‘ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ ’ ಒಂದು ಸಂಸ್ಥೆ ಅನ್ನುವುದಕ್ಕಿಂತ ಹೆಚ್ಚಾಗಿ ಭಾರತೀಯ ಮೌಲ್ಯಗಳ ಸಹಿತವಾಗಿ ಪರಿಪೂರ್ಣ ವ್ಯಕ್ತಿತ್ವದ ನಿರ್ಮಾಣದ ಒಂದು ಕೇಂದ್ರವಾಗಿದೆ.ಈ ದಿಸೆಯಲ್ಲಿ ಈ ಶಾಲಾ ವಾತಾವರಣವು ಪಟ್ಟಣದ ನಡುವಿನ ಹಳ್ಳಿಯ ಪರಿಸರದಲ್ಲಿರಬೇಕೆಂದು ಯೋಚಿಸಿ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.ಇಲ್ಲಿ ಕಲಿಯುವ ಮಗು ಹಳ್ಳಿಯ ಸೊಗಡಿನೊಂದಿಗೆ ನಗರದ ಆಧುನಿಕತೆಯನ್ನು ಮೈಗೂಡಿಸಿಕೊಳ್ಳಲು ಸಾಧ್ಯವಿದೆ.ಮೌಲ್ಯಾಧಾರಿತ ಶಿಕ್ಷಣವನ್ನು ಬದುಕಿನ ಆರಂಭದಲ್ಲಿ ನೀಡುವುದೊಂದೇ ನಮ್ಮ ತಾಯ್ನಾಡನ್ನು ಬಲಿಷ್ಠ ಭಾರತವನ್ನಾಗಿ ಕಟ್ಟಲು ಇರುವ ಪರಿಹಾರೋಪಾಯ ಎಂಬ ದೃಢ ನಂಬಿಕೆಯೊಂದಿಗೆ ಎವಿಜಿ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್, ಪುತ್ತೂರು ಈ ಶಾಲೆಯನ್ನು ನಡೆಸುವ ಸತ್ಕಾರ್ಯಕ್ಕೆ ಕೈಹಾಕಿದೆ.
ಶಾಲೆ ಎಲ್ಲಿದೆ?:
ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ, ಪುತ್ತೂರು ಬಸ್ ನಿಲ್ದಾಣದಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ಬನ್ನೂರಿನ ಕೃಷ್ಣನಗರ ಬಳಿಯ ಅಲುಂಬುಡದಲ್ಲಿದೆ.
ಎವಿಜಿಯ ದೂರದೃಷ್ಟಿ ರಾಷ್ಟ್ರ ಜಾಗೃತಿ, ಪರಿಸರ ಜಾಗೃತಿ ಮತ್ತು ಮಾನವೀಯತೆಯ ಜಾಗೃತಿಗಳ ಸಹಿತವಾದ ಮನೋಭಾವನೆಗಳೊಂದಿಗೆ ಪರಮೋಚ್ಚ ರಾಷ್ಟ್ರ ಚಿಂತನೆಯೊಂದಿಗೆ ಎಳೆಯರನ್ನು ಬೆಳೆಸುವುದಾಗಿದೆ.‘ರಾಷ್ಟ್ರ ಮೊದಲು’ ಎಂಬ ಮೌಲ್ಯವನ್ನು ಮಕ್ಕಳಲ್ಲಿ ಮತ್ತು ಸಮಾಜದಲ್ಲಿ ಬಿತ್ತುವುದಕ್ಕೆ ಇಲ್ಲಿ ಪ್ರಥಮ ಆದ್ಯತೆ.
ಎವಿಜಿ ಕಾರ್ಯವಿಧಾನ: ರಾಷ್ಟ್ರೀಯ ಮೌಲ್ಯಗಳನ್ನು ಉದ್ದೀಪಿಸುವ ಸಲುವಾಗಿ ಮಕ್ಕಳಿಗೆ ಮತ್ತು ಅವರ ಸಂಬಂಽತರಿಗೆ ವಿಪುಲ ಚಟುವಟಿಕೆಗಳ ಅವಕಾಶಗಳನ್ನು ಒದಗಿಸಿಕೊಟ್ಟು ಆ ಮೌಲ್ಯಗಳ ಪೋಷಣೆಯನ್ನು ಮಾಡುವುದು.ಅನ್ಯಾನ್ಯ ಕಾರ್ಯಚಟುವಟಿಕೆಗಳ ಮೂಲಕ ರಾಷ್ಟ್ರ ಭಕ್ತಿ ಪರಿಸರ ಪ್ರೇಮ ಮತ್ತು ಮಾನವೀಯತೆಯ ಜಾಗೃತಿಗಳನ್ನು ನೆಲೆಗೊಳಿಸುವುದು.ನಮ್ಮ ಮಹಾನ್ ಭಾರತದ ನೈಜ ಅಂತರಿಕ ನೋಟಗಳನ್ನು ಮಕ್ಕಳಿಗೆ ತಿಳಿಸಿ ಕೊಡುವುದಕ್ಕಾಗಿ ಸ್ಪರ್ಧೆ, ಕಾರ್ಯಾಗಾರ, ತರಬೇತಿಗಳನ್ನು ಆಯೋಜಿಸುವುದು,ದೈನಿಕವಾಗಿ ನಮ್ಮ ಭಾರತೀಯ ಸಂವಿಧಾನದ ಪೀಠಿಕೆಯನ್ನು ಪರಿಸುವುದು.
ಎವಿಜಿಯಿಂದೇನು ಲಭಿಸುತ್ತದೆ?:
ಕಳೆದ ಶೈಕ್ಷಣಿಕ ವರ್ಷದಿಂದ ಕರ್ನಾಟಕ ರಾಜ್ಯ ಪಠ್ಯಕ್ರಮದನ್ವಯ Pwh&HE, IHE ತರಗತಿಗಳು ಆರಂಭವಾಗಿದ್ದು ಈ 2024-25ನೇ ಶೈಕ್ಷಣಿಕ ವರ್ಷದಲ್ಲಿ 1ರಿಂದ 5ನೇ ತರಗತಿಗಳ ತನಕದ ಶಿಕ್ಷಣವನ್ನು ನೀಡಲಾಗುತ್ತದೆ.3 ವರ್ಷಗಳು ತುಂಬಿದ ಯಾವುದೇ ಮಗು ಇಲ್ಲಿ ದಾಖಲಾತಿಗೆ ಅರ್ಹವಿರುತ್ತದೆ.ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಗಮನದಲ್ಲಿರಿಸಿಕೊಂಡು ಬೋಧನೆಯನ್ನು ಮಾಡಲಾಗುತ್ತದೆ.ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವುದರ ಜೊತೆಗೆ ದೇಶದ ಆಸ್ತಿಗಳನ್ನಾಗಿ ರೂಪಿಸುವ ಇರಾದೆಯನ್ನು ಹೊಂದಲಾಗಿದೆ.ಮಕ್ಕಳಿಗೆ ಸಾಕಷ್ಟು ಬಗೆಯ ಪಠ್ಯೇತರ ಚಟುವಟಿಕೆಗಳ ಅವಕಾಶಗಳನ್ನು ನೀಡಲಾಗುತ್ತಿದೆ.ಅವರಿಗೆ ಸಂಸ್ಕೃತ ಶ್ಲೋಕಗಳು, ರಾಷ್ಟ್ರೀಯ ಗೀತೆಗಳು, ನಾಡಗೀತೆಗಳು ಇತ್ಯಾದಿಗಳ ಗಾಯನ, ಭಾರತೀಯ ಸಂವಿಧಾನದ ಪರಿಚಯ, ಸ್ಥಳೀಯ ಚರಿತ್ರೆ, ಭಾರತ ರಾಷ್ಟ್ರೀಯ ಚರಿತ್ರೆ, ಪ್ರಚಲಿತ ವಿದ್ಯಮಾನಗಳು, ಜನಪದೀಯ ಜ್ಞಾನ, ರೋಬೋಟಿಕ್ಸ್, ಡ್ರೋನ್, ಕೋಡಿಂಗ್, ನೈಮಿತ್ತಿಕ ಶಿಷ್ಟಾಚಾರಗಳು, ಕೃಷಿ, ತೋಟಗಾರಿಕೆ, ಆರೋಗ್ಯ ಮತ್ತು ನೈರ್ಮಲ್ಯ, ಶುದ್ಧ ಉಚ್ಚಾರಣೆ, ಸ್ವಚ್ಛ ಬರಹ, ಸ್ಪಷ್ಟ ಆಲಿಸುವಿಕೆ, ಸಮಸ್ಯೆಗಳನ್ನು ಬಿಡಿಸುವುದು, ಅಬಾಕಸ್, ವೇದ ಗಣಿತ, ಯಕ್ಷಗಾನ ಮುಂತಾದವುಗಳನ್ನು ಕಲಿಸುವುದು ವಿದ್ಯಾಸಂಸ್ಥೆಯ ಆದ್ಯತಾ ಪಟ್ಟಿಯಲ್ಲಿದೆ.
ಧ್ಯೇಯ: ಪ್ರತಿ ಮಗುವಿನ ಧನಾತ್ಮಕ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತು ಅವರ ಮೇಲೆ ವಿಶೇಷ ನಿಗಾ ವಹಿಸಿಕೊಂಡು ಸಂಸ್ಕೃತಿ, ರಾಷ್ಟ್ರೀಯ ಚಿಂತನೆಯನ್ನು ಬೆಳೆಸುವ ಶಿಕ್ಷಣ ನೀಡುವುದು ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಉದ್ದೇಶ.ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ ಸಂಸ್ಥೆ ವಿಶೇಷ ಆದ್ಯತೆಯನ್ನು ನೀಡುತ್ತಿದೆ.
ಏವಿಜಿ ವಿಶೇಷತೆಗಳು
ಶಿಶುಕೇಂದ್ರಿತ ಶಿಕ್ಷಣ ಗೆಲುವು ಸೋಲುಗಳನ್ನು ಸಮಾನವಾಗಿ ಸ್ವೀಕರಿಸಿ.ಮಕ್ಕಳು ಸಮಾಜದ ವಾಸ್ತವಿಕತೆಗೆ ಒಡ್ಡಿಕೊಳ್ಳುವಂತೆ ಮಾಡಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಪ್ರತಿ ಮಗುವಿಗೆ ಕರಿಹಲಗೆ ಬಳಸುವ ಅವಕಾಶ. ರಾಷ್ಟ್ರ ಭಕ್ತಿಯ ಮೌಲ್ಯಗಳನ್ನು ಪರಿಚಯಿಸುವುದು. ಭಾರತೀಯ ಸಂವಿಧಾನದ ಕುರಿತಾಗಿ ಸ್ಪಷ್ಟ ಜ್ಞಾನವನ್ನು ನೀಡುವುದು. ಪ್ರತಿ ಮಗುವಿನ ಬಗ್ಗೆ ವೈಯಕ್ತಿಕ ಗಮನ. ಮಗುವಿನ ಪ್ರಗತಿಯ ವರದಿಯನ್ನು ನೈಮಿತ್ತಿಕವಾಗಿ ನೀಡುವುದು. ಶಾಲೆಯಲ್ಲಿಯೇ ಮಕ್ಕಳಿಗೆ ಮತ್ತು ಸಿಬ್ಬಂದಿಗೆ ಶುಚಿ ರುಚಿಯಾದ ಸರಳ ಆಹಾರದ ವ್ಯವಸ್ಥೆ. ಪೋಷಕರು, ಹಿರಿಯರು ಮತ್ತು ಶಿಕ್ಷಕರನ್ನು ಗೌರವಿಸುವ ಶಿಷ್ಟಾಚಾರಗಳನ್ನು ಮಕ್ಕಳಿಗೆ ತಿಳಿಸಿ ಕೊಡುವುದು. ಒತ್ತಡ ರಹಿತ ಕಲಿಕೆ
ಯಾಕೆ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ನ್ನು ಆಯ್ಕೆ ಮಾಡಬೇಕು ?
ಈ ಪ್ರಶ್ನೆ ಸಹಜವಾದದ್ದೇ ಆಗಿದೆ. ಪ್ರತಿ ಮಗುವಿನ ಬಗ್ಗೆ ವೈಯಕ್ತಿಕ ಗಮನ ನೀಡುವುದರೊಂದಿಗೆ ಆ ಮಗುವಿನ ಸರ್ವತೋಮುಖ ಪ್ರಗತಿಯ ಖಾತ್ರಿಯನ್ನು ಎವಿಜಿ ನೀಡುತ್ತದೆ.ಪ್ರತಿ ಮಗುವನ್ನು ರಾಷ್ಟ್ರದ ಸಂಪತ್ತನ್ನಾಗಿ ಮಾಡುವ ಸಂಕಲ್ಪ ಹೊಂದಿದೆ