




ಕಾಣಿಯೂರು: ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಅನುದಾನ ಒದಗಿಸುವಂತೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಮನವಿ ಮಾಡಿದ್ದಾರೆ. ಸುಬ್ರಹ್ಮಣ್ಯಕ್ಕೆ ಆಗಮಿಸಿದ ಡಿಕೆಶಿ ಅವರನ್ನು ಸ್ವಾಗತಿಸಿದ ಶಾಸಕರು ಆದಿಶೇಷ ವಸತಿಗೃಹದಲ್ಲಿ ಮನವಿ ಸಲ್ಲಿಸಿದರು. ಹೊಸತಾಗಿ ರಚನೆಗೊಂಡ ಕಡಬ ತಾಲೂಕಿಗೆ ವಿವಿಧ ಸರಕಾರಿ ಕಛೇರಿಗಳ ಸ್ಥಾಪನೆ, ಸುಳ್ಯ ವಿವಿಧ ಸರಕಾರಿ ಕಚೇರಿಗಳಲ್ಲಿನ ಖಾಲಿ ಹುದ್ದೆ ಭರ್ತಿ, ಗ್ರಾಮೀಣ ಭಾಗದಲ್ಲಿ ಸೇತುವೆಗಳ ನಿರ್ಮಾಣ, ವೆಂಟೆಡ್ ಡ್ಯಾಮ್ ಗಳ ನಿರ್ಮಾಣ ಮತ್ತಿತರ ಬೇಡಿಕೆಗಳ ಮನವಿಯನ್ನು ಶಾಸಕರು ಸಲ್ಲಿಸಿದ್ದಾರೆ.










