ಭಾರತ್ ಸಿನೆಮಾಸ್‌ನಲ್ಲಿ ಅದ್ದೂರಿ ತಾರಾಗಣದ ‘ತುಡರ್’ ತುಳು ಸಿನೆಮಾದ ಪ್ರೀಮಿಯರ್ ಶೋ-ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ

0

ಪುತ್ತೂರು: ತುಳು ಚಿತ್ರರಂಗದಲ್ಲಿಯೇ ಸಿನಿಪ್ರೇಕ್ಷಕರ ಮನಸೂರೆಗೊಂಡ ಸಿನೆಮಾ, ಸ್ಯಾಂಡಲ್‌ವುಡ್, ಕಾಲಿವುಡ್, ಬಾಲಿವುಡ್ ಸಿನೆಮಾಗಳಂತೆ ಅದ್ದೂರಿತನದಲ್ಲಿ ನಿರ್ಮಾಣಗೊಂಡ ರಿಚ್ ಮಾಸ್ ಸಿನೆಮಾ, ತುಳು ಚಿತ್ರರಂಗದ ಬಹು ನಿರೀಕ್ಷೆಯ, ಸಾಮಾಜಿಕ, ಸಾಂಸಾರಿಕ, ಸಸ್ಪೆನ್ಸ್ ಹಾಗೂ ಅದ್ದೂರಿ ತಾರಾಗಣದ ಮಾಸ್ ಸಿನೆಮಾ “ತುಡರ್” ಚಿತ್ರದ ಪ್ ರಂದು ಪುತ್ತೂರಿನ ಜಿ.ಎಲ್.ವನ್ ಮಾಲ್‌ನಲ್ಲಿನ ಭಾರತ್ ಸಿನೆಮಾಸ್‌ನಲ್ಲಿ ಏಕಕಾಲದಲ್ಲಿ ಎರಡು ಶೋ ಪ್ರದರ್ಶನಗೊಂಡಿದ್ದು, ಹೌಸ್‌ಫುಲ್ ಪ್ರದರ್ಶನದ ಸಿನಿಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಸುಮುಖ ಪ್ರೊಡಕ್ಷನ್‌ರವರ ಚೊಚ್ಚಲ ಚಿತ್ರ ಇದಾಗಿದ್ದು ‘ದ ಫೈರ್ ವಿಥ್ ಇನ್’ ಟ್ಯಾಗ್‌ಲೈನ್ ಹೊಂದಿರುವ ಈ ಚಿತ್ರದ ತಾರಾಗಣದಲ್ಲಿ ನಾಯಕ ನಟ ಸಿದ್ಧಾರ್ಥ್ ಶೆಟ್ಟಿ, ನಾಯಕ ನಟಿ ದೀಕ್ಷಾ ಭೀಷೆ, ತುಳುನಾಡಿನ ಮಾಣಿಕ್ಯ ಅರವಿಂದ್ ಬೋಳಾರ್, ಪ್ರಜ್ವಲ್ ಬಂಬ್ರಾಣ, ಹರ್ಷಿತಾ ಶೆಟ್ಟಿ, ಅನ್ವಿತ ಸಾಗರ್, ಸದಾಶಿವ ಅಮೀನ್, ಮೈತಿದಿ ಖ್ಯಾತಿಯ ರೂಪಾ ವರ್ಕಾಡಿ, ನಮಿತಾ ಕೂಳೂರು, ಉಮೇಶ್ ಮಿಜಾರ್, ಅಶೋಕ್ ಬಿ.ರವರು ತಮ್ಮ ನೈಜ ಅಭಿನಯದಲ್ಲಿ ತಮ್ಮ ಪಾತ್ರಕ್ಕೆ ಜೀವ ಜೀವ ತುಂಬಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದಿರುವ ಮೋಹನ್‌ರಾಜ್‌ರವರಿಂದ ತ್ರಿಮೂರ್ತಿ ಪಾತ್ರಗಳ ಮನರಂಜನೆ, ತುಳುನಾಡಿನ ಮಾಣಿಕ್ಯ ಅರವಿಂದ ಬೋಳಾರ್‌ರವರ ಹಾಸ್ಯ, ನವಿರಾದ ಚಿತ್ರಕಥೆ, ಇಡೀ ಚಿತ್ರವನ್ನು ಪ್ರೇಕ್ಷಕರನ್ನು ಹಿಡಿದಿಟ್ಟುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಚಿತ್ರಕ್ಕೆ ಎಲ್ಟನ್ ಮಸ್ಕರೇನ್ಹಸ್ ಹಾಗೂ ತೇಜೇಶ್ ಪೂಜಾರಿಯವರ ನಿರ್ದೇಶನವಿದ್ದು, ವಿಲ್ಸನ್ ರೆಬೆಲ್ಲೋ ನಿರ್ಮಾಪಕ, ಹರೀಶ್ ಶೆಟ್ಟಿ, ವಿದ್ಯಾ ಸಂಪತ್ ಸಹ ನಿರ್ಮಾಪಕರಾಗಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ.


ಕುಟುಂಬ ಸಮೇತರಾಗಿ ನೋಡುವ ಚಿತ್ರ-ಸವಣೂರು ಸೀತಾರಾಮ ರೈ:
ತುಡರ್ ತುಳು ಸಿನೆಮಾದ ಪ್ರೀಮಿಯರ್ ಶೋದ ಉದ್ಘಾಟನೆಯನ್ನು ದೀಪ ಬೆಳಗಿಸಿ ನೆರವೇರಿಸಿ ಮಾತನಾಡಿದ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರುರವರು, ತುಡರ್ ಸಿನೆಮಾ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಬಿಡುಗಡೆಯಾಗುತ್ತಿದ್ದು ಮಾತ್ರವಲ್ಲ ಈ ಸಿನೆಮಾ ವಿದೇಶದಲ್ಲೂ ಬಿಡುಗಡೆಯಾಗಿದೆ. ಈ ಚಿತ್ರತಂಡದಲ್ಲಿ ಒಳ್ಳೆಯ ತಂತ್ರಜ್ಞರಿದ್ದು, ಕುಟುಂಬಸಮೇತರಾಗಿ ನೋಡುವ ಚಿತ್ರ ಇದಾಗಿದ್ದು ಸಿನಿರಸಿಕರು ಚಿತ್ರವನ್ನು ಯಶಸ್ವಿಗೊಳಿಸಬೇಕು ಎಂದರು.


ಈ ಸಂದರ್ಭದಲ್ಲಿ ಜಿ.ಎಲ್ ಆಚಾರ್ಯ ಸಂಸ್ಥೆಯ ಸುಧನ್ವ ಆಚಾರ್ಯ, ಉದ್ಯಮಿ ಸಹಜ್ ಜೆ.ರೈ ಬಳೆಜ್ಜ, ಎಸ್‌ಆರ್‌ಕೆ ಲ್ಯಾಡರ‍್ಸ್‌ನ ಕೇಶವ್, ಯುವ ಬಂಟರ ಸಂಘದ ಅಧ್ಯಕ್ಷ ಡಾ|ಹರ್ಷಕುಮಾರ್ ರೈ ಮಾಡಾವು, ತಾಲೂಕು ತುಳು ಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನ್ಹಸ್, ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ದುರ್ಗಾಪ್ರಸಾದ್ ರೈ ಕುಂಬ್ರ, ಲಯನ್ಸ್ ಕ್ಲಬ್ ಪುತ್ತೂರ‍್ದ ಮುತ್ತು ಸ್ಥಾಪಕಾಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ತುಡರ್ ಚಿತ್ರತಂಡ ಸಹಿತ ಹಲವರು ಉಪಸ್ಥಿತರಿದ್ದರು.


ರೋಟರಿ ಕ್ಲಬ್ ಪುತ್ತೂರು ಸಿಟಿ ನೇತೃತ್ವದಲ್ಲಿ ಪುತ್ತೂರಿನ ಎಂಟು ರೋಟರಿ ಕ್ಲಬ್‌ಗಳಾದ ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಎಲೈಟ್, ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಕ್ಲಬ್, ಪುತ್ತೂರು ಜೇಸಿಐ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಯುವ ಬಂಟರ ಸಂಘ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರ‍್ದ ಮುತ್ತು, ಪುತ್ತೂರು ತುಳು ಕೂಟರವರ ಸಹಭಾಗಿತ್ವದಲ್ಲಿ ಚಿತ್ರದ ಪ್ರೀಮಿಯರ್ ಶೋ ಯಶಸ್ವಿ ಪ್ರದರ್ಶನವನ್ನು ಕಂಡಿದೆ. ಮಧು ಮಾಯಿಲಂಗ್‌ಕೋಡಿ ಕಾರ್ಯಕ್ರಮ ನಿರೂಪಿಸಿದರು.


ಕುತೂಹಲ ಮೂಡಿಸಿರುವ ಸಿನೆಮಾ:
ತುಳು ಚಿತ್ರರಂಗದಲ್ಲಿ ಬಹಳಷ್ಟು ಕುತೂಹಲ ಮೂಡಿಸಿರುವ ತುಳು ಚಿತ್ರ “ತುಡರ್” ಇದರ ಪ್ರೀಮಿಯರ್ ದುಬೈ, ಅಬುಧಾಬಿ, ಕತಾರ್‌ನಲ್ಲಿ ಯಶಸ್ವಿಯಾಗಿ ನೆರವೇರಿಸಿದ್ದು ಚಿತ್ರದ ಬಗ್ಗೆ ಉತ್ತಮ ಸ್ಪಂದನೆ ದೊರಕಿದೆ. ಇದೀಗ ಈ ಚಿತ್ರ ಕರುನಾಡಿನಾದ್ಯಂತ ಜೂ.14 ರಂದು ಬಿಡುಗಡೆಗೊಳ್ಳುತ್ತಿದ್ದು, ತುಳು ಚಿತ್ರಪ್ರೇಮಿಗಳಿಗೆ ಸಿಹಿ ಸುದ್ದಿಯಾಗಿದ್ದು ಕಿವಿಗಿಂಪಾಗಿಸುವ ಹಾಡುಗಳು, ಭಾವನೆಗಳು, ಆಕ್ಷನ್, ಹಾಸ್ಯ ಮತ್ತು ಗಂಭೀರತೆ ಒಳಗೊಂಡ ಸಂಪೂರ್ಣ ಪ್ಯಾಕೇಜ್‌ವುಳ್ಳ ತುಳು ಮಾಸ್ ಸಿನೆಮಾ ‘ತುಡರ್’ ಪ್ರೇಕ್ಷಕರು ತಮ್ಮ ಕುಟುಂಬಸಮೇತವಾಗಿ ವೀಕ್ಷಿಸಿ ತುಳು ಚಿತ್ರರಂಗವನ್ನು ಬೆಳೆಸಬೇಕು ಎಂದು ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here