ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಜಗನ್ನಾಥ ಪಿ ಅವರಿಗೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗೌರವ ಸನ್ಮಾನ

0

*ಕ್ಷೇತ್ರಕ್ಕೆ ಹೆಮ್ಮೆಯ ವಿಚಾರ – ಕೆ.ವಿ.ಶ್ರೀನಿವಾಸ
*ಇಂತಹ ಒಳ್ಳೆಯ ಅವಕಾಶ ನಮ್ಮೆಲ್ಲ ಸಿಬ್ಬಂದಿಗಳಿಗೂ ಸಿಗಲಿ – ವೇ ಮೂ ವಸಂತ ಕೆದಿಲಾಯ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭದ್ರತಾ ಸಿಬ್ಬಂದಿಯಾಗಿರುವ ಹಿರಿಯ ಗೃಹರಕ್ಷಕ ಜಗನ್ನಾಥ ಪಿ ಅವರು ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತಗೊಂಡ ಹಿನ್ನೆಲೆಯಲ್ಲಿ ಜೂ.25ರಂದು ದೇವಳದ ವತಿಯಿಂದ ಸಭಾಭವನದಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.ದೇವಳದ ಆಡಳಿತಾಧಿಕಾರಿ, ಕಾರ್ಯನಿರ್ವಹಣಾಧಿಕಾರಿ, ತಂತ್ರಿಯವರು, ಅರ್ಚಕವೃಂದ, ನೌಕರರು, ನಿತ್ಯ ಕರಸೇವಕರು ಜೊತೆಯಾಗಿ ಜಗನ್ನಾಥ ಪಿ ಮತ್ತು ಅವರ ಪತ್ನಿ ಲೀಲಾವತಿ ಅವರಿಗೆ ಶಲ್ಯ, ಪೇಟ, ಸ್ಮರಣಿಕಗೆ ನೀಡಿ ಗೌರವಿಸಿದರು.


ಕ್ಷೇತ್ರಕ್ಕೆ ಹೆಮ್ಮೆಯ ವಿಚಾರ :
ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಅವರು ಮಾತನಾಡಿ ದೇವಳದಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ಜಗನ್ನಾಥ ಅವರು ಮುಖ್ಯಮಂತ್ರಿ ಚಿನ್ನದ ಪದಕ ಪಡೆದಿರುವುದು ಅವರಿಂದ ಜಾಸ್ತಿ ನಮಗೂ ಸಂತೋಷ ತರುತ್ತದೆ ಮತ್ತು ಕ್ಷೇತ್ರಕ್ಕೂ ಹೆಮ್ಮೆಯ ವಿಚಾರ. ದೇವರ ಆಶೀರ್ವಾದ ಅವರ ಮೇಲೆ ಸದಾ ಇರಲಿ ಎಂದರು.


ಇಂತಹ ಒಳ್ಳೆಯ ಅವಕಾಶ ನಮ್ಮೆಲ್ಲ ಸಿಬ್ಬಂದಿಗಳಿಗೂ ಸಿಗಲಿ:
ದೇವಳದ ಪ್ರಧಾನ ಅರ್ಚಕರಲ್ಲೋರ್ವರಾದ ವೇ ಮೂ ವಸಂತ ಕೆದಿಲಾಯ ಅವರು ಮಾತನಾಡಿ ಭದ್ರತಾ ಕೆಲಸ ಬಹಳ ಕಷ್ಟದ ಕೆಲಸ. ಅಂತಹ ಕೆಲಸವನ್ನು ಅಚ್ಚಕಟ್ಟಾಗಿ ಮಾಡುತ್ತಾರೆ. ಎಲ್ಲಾ ಕೆಲಸವನ್ನು ಮೆಚ್ಚಿ ಸಿಎಮ್ ಚಿನ್ನದ ಪದಕ ಪಡೆದಿರುವುದು ಪುಣ್ಯದ ಕೆಲಸ. ಇದು ನಮ್ಮ ದೇವಸ್ಥಾನಕ್ಕೆ ಕೀರ್ತಿ ಲಭಿಸಿದೆ. ಇಂತಹ ಅನೇಕ ಒಳ್ಳೆಯ ಕೆಲಸಗಳು ನಮ್ಮೆಲ್ಲ ಸಿಬ್ಬಂದಿಗಳು ಸಿಗಲಿ ಎಂದು ಹೇಳಿದರು.


ಎಲ್ಲರ ಪ್ರೀತಿಯಿಂದಾಗಿ ನನಗೆ ಸಿಕ್ಕಿದ ಅವಕಾಶ:
ಸನ್ಮಾನ ಸ್ವೀಕರಿಸಿದ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತಗೊಂಡ ಜಗನ್ನಾಥ ಪಿ ಅವರು ಮಾತನಾಡಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸುವ ಮೂಲಕ ನನಗೆ ಉತ್ತಮ ಅವಕಾಶ ಲಭಿಸಿತು. ಕರ್ತವ್ಯಕ್ಕೆ ಮೆಚ್ಚಿ ಚಿನ್ನದ ಪದಕವೂ ಲಭಿಸಿತು ಎಂದರು.


ಮಾಡುವ ಕೆಲಸದಲ್ಲಿ ಭಕ್ತಿ, ಪ್ರೀತಿ ಇದ್ದರೆ ಪ್ರಶಸ್ತಿ ತನ್ನಿಂದ ತಾನೆ ಬರುತ್ತದೆ:
ಕಾರ್ಯಕ್ರಮ ನಿರ್ವಹಿಸಿದ ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಅವರು ಮತನಾಡಿ ಮಾಡುವ ಕೆಲಸದಲ್ಲಿ ಭಕ್ತಿ ಮತ್ತು ಪ್ರೀತಿ ಇದ್ದರೆ ಪ್ರಶಸ್ತಿ ತನ್ನಿಂದ ತಾನೆ ಬರುತ್ತದೆ. ಅದಕ್ಕೆ ಉದಾಹರಣೆಯಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇವಳದ ಸ್ಯಾಕ್ಸೋಪೋನ್ ವಾದಕ ಪಿ.ಕೆ ಗಣೇಶ್ ಮತ್ತು ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ದೇವಳದ ಭದ್ರತಾ ಸಿಬ್ಬಂದಿಯಾಗಿರುವ ಜಗನ್ನಾಥ ಪಿ ಅವರು ಉದಾಹರಣೆಯಾಗಿದ್ದಾರೆ ಎಂದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ರವೀಂದ್ರ, ಪದ್ಮನಾಭ, ರಾಜ್ಯೋತ್ಸವ ಪ್ರಶಸ್ತಿ ಡಾ.ಪಿ.ಕೆ.ಗಣೇಶ್, ಲಕ್ಷ್ಮಣ, ವಸಂತ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ಪ್ರೇಮಾನಂದ, ಗಿರೀಶ್ ಕುಮಾರ್, ವಿದ್ವಾನ್ ಗಿರೀಶ್ ಕುಮಾರ್, ಕಿರಣ್ ಶಂಕರ್ ಮಲ್ಯ ಸಹಿತ ದೇವಳದ ಅರ್ಚಕರು, ನೌಕರರು, ನಿತ್ಯ ಕರಸೇವಕರು ಜಗನ್ನಾಥ ಪಿ ಅವರನ್ನು ಗೌರವಿಸಿದರು.

LEAVE A REPLY

Please enter your comment!
Please enter your name here