ಕಡಬ: ಕಡಬ ಗ್ರಾಮದ ಪಿಜಕ್ಕಳ ಆರಿಗ ಕಂಗುಳೆ ನಿವಾಸಿ ನಿವೃತ್ತ ಶಿಕ್ಷಕ ದಿ.ಕುಶಾಲಪ್ಪ ಗೌಡರವರ ಪತ್ನಿ ತಂಗಮ್ಮ (78ವ.)ರವರು ಅಲ್ಪಕಾಲದ ಅಸೌಖ್ಯದಿಂದ ಜೂ.9ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಕಡಬ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದಯಾನಂದ ಗೌಡ, ಪಿಜಕ್ಕಳ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಸದಾನಂದ ಗೌಡ ಹಾಗೂ ಪುತ್ರಿಯರಾದ ಶೋಭಾವತಿ, ವಿಜಯಲಕ್ಷ್ಮೀ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.