ಕುಕ್ಕೆರೆಬೆಟ್ಟು: ಚಲಿಸುತ್ತಿದ್ದ ಕಾರಿನ ಮೇಲೆ ಮರ, ವಿದ್ಯುತ್ ತಂತಿ ಬಿದ್ದು ಕಾರಿಗೆ ಹಾನಿ – ಇಬ್ಬರಿಗೆ ಗಾಯ

0

ವಿಟ್ಲ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಹಾಗೂ ವಿದ್ಯುತ್ ತಂತಿ ಬಿದ್ದು ಇಬ್ಬರು ಮಹಿಳೆಯರು ಗಾಯಗೊಂಡು, ಕಾರಿನಲ್ಲಿದ್ದವರ ಪೈಕಿ ಇತರ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಮಿತ್ತೂರು ಕುಕ್ಕರೆಬೆಟ್ಟು ಎಂಬಲ್ಲಿ ನಡೆದಿದೆ.

ಮಂಗಳೂರು ಮೂಲದ ನಾಲ್ವರು ಪ್ರಯಾಣಿಕರು ಕಾರಿನಲ್ಲಿ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ ಕಾರು ಕುಕ್ಕೆರೆಬೆಟ್ಟು ಸಮೀಪಿಸುತ್ತಿದ್ದಂತೆ ಗಾಳಿ ಮಳೆ ಆರಂಭವಾಗಿದ್ದು, ಈ ವೇಳೆ ಹೆದ್ದಾರಿಯ ಬದಿಯಲ್ಲಿದ್ದ ಮರ ಕಾರಿನ ಮೇಲೆ ವಿದ್ಯುತ್ ತಂತಿ ಸಹಿತ ಉರುಳಿ ಬಿದ್ದಿದೆ. ಇದನ್ನು ಕಂಡ ಸಾರ್ವಜನಿಕರು ಸ್ಥಳಕ್ಕಾಗಮಿಸಿದ ಕಾರಿನಲ್ಲಿದ್ದವರನ್ನು‌ ಹೊರತೆಗೆದು, ಘಟನೆಯಿಂದಾಗಿ ಗಾಯಗೊಂಡವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ‌ ದಾಖಲು ಮಾಡಿದ್ದಾರೆ. ಘಟನೆಯಿಂದಾಗಿ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ.

LEAVE A REPLY

Please enter your comment!
Please enter your name here