ನೆಲ್ಯಾಡಿ ಗ್ರಾಮ ಪಂಚಾಯಿತಿನ ನಿವೃತ್ತ ವಾಟರ್ ಮ್ಯಾನ್ ಆಲ್ಬರ್ಟ್ ಡಿ ಸೋಜಾ ನಿಧನ

0

ನೆಲ್ಯಾಡಿ : ಕೊಕ್ಕಡ ಗ್ರಾಮದ ರೆಂಜೆತ್ತಡಿ ನಿವಾಸಿ, ನೆಲ್ಯಾಡಿ ಗ್ರಾಮ ಪಂಚಾಯಿತಿ ನಿವೃತ್ತ ನೀರು ನಿರ್ವಾಹಕ ಆಲ್ಬರ್ಟ್ ಡಿ, ಸೋಜಾ(73ವ.) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮೇ 19ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ನೆಲ್ಯಾಡಿ ಗ್ರಾಮ ಪಂಚಾಯಿತಿನಲ್ಲಿ 35 ವರ್ಷಗಳ ಕಾಲ ವಾಟರ್ ಮ್ಯಾನ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ ರೀಟಾ ಡಿಸೋಜ, ಪುತ್ರಿಯರಾದ ಬೆನೆಡಿಕ್ಟ ಡಿಸೋಜ, ಲಿಲ್ಲಿ ಡಿಸೋಜ ಹಾಗೂ ಪುತ್ರ ಇಟಲಿಯಲ್ಲಿ ಧರ್ಮ ಗುರುಗಳಾಗಿ ಸೇವೆ ಸಲ್ಲಿಸಿದ್ದ ಫಾ. ಅಶೋಕ್ ಡಿ ಸೋಜ ಅವರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here