




ತೊನ್ನು ರೋಗಕ್ಕೆ ಚಿಕಿತ್ಸೆ, ಸಲಹೆ, ಅರಿವು ಮೂಡಿಸುವುದೇ ಶಿಬಿರದ ಉದ್ದೇಶ- ಡಾ. ಸಚಿನ್ ಮನೋಹರ್ ಶೆಟ್ಟಿ



ಪುತ್ತೂರು: ವಿಶ್ವ ತೊನ್ನು ರೋಗ ದಿನದ ಅಂಗವಾಗಿ ಖ್ಯಾತ ಚರ್ಮರೋಗ ತಜ್ಞ ಡಾ.ಸಚಿನ್ ಮನೋಹರ್ ಶೆಟ್ಟಿಯವರ ಬೊಳುವಾರಿನ ಪುತ್ತೂರು ಸ್ಕಿನ್ ಕ್ಲಿನಿಕ್ ಮತ್ತು ಲೇಸರ್ ಸೆಂಟರ್ ನಲ್ಲಿ ಜೂ.25ರಂದು ಉಚಿತಾ ಚರ್ಮ ರೋಗ ತಪಾಸಣಾ ಶಿಬಿರ ನಡೆಯಿತು.





ಕಳೆದ ಕೆಲ ವರ್ಷಗಳಿಂದ ವಿಶ್ವ ತೊನ್ನು ರೋಗ ದಿನದ ಅಂಗವಾಗಿ ಉಚಿತ ತಪಾಸಣಾ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ಶಿಬಿರದಲ್ಲಿ ಆವಶ್ಯಕತೆ ಇದ್ದವರಿಗೆ ಲೇಸರ್ ಚಿಕಿತ್ಸೆ, ಚರ್ಮ ರೋಗ ತಪಾಸಣೆ, ತೊನ್ನು ರೋಗ ತಪಾಸಣೆ, ಸಲಹೆ ಹಾಗೂ ಕೆಲವೊಂದು ಆಯ್ದ ಚಿಕಿತ್ಸೆ ಗಳಿಗೆ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ಬೆಳಿಗ್ಗೆಯಿಂದ ಸಂಜೆ ತನಕ ನಡೆದ ತಪಾಸಣಾ ಶಿಬಿರದಲ್ಲಿ ನೂರಾರು ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ತೊನ್ನು ರೋಗ ಸಾಮಾನ್ಯ ರೋಗ. ಇದರ ಬಗ್ಗೆ ಭಯಬೇಡ. ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಇದರಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ. ಪ್ರಾರಂಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ನಿವಾರಣೆ ಸಾಧ್ಯ. ಇದಕ್ಕೆ ಸೂಕ್ತ ಲೇಸರ್ ಚಿಕಿತ್ಸೆಯಿದ್ದು ಸುಲಭವಾಗಿ ನಿವಾರಿಸಬಹುದು. ಉಚಿತ ಶಿಬಿರದ ಮೂಲಕ ತೊನ್ನು ರೋಗಕ್ಕೆ ಚಿಕಿತ್ಸೆ, ಸಲಹೆ, ಜನರಿಗಿರುವ ಸಂಶಯ ನಿವಾರಣೆ ಹಾಗೂ ಜಾಗೃತಿಯ ಕುರಿತು ಅರಿವು ಮೂಡಿಸುವುದೇ ಪ್ರಮುಖ ಉದ್ದೇಶವಾಗಿದೆ ಎಂದು ಡಾ.ಸಚಿನ್ ಮನೋಹರ್ ಶೆಟ್ಟಿ ತಿಳಿಸಿದ್ದಾರೆ.





