ನಿಡ್ಪಳ್ಳಿ: ಮರದ ಗೆಲ್ಲು ಬಿದ್ದು ವಿದ್ಯುತ್ ಕಂಬ ತಂತಿಗೆ ಹಾನಿ

0

ನಿಡ್ಪಳ್ಳಿ: ಇಲ್ಲಿಯ ಕುಕ್ಕುಪುಣಿ ಹಾಲು ಸೊಸೈಟಿ ಬಳಿ ಮರದ ಗೆಲ್ಲು ವಿದ್ಯುತ್ ಲೈನಿಗೆ ಬಿದ್ದು ತಂತಿಗಳು ತುಂಡಾಗಿ ಕಂಬಕ್ಕೂ ಹಾನಿಯಾದ ಘಟನೆ ಮೆ.29ರಂದು ಮಧ್ಯಾಹ್ನ ಸಂಭವಿಸಿದೆ.

ಮಧ್ಯಾಹ್ನ ಬೀಸಿದ ದೊಡ್ಡ ಗಾಳಿ ಮಳೆಗೆ  ಅಕೇಶಿಯ ಮರದ ಗೆಲ್ಲು ತುಂಡಾಗಿ ತಂತಿ ಮೇಲೆ ಬಿದ್ದ ಪರಿಣಾಮ ತಂತಿಗಳು ತುಂಡಾಗಿ ಬಿದ್ದಿದ್ದು ಕಂಬಕ್ಕೂ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಆ ವ್ಯಾಪ್ತಿಯ ಸುಮಾರು ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. 

LEAVE A REPLY

Please enter your comment!
Please enter your name here