ಪುತ್ತೂರು: ಚಿಕ್ಕಪುತ್ತೂರು ರೈಲ್ವೆ ನಿಲ್ದಾಣ ನಿವಾಸಿ ಚಿಕ್ಕಪುತ್ತೂರು ಹಸನ್ ಸಾಹೇಬ್ ರವರ ಪುತ್ರ ಕೂಲಿ ಕೆಲಸ ಜೊತೆಗೆ ಗೋಳಿಕಟ್ಟೆ ಮೊಹ್ಯಿಯ್ಯದ್ದೀನ್ ಜುಮಾ ಮಸೀದಿಯ ಖಬರ್ ತೋಡುವ ಕೆಲಸ ನಿರ್ವಹಿಸುತ್ತಿದ್ದ ಶೇಖ್ ಅಬ್ದುಲ್ ಸತ್ತಾರ್ (40) ಅವರು ಜೂನ್ 24ರಂದು ಸಂಜೆ ಚಿಕ್ಕಪುತ್ತೂರಿನ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ತಂದೆ, ತಾಯಿ, ಸಹೋದರರು, ಸಹೋದರಿಯರು, ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.