ಕೆಮ್ಮಾಯಿ 7ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಮಿತಿ- ಅಧ್ಯಕ್ಷ ಚಿದಾನಂದ ರೈ ಎಸ್, ಪ್ರ.ಕಾರ್ಯದರ್ಶಿ ಎಂ.ಮಂಜುನಾಥ ಕೆಮ್ಮಾಯಿ, ಗೌರವಾಧ್ಯಕ್ಷ ಸುಂದರ ಪೂಜಾರಿ ಬಡಾವು

0

ಪುತ್ತೂರು: ಶ್ರೀ ವಿಷ್ಣುಯುವಕ ಮಂಡಲ ಕೆಮ್ಮಾಯಿ ಮತ್ತು ಅಶ್ವ ಫ್ರೆಂಡ್ಸ್ ಬೀರ‍್ನಹಿತ್ಲು ಇದರ ಸಹಯೋಗದೊಂದಿಗೆ ಸೆ.1ರಂದು ಜರುಗುವ 7ನೇ ವರ್ಷದ ಕೆಮ್ಮಾಯಿ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷರಾಗಿ ಚಿದಾನಂದ ರೈ ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಮಂಜುನಾಥ್ ಕೆಮ್ಮಾಯಿ, ಗೌರವಾಧ್ಯಕ್ಷರಾಗಿ ಸುಂದರ ಪೂಜಾರಿ ಬಡಾವು ಅವರು ಆಯ್ಕೆಗೊಂಡಿದ್ದಾರೆ.
ಕೋಶಾಧಿಕಾರಿಯಾಗಿ ದಯಾನಂದ ಗೌಡ ಕೆಮ್ಮಾಯಿ, ಸಂಚಾಲಕರಾಗಿ ಅಶೋಕ್ ಗೌಡ ಕೆಮ್ಮಾಯಿ, ಉಪಾಧ್ಯಕ್ಷರಾಗಿ ಸುರೇಂದ್ರ ಪೂಜಾರಿ ಬಡಾವು, ಜತೆಕಾರ್ಯದರ್ಶಿಯಾಗಿ ಸುರೇಂದ್ರ ಕುಂಜಾರು, ಕ್ರೀಡಾಕಾರ್ಯದರ್ಶಿಯಾಗಿ ಯಶವಂತ ಹೊಸಕ್ಲು, ಅಕ್ಷಯ್ ಬೀರ‍್ನಹಿತ್ಲು ಅವರು ಆಯ್ಕೆಗೊಂಡಿದ್ದಾರೆ. ವೈಭವದ ಅಟ್ಟಿಮಡಿಕೆ ಮೆರವಣಿಗೆ ಉತ್ಸವ ಸಮಿತಿಯಲ್ಲಿ ಸುಧಾಕರ್ ನಾೖಕ್‌ ಕೆಮ್ಮಾಯಿ, ರಾಧಾಕೃಷ್ಣ ಶೆಟ್ಟಿ, ಪ್ರವೀಣ್ ನಾಕ್ ಕೇಬಲ್, ಪ್ರವೀಣ್ ನಾೖಕ್‌ ರಾಧಾ ರೆಸಿಡೆನ್ಸಿ, ಜಯೇಶ್ ತಾರಿಗುಡ್ಡೆ, ನಾಗೇಶ್ ಭಾರತ್ ಹಾಗು ಅಶ್ವ ಫ್ರೆಂಡ್ಸ್ ಕೆಮ್ಮಾಯಿ ನೇತೃತ್ವ ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಮೊಸರು ಕುಡಿಕೆ ಉತ್ಸವ ಬೆಳಿಗ್ಗೆ ಗಂಟೆ 9ಕ್ಕೆ ಉದ್ಘಾಟನೆ ಸಂಜೆ 5ಕ್ಕೆ ಅಟ್ಟಿ ಮಡಿಕೆ ಒಡೆಯುವ ಮೆರವಣಿಗೆ ಉದ್ಘಾಟನೆ, ರಾತ್ರಿ ಗಂಟೆ 9ಕ್ಕೆ ಸಮಾರೋಪ ಮತ್ತು ಬಹುಮಾನ ವಿತರಣೆ ನಡೆಯಲಿದೆ. ಹಗ್ಗ ಜಗ್ಗಾಟ, ಅಡ್ಡಕಂಬ, ಮಡಕೆ ಒಡೆಯುವ ಸಹಿತ ಇತರ ಸ್ಪರ್ಧೆಗಳು ನಡೆಯಲಿದೆ.
ಚಿದಾನಂದ ರೈ

LEAVE A REPLY

Please enter your comment!
Please enter your name here