ಕುಮಾರಮಂಗಲ :ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

0

ಪುತ್ತೂರು:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಮಾರಮಂಗಲ ಮತ್ತು ಹಿರಿಯ ವಿದ್ಯಾರ್ಥಿ ಸಂಘ ಕುಮಾರಮಂಗಲ ಇದರ ಆಶ್ರಯದಲ್ಲಿ 3 ದಿನಗಳ ಕಾಲ ನಡೆದ ಬೇಸಿಗೆ ಶಿಬಿರದ‌ ಸಮರೋಪ ಸಮಾರಂಭ‌ ಮೇ.28 ರಂದು ಜರಗಿತು.

ಮುಖ್ಯ ಅತಿಥಿ ಅಕ್ರಮ-ಸಕ್ರಮ ಸಮಿತಿಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಮಾಜಿ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ ಮಕ್ಕಳಿಗೆ ಬೇಸಿಗೆ ಶಿಬಿರ ಬಹಳ ಅಗತ್ಯವಾಗಿದ್ದು, ಆ ಮೂಲಕ ಮಕ್ಕಳಲ್ಲಿ ಪ್ರತಿಭೆ ಜ್ಞಾನ ಬೆಳೆಯಲು ಸಾಧ್ಯವಿದೆ. ಪೋಷಕರು ಇದಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಎಂದರು.

ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಿ ಜಗನ್ನಾಥ ರೈ ಮಾತನಾಡಿ ಬಾಲ್ಯ ಜೀವನ ಎನ್ನುವಂತದ್ದು ಅತ್ಯಂತ ಖುಷಿಕೊಡುವ ದಿನಗಳು ಮಕ್ಕಳನ್ನು ಇಂತಹ ಶಿಬಿರಗಳಲ್ಲಿ ತೊಡಗಿಸಿಕೊಂಡಾಗ ಅದರಲ್ಲಿ ಇರುವಂತಹ ಪ್ರತಿಭೆಯನ್ನು ಹೊರ ತರಲು ಸಾಧ್ಯವಿದೆ. ಇಂತಹ ಕಾರ್ಯಕ್ರಮವನ್ನು ಅಯೋಜಿಸಿರುವಂತಹ ಹಿರಿಯ ವಿದ್ಯಾರ್ಥಿ ಸಂಘವನ್ನು ಪ್ರಶಂಸಿಸಿದರು.

ಅಧ್ಯಕ್ಷತೆ ವಹಿಸಿದ್ದ ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಮಾತನಾಡಿ ತೀರ ಗ್ರಾಮೀಣ ಪ್ರದೇಶದ ಶಾಲೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನವನ್ನು ಹಿರಿಯ ವಿದ್ಯಾರ್ಥಿ ಸಂಘ ಮಾಡುತ್ತಿದ್ದು,ಇದಕ್ಕೆ ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಪ್ರಾಯೋಜಕರಾಗಿ ಸಹಕರಿಸಿದ ಉಮೇಶ್ ಸವಣೂರು ಬೇರಿಕೆ,ಬಾಳಪ್ಪ ಪೂಜಾರಿ ಬಂಬಿಲ,ಶ್ರೀ ವಿಶ್ವನಾಥ ಕನ್ಯಾಮಂಗಲರವನ್ನು ಸಮ್ಮಾನಿಸಲಾಯಿತು.

ಅಶ್ವಿನಿ ಮಯ್ಯ, ವಿಜಯ ಕುಮಾರಮಂಗಲ ,ಚೆನ್ನಪ್ಪ ಗೌಡ ಬುಡನಡ್ಕ, ಮಹೇಶ್ ಕೆ ಸವಣೂರು, ಸುಂದರ ಕನ್ಯಾಮಂಗಲ, ಹೇಮಲತಾ ಕುಮಾರಮಂಗಲ, ಶೇಷಮ್ಮ ಗಂಗಾಧರ ಕನ್ಯಾಮಂಗಲ, ರೇಖಾ ಜಯಪ್ರಕಾಶ್, ವೇದಾವತಿ ಗಿರೀಶ್, ಸಾವಿತ್ರಿ ನಾಗೇಶ್ ಕುಮಾರಮಂಗಲ, ಉದಯ, ವೇದಾವತಿ ನಾರಾಯಣ, ಸ್ಮಿತಾ ಬಲ್ನಾಡು, ಮಮತ ಅವಿನಾಶ್, ನವೀನ್ ನೂಜಾಜೆ, ರವಿ ಕನ್ಯಾಮಂಗಲ, ಶ್ಯಾಮಲ, ಸುಪ್ರಿಯಾ, ಸರಿತಾ, ಅಕ್ಕು, ರಂಜಿತ್, ಆನಂದ ಶೆಟ್ಟಿ ನೆಕ್ರಾಜೆ, ಪುಟ್ಟಣ್ಣ ಮಡಿವಾಳ, ತೃಪ್ತಿ ರಾಮಕೃಷ್ಣ ಕನ್ಯಾಮಂಗಲ, ವಿಶ್ವನಾಥ ಕುಮಾರಮಂಗಲ, ಯೋಗೀಶ್ ಕುಮಾರಮಂಗಲ, ಕವಿತಾ, ಯಶೋಧ ನೂಜಾಜೆ, ಲೋಕೇಶ್ ಕನ್ಯಾಮಂಗಲ, ರಾಜೇಶ್ವರಿ ಕನ್ಯಾಮಂಗಲ, ದಿನೇಶ್ ನೆಲ್ಲಿ ರವರನ್ನು ಗೌರವಿಸಲಾಯಿತು.


ಬೇಸಿಗೆ ಶಿಬಿರದ ಶಿಬಿರಾರ್ಥಿ ಪೈಕಿ ಶಾಮ,ರಶ್ಮಿ,ಪ್ರತ್ಯಾಯಿ, ಅನುಭವವನ್ನು ಹಂಚಿಕೊಂಡರು. ವೇದಿಕೆಯಲ್ಲಿ ಬ್ಯಾಂಕ್ ಆಫ ಬರೋಡ ಇದರ ನಿವೃತ್ತ ಅಧಿಕಾರಿ ಪಿ.ಡಿ ಕೃಷ್ಣ ಕುಮಾರ್ ರೈ ದೇವಸ್ಯ, ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರನಾಥ ಕಾಯರ್ಗ,ಸವಣೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಇಂದಿರಾ ಬಿ ಕೆ,ಸವಣೂರು, ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ,ಎಪಿಎಂಸಿ ಮಾಜಿ ಸದಸ್ಯ ಸೋಮನಾಥ ಡಿ ಕನ್ಯಾಮಂಗಲ,ಪುತ್ತೂರು ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ವಿಜಯ್ ಕುಮಾರ್ ಕನ್ಯಾಮಂಗಲ,ಸವಣೂರು ಗ್ರಾ.ಪಂ ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ,ಗಿರಿಶಂಕರ ಸುಲಾಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಸುಂದರ ಕನ್ಯಾಮಂಗಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನ್ಯಾಯಾವಾದಿ ಮಹೇಶ್ ಕೆ ಸವಣೂರು ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು.ಶಾಲೆಯ ಮುಖ್ಯ ಶಿಕ್ಷಕಿ ಕವಿತಾ ಎನ್ ಶಿಬಿರಾರ್ಥಿಗಳ ಹೆಸರನ್ನು ಯಾಚಿಸಿದರು. ಉಮೇಶ್ ಸವಣೂರು ಬೇರಿಕೆ ವಂದಿಸಿದರು. ರಾಜೇಶ್ವರಿ ಕನ್ಯಾಮಂಗಲ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 104 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here