ನೈರುತ್ಯ ಪದವೀಧರ ,ಶಿಕ್ಷಕರ ಚುನಾವಣೆ: ಬಿಜೆಪಿ ಶಕ್ತಿ ಕೇಂದ್ರ, ಘಟ ನಾಯಕರುಗಳ ಸಭೆ

0

ಚುನಾವಣೆಯಲ್ಲಿ ನಮ್ಮದೆ ಗೆಲುವು – ಪ್ರತಾಪ್ ಸಿಂಹ ನಾಯಕ್

ಪುತ್ತೂರು: ನೈರುತ್ಯ ಪದವೀಧರ ಮತ್ತು ಶಿಕ್ಷಕರ ಚುನಾವಣೆಯಲ್ಲಿ ನಮ್ಮದೆ ಗೆಲುವಾಗಲಿದೆ ಎಂದು ಶಿಕ್ಷಕರ ಕ್ಷೇತ್ರದ ಬಿಜೆಪಿ ಜಿಲ್ಲಾ ಸಂಚಾಲಕ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.


ಪುತ್ತೂರು ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ಅವರು ಮೇ 29ರಂದು ನೈರುತ್ಯ ಪದವೀಧರ ಮತ್ತು ಶಿಕ್ಷಕರ ಚುನಾವಣೆಗೆ ಸಂಬಂಧಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಕ್ತಿ ಕೇಂದ್ರಗಳ ಮತ್ತು ಘಟ ನಾಯಕರುಗಳ ಸಭೆಯಲ್ಲಿ ಅವರು ಮಾತನಾಡಿದರು.

ಮತದಾರರನ್ನು ಸಂಪರ್ಕಿಸುವ ಕೆಲಸ ಈಗಾಗಲೆ ತಿಳಿಸಿದಂತೆ ಪಟ್ಟಿಯಲ್ಲಿರುವ 25 ಜನರನ್ನು ಸಂಪರ್ಕಿಸಬೇಕು. ರಾಜ್ಯ ನಾಯಕರು ಕೂಡಾ ಆಡಿಯೋ ಕಾನ್ಪರೆನ್ಸ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯವರನ್ನು ಮಾತ್ರ ಕರೆದಿದ್ದರು. ನಮ್ಮಲ್ಲಿ ಸಂಪರ್ಕ ನಿಧಾನವಾಗಿದೆ ಎಂದು ಅವರು ಶೂಚ್ಯವಾಗಿ ತಿಳಿಸಿದ್ದಾರೆ. ಶಿಕ್ಷಕರ ಕ್ಷೇತ್ರದ ದೃಷ್ಟಿಯಲ್ಲಿ ಗೊಂದಲವಿಲ್ಲ. ಗೊಂದಲ ಇರುವುದು ಪದವಿದರ ಕ್ಷೇತ್ರದಲ್ಲಿ. ಪ್ರತಿ ಬಾರಿ ಎರ್ನೋಲ್ ಮೆಂಟ್ ಆಗ್ತಾ ಇದೆ. ಈ ಬಾರಿ ಕಳೆದ ಬಾರಿಗಿಂತ 2700 ಮಂದಿಯನ್ನು ಸೇರಿಸಿದ್ದೇವೆ.‌ ಅವರಿಗೆ ಮತದಾನ‌ದ ಪ್ರಕ್ರಿಯೆ ಕುರಿತು ತಿಳಿಸಬೇಕು. ಮತದಾನಕ್ಕೆ ಇವಿಯಂ ಇರುವುದಿಲ್ಲ. ಶಿಕ್ಷಕರ ಮತ್ತು‌ ಪದವೀಧರ ಕ್ಷೇತ್ರದ ಬೂತ್ ಪ್ರತ್ಯೇಕ ಇರುತ್ತದೆ. ಬೇರೆ ಬೇರೆ ಮತ ಪತ್ರ ಕೊಡುತ್ತಾರೆ ಎಂದ ಅವರು ಮತದಾನ ಬೆಳಿಗ್ಗೆ ಗಂಟೆ 8 ರಿಂದ ಸಂಜೆ ಗಂಟೆ 4 ರ ತನಕ ಮಾತ್ರ ಇರುತ್ತದೆ. ಇದನ್ನು ಮತದಾರರಿಗೆ ತಿಳಿಸುವ ಕೆಲಸ ಆಗಬೇಕೆಂದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವೀಧರ ಕ್ಷೇತ್ರದ ಚುನಾವಣಾ ಸಂಚಾಲಕ ಹರೀಶ್ ಪೂಂಜಾ, ಮಾಜಿ ಶಾಸಕ ಸಂಜೀವ ಮಠಂದೂರು, ವಿಕಾಸ್ ಪುತ್ತೂರು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ ಜಿ‌ ಜಗನ್ನಿವಾಸ ರಾವ್, ಅರುಣ್ ಕುಮಾರ್ ಪುತ್ತಿಲ, ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here