ಪುತ್ತೂರು: ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ 2023- 24 ನೇ ಸಾಲಿನ ಜಾತ್ರೋತ್ಸವ ಭಕ್ತಾದಿಗಳ ಸಂಪೂರ್ಣ ಸಹಕಾರದಿಂದ ಬಹಳ ಅದ್ದೂರಿಯಾಗಿ ನೆರವೇರಿದ್ದು ಅದರ ಲೆಕ್ಕಪತ್ರವನ್ನು ಭಕ್ತಾದಿಗಳ ಸಮ್ಮುಖದಲ್ಲಿ ಜೂ.2 ರಂದು ಮಂಡಿಸಲಾಗಿತ್ತು. ಅದರಲ್ಲಿ ಸುಮಾರು 2 ಲಕ್ಷಕ್ಕೂ ಮಿಕ್ಕಿ ಉಳಿಕೆಯಾದ ಹಣದಲ್ಲಿ ದೇವಸ್ಥಾನದ ಅಭಿವೃದ್ಧಿಗಾಗಿ ತಡೆಗೋಡೆ, ಹೂದೋಟ, ಗೇಟ್ ಅಳವಡಿಸುವಂತೆ ಸಭೆಯಲಿ ತೀರ್ಮಾನಿಸಿದ ಪ್ರಕಾರ ದೇವಸ್ಥಾನದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ದೇವಸ್ಥಾನದ ಬಲ ಭಾಗದಲ್ಲಿ ತಡೆಗೋಡೆ ಮತ್ತು ಹೂದೋಟದ ಕಾಮಗಾರಿ ಆರಂಭದ ವೇಳೆ ಯಾರೋ ಕೆದಂಬಾಡಿ ಗ್ರಾಪಂಗೆ ದೂರು ಅರ್ಜಿ ನೀಡಿ ಕಾಮಗಾರಿಯ ಬಗ್ಗೆ ಆಕ್ಷೇಪ ಸಲ್ಲಿಸಿದ ಬಗ್ಗೆ ದೇವಸ್ಥಾನದ ವಾಟ್ಸಫ್ ಗ್ರೂಪ್‌ನಿಂದ ತಿಳಿದು ಬಂದಿದ್ದು ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಬೋಳೋಡಿ ಚಂದ್ರಹಾಸ ರೈಯವರು ಕೆದಂಬಾಡಿ ಗ್ರಾಪಂಗೆ ದೇವಸ್ಥಾನದ ಬಗ್ಗೆ ಬಂದಿರುವ ದೂರು ಅರ್ಜಿಯ ಬಗ್ಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆಯವರು ಹಿಂಬರಹ ನೀಡಿದ್ದು ಆಲಡ್ಕ ಶ್ರೀ ಸದಾಶಿವ ದೇವಸ್ಥಾನ ಮುಂಡೂರು ಇಲ್ಲಿನ ಅಭಿವೃದ್ಧಿ ಕೆಲಸಕ್ಕೆ ಸಂಬಂಧಿಸಿದಂತೆ ಕೆದಂಬಾಡಿ ಗ್ರಾಮ ಪಂಚಾಯತ್‌ಗೆ ಯಾವುದೇ ದೂರು ಅರ್ಜಿ ಸಲ್ಲಿಕೆಯಾಗಿರುವುದಿಲ್ಲ ಎಂದು ಹಿಂಬರಹ ನೀಡಿದ್ದಾರೆ ಎಂದು ಚಂದ್ರಹಾಸ ರೈಯವರು ತಿಳಿಸಿದ್ದಾರೆ. ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೆ ಈ ರೀತಿಯಾಗಿ ತೊಂದರೆ ನೀಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
Home ಇತ್ತೀಚಿನ ಸುದ್ದಿಗಳು ಆಲಡ್ಕ ದೇವಳದ ಅಭಿವೃದ್ಧಿ ಕೆಲಸಗಳಿಗೆ ಆಕ್ಷೇಪ:ಗ್ರಾಪಂಗೆ ದೂರು ಅರ್ಜಿ, ವದಂತಿ-ಗ್ರಾಪಂಗೆ ಯಾವುದೇ ದೂರು ಅರ್ಜಿ ಬಂದಿಲ್ಲ...