಡೆಸಾಗುರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮದ ಸುಮಾರು 50 ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ನಡೆಯಿತು.
ಪ್ರತಿಭಾ ಪುರಸ್ಕಾರ
ಅತ್ಯುತ್ತಮ ಅಂಕಗಳಿಸಿದ ವಿಧ್ಯಾರ್ಥಿಗಳಾದ, ಪ್ರಥಮ್.ಬಿ, ಪ್ರಣಾಮ್.ಬಿ, ಪ್ರತೀಕ.ಎ,ಮೋಕ್ಷಿತಾರವರುಗಳಿಗೆ ಸ್ಮರಣಿಕೆ ಹಾಗೂ ಶಾಲು ಹೊದಿಸಿ ಅಭಿನಂದಿಸಲಾಯಿತು. ಯಶೋದಾ ಮಜ್ಜಾರ್ ವರದಿ ವಾಚಿಸಿದರು.ಶಮ್ಮಿಲತಾ ಗೋಳ್ತಿಲ ಸ್ವಾಗತಿಸಿದರು. ವಿಖ್ಯಾತ್ ಮಜ್ಜಾರ್ ಪ್ರಾರ್ಥಿಸಿದರು. ಯಕ್ಷಿತಾ.ಎಂ ಕಾರ್ಯಕ್ರಮ ನಿರೂಪಿಸಿದರು. ಗೀತಾ ಬಳ್ಳಿಕಾನ ವಂದಿಸಿದರು. ರಮೇಶ್ ದರ್ಬೆತ್ತಡ್ಕ, ಜನಾರ್ದನ ಬಳ್ಳಿಕಾನ, ಗುರುಪ್ರಸಾದ್ ಮಜ್ಜಾರು, ಯತಿನ್ ಮಜ್ಜಾರು, ಸಮಿತ್ ಮಜ್ಜಾರು, ಜನಾರ್ದನ ಮಜ್ಜಾರು, ಭುವನ್ ಮಜ್ಜಾರು, ಭವಿತ್ ಸ್ವಾಮಿನಗರ, ಚಂದ್ರಶೇಖರ ಕುತ್ಯಾಡಿ, ಅನೀಶ್ ಅರಿಯಡ್ಕ, ಸುರೇಶ್ ಸುಶಾ, ರಘುನಾಥ ಗೋಳ್ತಿಲ, ಜಯಂತ ಕೆಂಗುಡೇಲು, ಗಣೇಶ ಶೇಖಮಲೆ, ಸುಕುಮಾರ ಮಡ್ಯಂಗಳ, ಶೇಷಮ್ಮ ಗುಂಡ್ಯಡ್ಕ ಮತ್ತಿತರರು ಸಹಕರಿಸಿದ್ದರು.