ಅಧ್ಯಕ್ಷರಾಗಿ ಅಜ್ಮಲ್ ಉಜಿರೆ, ಪ್ರ.ಕಾರ್ಯದರ್ಶಿಯಾಗಿ ಸವಾದ್ ವಿಟ್ಲ, ಕೋಶಾಧಿಕಾರಿ ಶಾಮಿಲ್ ಕಾವು
ಪುತ್ತೂರು: ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿಯ ವಿದ್ಯಾರ್ಥಿ ಸಂಘಟನೆಯಾದ ನೂರುಲ್ ಹುದಾ ಸ್ಟೂಡೆಂಟ್ಸ್ ಯೂನಿಯನ್ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನೂರುಲ್ ಹುದಾ ಕ್ಯಾಂಪಸ್ನಲ್ಲಿ ನಡೆಯಿತು.
ಸಂಸ್ಥೆಯ ಉಪಪ್ರಾಂಶುಪಾಲರಾದ ಬರ್ಹಾನ್ ಅಲಿ ತುಂಙಳ್ ದುವಾಶೀರ್ವಚನೆಗೈದರು. ಪ್ರಾಂಶುಪಾಲರಾದ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಎನ್.ಎಸ್.ಯು ಉಸ್ತುವಾರಿ ರಾಶೀದ್ ಹುದವಿ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಅಜ್ಮಲ್ ಉಜಿರೆ, ಪ್ರಧಾನ ಕಾರ್ಯದರ್ಶಿಯಾಗಿ ಸವಾದ್ ವಿಟ್ಲ ಮತ್ತು ಕೋಶಾಧಿಕಾರಿಯಾಗಿ ಶಾಮಿಲ್ ಕಾವುರವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ರಿಜ್ವಾನ್ ಪಡೀಲ್, ವರ್ಕಿಂಕ್ ಕಾರ್ಯದರ್ಶಿಯಾಗಿ ಅಶ್ಫಾಖ್ ಮಾಸ್ತಿಕುಂಡ್, ಜೊತೆ ಕಾರ್ಯದರ್ಶಿಯಾಗಿ ಆಫ್ರೀದ್, ಹಣಕಾಸು ಕಾರ್ಯದರ್ಶಿಯಾಗಿ ಜಾಫರ್ ಕೊಡಗು, ಸಂಘಟನಾ ಕಾರ್ಯದರ್ಶಿಯಾಗಿ ನಿಜಾಮ್ ಪಾಲ್ತಾಡ್ ಹಾಗೂ ಪಿಆರ್ಒ ಆಗಿ ಮುದಸ್ಸಿರ್ ಸರವೂ ಅವರನ್ನು ಆಯ್ಕೆ ಮಾಡಲಾಯಿತು.
ಅಲ್ಲದೆ ಸಂಘಟನೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ವಿವಿಧ ಉಪಸಮಿತಿಗಳ ಚೇರ್ಮೆನ್ಗಳನ್ನು ಇದೇ ವೇಳೆ ಆಯ್ಕೆ ಮಾಡಲಾಯಿತು. ಹೆಚ್.ಆರ್.ಡಿಗೆ ವಸೀಮ್ ಕಾಸರಗೋಡು, ಇಂಟೆಲ್ ಜೆನ್ಷಿಯ ಸಮಿತಿಗೆ ಸಫ್ವಾನ್ ಪಾರಪಲ್ಲಿ, ಉರ್ದು ಸಮಿತಿಗೆ ಜಮೀಲ್ ಬನ್ನೂರು, ಕನ್ನಡ ಸಾಹಿತ್ಯ ಸಂಘಕ್ಕೆ ತಮೀಮ್ ಪರ್ಲಡ್ಕ, ಅರೇಬಿಕ್ ವಿಂಗ್ಗೆ ಇಸಾಕ್ ದೇಲಂಪಾಡಿ, ಇಂಗ್ಲಿಷ್ ವಿಂಗ್ಗೆ ಸುಹೂದ್ ಗಡಿಯಾರ, ವೈದ್ಯಕೀಯ ಸಮಿತಿಗೆ ಹಿಶಾಮ್ ಕೊಡಗು, ಓಬಿ ಸಮಿತಿಗೆ ಮಿದ್ಲಾಜ್ ಮಾಡನ್ನೂರು, ಎಸ್.ಕೆ.ಎಸ್.ಎಸ್.ಎಫ್ ತ್ವಲಬಾ ಸಮಿತಿಗೆ ಶಮಿ ಉಪ್ಪಿನಂಗಡಿ, ಸ್ಪೀಕರ್ ಫೋರಂಗೆ ಶಬೀರ್ ಈಶ್ವರಮಂಗಲ, ಮೀಡಿಯಾ ವಿಂಗ್ಗೆ ಸಲೀಂ ಮಾಣಿ, ಪಬ್ಲಿಷಿಂಗ್ ಬ್ಯೂರೋಗೆ ಸ್ವಾಲಿಹ್ ಗಡಿಯಾರ, ಸ್ಟೂಡೆಂಟ್ಸ್ ಕೌನ್ಸಿಲ್ಗೆ ಆಸಿಂ ಗಾಳಿಮುಖರನ್ನು ಆಯ್ಕೆ ಮಾಡಲಾಯಿತು. ಮೀಡಿಯಾ ವಿಂಗ್ ಇಂಚಾರ್ಜ್ ಆಗಿ ಬದ್ರು ಮೂಡಿಗೆರೆಯನ್ನು ನೇಮಿಸಲಾಯಿತು.