ಕುಮಾರಮಂಗಲ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಸವಣೂರು: ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಹಿ.ಪ್ರಾ.ಶಾಲೆ ಮತ್ತು ಹಿರಿಯ ವಿದ್ಯಾರ್ಥಿ ಸಂಘ ಕುಮಾರಮಂಗಲ ಇದರ ಆಶ್ರಯದಲ್ಲಿ ವಿಶ್ವಪರಿಸರ ದಿನಾಚರಣೆಯು ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರರಾದ ಬಾಳಪ್ಪ ಪೂಜಾರಿ ಬಂಬಲದೋಳ ಗಿಡ ನೆಡುವುದರ ಮೂಲಕ ಉದ್ಘಾಟಿಸಿ  ಮಾತನಾಡಿ, ನಾವು  ನಮ್ಮ ಪರಿಸರದ ಸುತ್ತಮುತ್ತ ಮರಗಳನ್ನು ಬೆಳೆಸಿ ಪ್ರಕೃತಿಯನ್ನು ಉಳಿಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು ಆಗ ಮಾತ್ರ ನಮಗೆ ನೆಮ್ಮದಿಯ ಬದುಕು ನಡೆಸಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನ್ಯಾಯವಾದಿ ಮಹೇಶ್ ಕೆ ಸವಣೂರು ಮಾತನಾಡಿ, ಪರಿಸರ ಉಳಿಸುವ ಪ್ರತಿಮನೆ-ಮನದಲ್ಲಿ  ಮೂಡಿಸುವ ಜೊತೆಗೆ ಹುಟ್ಟುಹಬ್ಬ ಇನ್ನಿತರ ಕಾರ್ಯಕ್ರಮಗಳಲ್ಲಿ  ನಮ್ಮ ನಮ್ಮ ಮನೆಯಲ್ಲಿರುವ ಸಸಿಯನ್ನು  ನೆಟ್ಟು ಬೆಳೆಸುವ ಪ್ರಯತ್ನನ್ನು  ನಡೆಯಬೇಕು ಆಗ ಮಾತ್ರ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಯಲು  ಕಾರಣವಾಗಬಹುದು ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕರಾದ ಸಂತೋಷ್ ಕೆ  ಮಾತನಾಡಿ, ನಮ್ಮ ಮುಂದಿನ ಪೀಳಿಗೆಯು ಆರೋಗ್ಯಕರವಾಗಿರಲು ಪರಿಸರವನ್ನು  ಉಳಿಸುವ ಕಾರ್ಯವು ನಮ್ಮಿಂದವಾಗಬೇಕು. ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಪ್ರತಿಯೊಬ್ಬರು ಗಿಡವನ್ನು ನೆಟ್ಟು ಪರಿಸರದ ಸಮತೋಲನವನ್ನು  ಕಾಪಾಡಬೇಕು ಎಂದರು. 

ಈ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಾಡಿಸಿದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸುಂದರ ಕೆ  ಹಿರಿಯ ವಿದ್ಯಾರ್ಥಿ ಸಂಘ ಉಪಾಧ್ಯಕ್ಷರಾದ ರಾಮಕೃಷ್ಣ ವಿ ಯು ಕನ್ಯಾಮಂಗಲ ಜೊತೆ ಕಾರ್ಯದರ್ಶಿ ಉಮೇಶ ಬೇರಿಕೆ ಸವಣೂರು,ಕೋಶಾಧಿಕಾರಿ  ಪುಟ್ಟಣ್ಣ ಮಡಿವಾಳ ಬಂಬಿಲ ,ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಹೇಮಲತಾ, ಸದಸ್ಯರಾದ ರೇಖಾ, ಲೀಲಾವತಿ, ಉಮೇಶ, ವಿಶ್ವನಾಥ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯ ಲೋಕೇಶ್ ಕನ್ಯಾಮಂಗಲ, ಅಂಗನವಾಡಿ ಕಾರ್ಯಕರ್ತೆ ಜಾನಕಿ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ಕವಿತಾ ಪಿ  ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನಾಡಿದರು. ಗೌರವ ಶಿಕ್ಷಕ ಬಹುಮಾನ ಪಟ್ಟಿ ಓದಿದರು. ಗೌರವ ಶಿಕ್ಷಕಿ ರಾಜೇಶ್ವರಿ ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here