ಪಡಿತರ ಚೀಟಿ ಮಾಡಿಸುವವರಿಗೆ ಸಿಹಿ ಸುದ್ದಿ-ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಹೊಸ ಕಾರ್ಡ್‌ಗೆ ಅವಕಾಶ

0

ನಾಗರಿಕ ಸೇವಾ ಕೇಂದ್ರಗಳಲ್ಲಿ ಅರ್ಜಿಸಲ್ಲಿಸಿದರೆ ಮಾತ್ರ ಮಾನ್ಯ


ಪುತ್ತೂರು:ಲೋಕ ಸಭಾ ಚುನಾವಣಾ ಫಲಿತಾಂಶದ ಬಳಿಕ ಹೊಸ ಪಡಿತರ ಚೀಟಿಗೆ ಹೆಸರು ನೋಂದಾಯಿಸಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತೀರ್ಮಾನಿಸಿದ್ದು ಹೊಸದಾಗಿ ಪಡಿತರ ಚೀಟಿ ಮಾಡಿಸಲು ಹಲವು ಸಮಯಗಳಿಂದ ಕಾದು ಕುಳಿತಿರುವವರಿಗೆ ಸರಕಾರ ಸಿಹಿ ಸುದ್ದಿ ನೀಡಲು ಮುಂದಾಗಿದೆ.


ವಿವಿಧ ಕಾರಣಗಳಿಂದ ಕಳೆದ ಒಂದೂವರೆ ವರ್ಷದಿಂದ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸುವುದಕ್ಕೇ ಅವಕಾಶ ಕಲ್ಪಿಸಿರಲಿಲ್ಲ.ಸಾರ್ವಜನಿಕರು ಹೊಸ ಪಡಿತರ ಚೀಟಿಗಾಗಿ ಬೆಂಗಳೂರು ಒನ್, ಗ್ರಾಮ ಒನ್‌ನಂತಹ ನಾಗರಿಕ ಸೇವಾ ಕೇಂದ್ರಗಳ ಮೂಲಕ ಸಲ್ಲಿಸುವ ಅರ್ಜಿಗಳನ್ನಷ್ಟೇ ಪರಿಗಣಿಸಲು ನಿರ್ಧರಿಸಲಾಗಿದೆ.ಸೈಬರ್ ಕೇಂದ್ರಗಳು ಹೊಸ ಪಡಿತರ ಚೀಟಿ, ತಿದ್ದುಪಡಿಗೆ ಅರ್ಜಿ ಸಲ್ಲಿಸುವವರಿಂದ ಅಧಿಕ ಹಣ ಪಡೆದು ಸುಲಿಗೆ ಮಾಡುತ್ತಿರುವ ಆರೋಪ ಕೇಳಿಬಂದಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.


ನಾಗರಿಕ ಸೇವಾ ಕೇಂದ್ರಗಳಲ್ಲಿ ಅರ್ಜಿಸಲ್ಲಿಸಿದರೆ ಮಾತ್ರ ಮಾನ್ಯ:
ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಬೆಂಗಳೂರು ವನ್ ಗ್ರಾಮ ವನ್‌ನಂತಹ ನಾಗರಿಕ ಸೇವಾ ಕೇಂದ್ರಗಳ ಮೂಲಕ ಸಲ್ಲಿಸುವ ಅರ್ಜಿಗಳನ್ನು ಮಾತ್ರ ಪರಿಗಣಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿರ್ಮಾನಿಸಿದೆ.ಖಾಸಗಿ ಸೈಬರ್ ಕೇಂದ್ರಗಳ ಮುಖಾಂತರ ಸಲ್ಲಿಸುವ ಅರ್ಜಿಗಳನ್ನು ಮಾನ್ಯ ಮಾಡದಿರಲು ನಿರ್ಧರಿಸಲಾಗಿದೆ.ಕೆಲವೊಂದು ಸೈಬರ್ ಕೇಂದ್ರಗಳು ಹೊಸ ಪಡಿತರ ಚೀಡಿ ತಿದ್ದುಪಡಿಗೆ ಅರ್ಜಿ ಸಲ್ಲಿಸುವವರಿಂದ ಅಧಿಕ ಹಣ ಪಡೆದು ಸುಲಿಗೆ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿರುವುದರಿಂದ ಮತ್ತು ಅರ್ಜಿಗಳಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ನಾಗರಿಕ ಸೇವಾ ಕೇಂದ್ರಗಳ ಮೂಲಕ ಸಲ್ಲಿಸುವ ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಲು ತೀರ್ಮಾನಿಸಲಾಗಿದೆ.ನಕಲಿ ದಾಖಲೆಗಳನ್ನು ಸೃಷ್ಠಿಸಿ ಅರ್ಹರಲ್ಲದವರೂ ಕೂಡ ಬಿಪಿಎಲ್ ಚೀಟಿಗಳನ್ನು ಸುಲಭವಾಗಿ ಪಡೆಯಲು ಕೆಲವು ಸೈಬರ್ ಕೇಂದ್ರಗಳು ನೆರವಾಗುತ್ತಿವೆ.ಇದಕ್ಕಾಗಿಯೇ ಲಕ್ಷಾಂತರ ಅನರ್ಹ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here