ಶಾಸಕನಾಗಿ ವರ್ಷ ಪೂರ್ಣಗೊಳಿಸಿದ ಸಂಭ್ರಮ-ಪ್ರಮುಖರ ಭೇಟಿಯಾಗಿ ಮಾತುಕತೆ ನಡೆಸಿದ ಅಶೋಕ್‌ ರೈ

0

ಪುತ್ತೂರು: ಶಾಸಕರಾಗಿ ಒಂದು ವರ್ಷ ಪೂರೈಸಿದ ಅಶೋಕ್ ರೈ ತನ್ನ ಒಂದು ವರ್ಷದ ನಡಿಗೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಪುತ್ತೂರಿನ ಪ್ರಗತಿಪರ ಕೃಷಿಕರು, ವಿವಿಧ ಪಕ್ಷಗಳ ಮುಖಂಡರು ಮತ್ತು ಉದ್ಯಮಿಗಳ ಜೊತೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ಮೇ.15 ರಂದು ಎರಡನೇ ಸುತ್ತಿನ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಪುತ್ತೂರಿನ ಹೆಸರಾಂತ ಉದ್ಯಮಿಗಳ ಭೇಟಿಯಾಗಿ ಅವರ ಜೊತೆ ತನ್ನ ಅಭಿವೃದ್ದಿ ಕಾರ್ಯಕ್ರಮಗಳ ವಿವರವನ್ನು ಹಂಚಿಕೊಂಡರು. ಶಾಸಕರ ಒಂದು ವರ್ಷದ ನಡಿಗೆ ಬಗ್ಗೆ ಅವರುಗಳು ನೀಡಿರುವ ಅಭಿಪ್ರಾಯಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ನೀಡಲಾಗಿದೆ.

ದಿಟ್ಟ ನಿರ್ಧಾರಗಳನ್ನು ಮುಂದುವರೆಸಿ, ನಿಮ್ಮ ಕಾರ್ಯವೈಖರಿ ಚೆನ್ನಾಗಿದೆ: ಕೇಶವ ಪ್ರಸಾದ್ ಮುಳಿಯ
ನೀವು ಶಾಸಕರಾದ ಬಳಿಕ ಅನೇಕ ಬದಲಾವಣೆಗಳು ಆಗಿದೆ, ನೀವು ತೆಗೆದುಕೊಳ್ಳುವ ಕೆಲವೊಂದು ದಿಟ್ಟ ನಿರ್ಧಾರಗಳು ಜನ ಮೆಚ್ಚುವಂತದ್ದಾಗಿದೆ. ಜನರಿಗೆ ನಿಮ್ಮ ಬಗ್ಗೆ ಇದುವರೆಗೂ ಕೆಟ್ಟ ಅಭಿಪ್ರಾಯಗಳು ಬಂದಿಲ್ಲ, ಎಲ್ಲರೂ ನಿಮ್ಮ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಿಚಾರದಲ್ಲಾಗಲಿ, ಬೇರೆ ಯಾವುದೇ ವಿಚಾರದಲ್ಲಾಗಲಿ ನೀವು ರಾಜಕೀಯ ಮಾಡಿಲ್ಲ ಅದು ನಿಮ್ಮ ದೊಡ್ಡ ಗುಣವಾಗಿದೆ. ಪುತ್ತೂರಿನಲ್ಲಿ ರಿಂಗ್ ರೋಡಿನ ಅವಶ್ಯಕತೆ ಇದ್ದು ಅದನ್ನು ಮಾಡುವಲ್ಲಿ ತಾವು ಮುತುವರ್ಜಿವಹಿಸಬೇಕು ಎಂದು ಮುಳಿಯ ಸಂಸ್ಥೆಯ ಮಾಲಕರಾದ ಕೇಶವ ಪ್ರಸಾದ್ ಮುಳಿಯ ಅಭಿಪ್ರಾಯಿಸಿದ್ದಾರೆ.

ಪುತ್ತೂರಿನಲ್ಲಿ ಭ್ರಷ್ಟಚಾರಕ್ಕೆ ದೊಡ್ಡ ತಡೆಯಾಗಿದೆ
ನೀವು ಶಾಸಕರಾದ ಬಳಿಕ ಪುತ್ತೂರಿನಲ್ಲಿ ಭ್ರಷ್ಟಚಾರಕ್ಕೆ ದೊಡ್ಡ ತಡೆಯಾಗಿದೆ. ಇಷ್ಟರಮಟ್ಟಿಗೆ ಕಡಿವಾಣ ಆಗುತ್ತದೆ ಎಂಬುದನ್ನ ನಾವು ಗ್ರಹಿಸಿರಲಿಲ್ಲ. ನಿಮ್ಮನ್ನು ದೂರುವವರು ಯಾರೂ ಇಲ್ಲ, ನೀವು ಸರಿಯಿಲ್ಲ ಎಂದು ಹೇಳುವವರು ಯಾರೂ ಇಲ್ಲ. ನಮ್ಮಲ್ಲಿಗೆ ಬರುವ ಗ್ರಾಹಕರು ಸಹಿತ ನಿಮ್ಮ ಕಾರ್ಯವೈಖರಿಯನ್ನು ಹೊಗಳುತ್ತಾರೆ. ಅಭಿವೃದ್ದಿ ಕೆಲಸಗಳು ತುಂಬಾ ಆಗಿದೆ. ದರ್ಬೆ ಸಿಟಿಒ ರಸ್ತೆ ಕಾಂಕ್ರೀಟ್ ಮಾಡಿ ಎಂದು ನಾವು 5 ವರ್ಷದಿಂದ ಮನವಿ ಮಾಡುತ್ತಿದ್ದೇವೆ ಆದರೆ ಯಾರೂ ನಮ್ಮ ಮನವಿಯನ್ನು ಪುರಸ್ಕರಿಸಿಲ್ಲ, ನೀವು ಶಾಸಕರಾದ ಬಳಿಕ ಆ ರಸ್ತೆ ಕಾಂಕ್ರೀಟ್ ಆಗಿದೆ. ನೀವು ಶಾಸಕರಾಗಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ.

ಪ್ರಕಾಶ್‌ ಕಾಮತ್ ಮಾಲಕರು
ಸಂಜಯ್‌ ಕಾಮತ್ ಮೆನೆಜರ್ ರಾಧಾಸ್ ಪುತ್ತೂರು

ನಿಮ್ಮ ಒಂದು ವರ್ಷದ ಶಾಸಕತ್ವದ ಅವಧಿಯಲ್ಲಿ ಪುತ್ತೂರು ಅನೇಕ ಬದಲಾವಣೆ ಕಂಡಿದೆ, ಮುಂದಿನ ಐದು ವರ್ಷದಲ್ಲಿ ಪುತ್ತೂರಿನ ಚಿತ್ರಣವೇ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ನಿಮ್ಮ ಬಳಿ ಬರುವ ಬಡವರನ್ನು, ಸಹಾಯ ಕೇಳಿ ಬಂದವರನ್ನು ಪಕ್ಷ ಬೇದವಿಲ್ಲದೆ ಕಾಣುವ ನಿಮ್ಮ ಮನಸ್ಸು ಅದ್ಬುತವಾಗಿದೆ. ಓರ್ವ ಜನಪ್ರತಿನಿಧಿಯಾದವರು ಹೇಗೆ ಇರಬೇಕು ಎಂಬುದಕ್ಕೆ ನೀವೇ ಉದಾಹರಣೆಯಾಗಿದೆ.ನಿಮ್ಮ ಬಗ್ಗೆ ಪುತ್ತೂರಿನ ಜನರಿಗೆ ಒಳ್ಳೆಯ ಅಭಿಪ್ರಾಯ ಇದೆ, ನಿಮ್ಮಲ್ಲಿ ತಪ್ಪುಗಳಿದ್ದರೆ ನಾವು ಹೇಳುತ್ತಿದ್ದೆವು ಆದರೆ ಯಾವುದೇ ತಪ್ಪುಗಳು ಕಾಣುತ್ತಿಲ್ಲ. ಮೆಡಿಕಲ್ ಕಾಲೇಕು, ಕೆಎಂಎಫ್ ಸೇರಿದಂತೆ ಅನೇಕ ಯೋಜನೆಗಳನ್ನು ತರುವ ಮೂಲಕ ಇಲ್ಲಿ ಉದ್ಯೋಗವನ್ನು ಸೃಷ್ಟಿ ಮಾಡಿ, ಪುತ್ತೂರನ್ನು ಟೂರಿಸಂ ಕೇಂದ್ರವಾಗಿ ಬದಲಾಯಿಸಿ ಇಲ್ಲಿಗೆ ಹೊರಗಿನಿಂದ ಜನ ಬರುವ ಹಾಗೆ ಮಾಡಬೇಕು ಆಗ ಇಲ್ಲಿರುವ ಎಲ್ಲರಿಗೂ ಉಪಕಾರವಾಗುತ್ತದೆ, ಓರ್ವ ಶಾಸಕನಾಗಿ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ನಿಮಗೆ ಅಪಾರವಾದ ಕಾಳಜಿ ಇದೆ

ಗಿರಿಧರ್ ಶೆಟ್ಟಿ
ಶಿವಶಂಕರ್ ಶೆಟ್ಟಿ , ಉದ್ಯಮಿಗಳು, ಎಂ ಸಂಜೀವ ಶೆಟ್ಟಿ ಜವುಳಿ ಅಂಗಡಿ

ನೀವು ಕರ್ನಾಟಕಕ್ಕೆ ಮಾತ್ರವಲ್ಲ ದೇಶಕ್ಕೆ ಮಾದರಿ ಶಾಸಕರು
ಓರ್ವ ಶಾಸಕನಾಗಿ ತನ್ನ ಕೆಲಸದ ಬಗ್ಗೆ ತಿಳಿಯಲು ಜನರ ಬಳಿಗೆ ತೆರಳುವುದನ್ನು ನಾನು ಪ್ರಥಮ ಬಾರಿಗೆ ಕಾಣುತ್ತಿದ್ದೇನೆ, ತನ್ನಿಂದ ಜನರಿಗೆ ತೊಂದರೆ ಆಗಿದೆಯಾ ಎಂದು ತಿಳಿದುಕೊಂಡು ಅದನ್ನು ತಿದ್ದಿಕೊಳ್ಳುವ ನಿಮ್ಮ ಮನಸ್ಸು ಶ್ರೇಷ್ಟವಾಗಿದೆ. ಹಿಂದಿನ ಕಾಲದಲ್ಲಿ ರಾಜರುಗಳು ಈ ರೀತಿ ಮಾಡುತ್ತಿದ್ದರು ಎಂಬ ಇತಿಹಾಸವನ್ನು ಕೇಳಿದ್ದೆ ಆದರೆ ಈಗ ಕಣ್ಣಾರೆ ಕಾಣುವಂತಾಯಿತು. ನಿಮ್ಮ ಒಂದು ವರ್ಷದ ಅವಧಿಯ ತಪ್ಪುಗಳನ್ನು ಹುಡುಕಲು ಸಾಧ್ಯವಿಲ್ಲ, ಜನರಿಗೆ ಒಳಿತನ್ನೇ ಮಾಡಿದ ನಿಮ್ಮಲ್ಲಿ ಕೆಡುಕುಗಳೇ ಇಲ್ಲ.
ಪುತ್ತೂರನ್ನು ಪ್ರವಾಸಿ ತಾಣವನ್ನಾಗಿ ರೂಪಿಸುವಲ್ಲಿ ತಾವು ಹೆಚ್ಚು ಮುತುವರ್ಜಿವಹಿಸಬೇಕು. ಇಲ್ಲಿ ಇಂಡಸ್ಟ್ರೀಯಲ್ ಎಸ್ಟೇಟ್ ಪ್ರಾರಂಭ ಮಾಡಬೇಕು, ಯುವಕರ ಕೈಗೆ ಉದ್ಯೋಗ ಕೊಡುವ ಮೂಲಕ ಅವರ ಕುಟುಂಬದ ಕೈ ಬಲಪಡಿಸುವ ಕೆಲಸವನ್ನು ಮಾಡಬೇಕು, ಎಲ್ಲರನ್ನೂ ಒಗ್ಗೂಡಿಸಿ ಪುತ್ತೂರಿನಲ್ಲಿ ಸದೃಡ ಸಮಾಜ ನಿರ್ಮಾಣ ಮಾಡಲು ಅದು ನಿಮ್ಮಿಂದ ಮಾತ್ರ ಸಾಧ್ಯವಾಗಲಿದೆ ಎಂಬುದನ್ನು ಜನ ಅರಿತುಕೊಂಡಿದ್ದಾರೆ. ನಿಮ್ಮ ಈಗಿನ ನಡೆ ಚೆನ್ನಾಗಿಯೇ ಇದೆ ಅದನ್ನೇ ಮುಂದುವರೆಸಿ. ಭೃಷ್ಟರು ನಿಮ್ಮನ್ನು ನೋಡಿ ಹೆದರಿದ್ದಾರೆ ಅದುವೇ ದೊಡ್ಡ ಸಾಧನೆ

ಕೆ ಪಿ ಮೊಹಮ್ಮದ್ ಸಾದಿಕ್
ಉದ್ಯಮಿಗಳು, ಆಕರ್ಷಣ್ ಇಂಡಸ್ಟ್ರೀಸ್, ಮುಕ್ರಂಪಾಡಿ

ನಿಮ್ಮ ಕಾರ್ಯವೈಖರಿ ತೃಪ್ತಿಕರವಾಗಿದೆ
ನೀವು ಶಾಸಕರಾಗಿ ಕಳೆದ ಒಂದು ವರ್ಷದಿಂದ ಮಾಡಿದ ಕೆಲಸಗಳು ತೃಪ್ತಿಕರವಾಗಿದೆ, ಅಳುಕು ಹುಡುಕುವಂತದ್ದೇನು ಇಲ್ಲ, ನಿಮ್ಮಂಥ ಶಾಸಕರು ಪುತ್ತೂರಿಗೆ ಬರಲೇ ಇಲ್ಲ, ನೀವು ಶಾಸಕರಾಗಬೇಕು ಎಂದು ನಾನು ನೀವು ನಮ್ಮ ಪಕ್ಷಕ್ಕೆ ಸೇರುವ ಮೊದಲೇ ಯು ಟಿ ಖಾದರ್ ಅವರಲ್ಲಿ ಹೇಳಿದ್ದೆ., ಶಾಸಕನಾಗಿ ಉತ್ತಮ ಕೆಲಸ ಮಾಡುವ ಧೈರ್ಯ, ತಾಕತ್ತು, ಛಲ ನಿಮ್ಮಲ್ಲಿದೆ, ನಿಮ್ಮಂಥವರು ಶಾಸಕರಾಗಿರುವುದು ಪುತ್ತೂರಿನ ಜನತೆಯ ಭಾಗ್ಯವಾಗಿದೆ.
ನೀವು ಸರಕಾರಿ ಅಧಿಕಾರಿಗಳನ್ನು ಹತೋಟಿಗೆ ತರುವ ಮೂಲಕ ಅವರಿಂದ ಸಾರ್ವಜನಿಕರ ಕೆಲಸವನ್ನು ಯವುದೇ ಭೃಷ್ಟಾಚಾರವಿಲ್ಲದೆ ಫಟಾಫಟ್ ಮಾಡಿಸಬೇಕು. ಎಲ್ಲರನ್ನೂ ಒಗ್ಗೂಡಿಸಿ ಕೆಲಸಕಾರ್ಯಗಳನ್ನು ಮಾಡಿ ಮುನ್ನಡೆಯಿರಿ

ದೇವಪ್ಪ ಗೌಡ ಬಿ ಆರ್ ರಂಗಾಯನಕಟ್ಟೆ, ಬೆಟ್ಟಂಪಾಡಿ

LEAVE A REPLY

Please enter your comment!
Please enter your name here