ಡಾಕ್ಟರ‍್ಸ್ ಡೇ ಪ್ರಯುಕ್ತ ನಯಾ ಚಪ್ಪಲ್ ಬಜಾರ್‌ನಲ್ಲಿ ಡಾ.ರಾಮಚಂದ್ರ ಭಟ್‌ರವರಿಗೆ ಸನ್ಮಾನ

0

ಪುತ್ತೂರು: ಜೀವ ರಕ್ಷಕರೆನಿಸಿದ ವೈದ್ಯರು ಸಮಾಜದಲ್ಲಿ ನೀಡುವ ಸೇವೆಗಾಗಿ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ(ಡಾಕ್ಟರ‍್ಸ್ ಡೇ)ಯನ್ನು ಆಚರಿಸುತ್ತಿದೆ. ಈ ನಿಟ್ಟಿನಲ್ಲಿ ದರ್ಬೆ ಬುಶ್ರಾ ಕಾಂಪ್ಲೆಕ್ಸ್‌ನಲ್ಲಿ ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಎಂ.ಜಿ ರಫೀಕ್‌ರವರ ಮಾಲಕತ್ವದಲ್ಲಿ ವ್ಯವಹರಿಸುತ್ತಿರುವ ನಯಾ ಚಪ್ಪಲ್ ಬಜಾರ್ ಮಳಿಗೆಯ ವತಿಯಿಂದ ಡಾಕ್ಟರ‍್ಸ್ ಡೇ ಪ್ರಯುಕ್ತ ಪುತ್ತೂರು ಬ್ಲಡ್‌ಬ್ಯಾಂಕ್‌ನಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ನೀಡುತ್ತಿರುವ ಹಿರಿಯ ವೈದ್ಯರಾದ ಡಾ.ರಾಮಚಂದ್ರ ಭಟ್‌ರವರನ್ನು ಸನ್ಮಾನಿಸಿ ಗೌರವಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಬ್ಲಡ್‌ಬ್ಯಾಂಕ್‌ನ ಅಡಿಪಾಯದ ಕಲ್ಲು ಡಾ.ರಾಮಚಂದ್ರ ಭಟ್‌ರವರು-ಡಾ.ಶ್ರೀಪತಿ ರಾವ್:
ರೋಟರಿ ಕ್ಲಬ್ ಪುತ್ತೂರು ಇದರ ನೂತನ ಅಧ್ಯಕ್ಷ ಡಾ.ಶ್ರೀಪತಿ ರಾವ್‌ರವರು ಹಿರಿಯ ವೈದ್ಯ ಡಾ.ರಾಮಚಂದ್ರ ಭಟ್‌ರವರಿಗೆ ಶಾಲು ಹೊದಿಸಿ ಸನ್ಮಾನಿಸಿ ಮಾತನಾಡಿ, ಹಿರಿಯ ವೈದ್ಯರಾದ ಡಾ.ರಾಮಚಂದ್ರ ಭಟ್‌ರವರನ್ನು ಸನ್ಮಾನಿಸುವುದು ನನ್ನ ಪಾಲಿನ ಭಾಗ್ಯವಾಗಿದೆ. ನೂರಕ್ಕೂ ಮಿಕ್ಕಿ ಸದಸ್ಯರಿರುವ ಪುತ್ತೂರು ರೋಟರಿ ಕ್ಲಬ್ ಸಮಾಜಕ್ಕೆ ಬ್ಲಡ್‌ಬ್ಯಾಂಕ್ ಸಹಿತ ಅನೇಕ ಶಾಶ್ವತ ಪ್ರಾಜೆಕ್ಟ್‌ಗಳನ್ನು ಕೊಡುಗೆಯಾಗಿ ನೀಡಿದೆ. ಈ ತನಕ ಕ್ಲಬ್ 59 ಮಂದಿ ಉತ್ಸಾಹಿ ಅಧ್ಯಕ್ಷರನ್ನು ಕಂಡಿದ್ದು, ಕ್ಲಬ್ ಪ್ರತಿ ವರ್ಷ ಹಮ್ಮಿಕೊಂಡ ಕಾರ್ಯಕ್ರಮಗಳು ಜನರನ್ನು ಮುಟ್ಟುವಲ್ಲಿ ಯಶಸ್ವಿಯಾಗಿದೆ. 1997ರಲ್ಲಿ ಲೋಕಾರ್ಪಣೆಗೊಂಡ ಈ ಬ್ಲಡ್‌ಬ್ಯಾಂಕ್‌ನಲ್ಲಿ ಡಾ.ರಾಮಚಂದ್ರ ಭಟ್‌ರವರು ಭದ್ರ ಬುನಾದಿ ಎನಿಸಿಕೊಂಡಿದ್ದಾರೆ. ವೈದ್ಯ ರಾಮಚಂದ್ರ ಭಟ್‌ರವರು ಕೊನೆಯ ಉಸಿರಿರುವ ತನಕ ಬ್ಲಡ್‌ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.


ಆರೋಗ್ಯ ಕ್ಷೇತ್ರದಲ್ಲಿ ಡಾ.ರಾಮಚಂದ್ರ ಭಟ್‌ರವರ ಕೊಡುಗೆ ಅಪಾರ-ಜೈರಾಜ್ ಭಂಡಾರಿ;
ರೋಟರಿ ಕ್ಲಬ್ ಪುತ್ತೂರು ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಡಾ.ರಾಮಚಂದ್ರ ಭಟ್‌ರವರ ಕೊಡುಗೆ ಅಪಾರ. ರಾಮಚಂದ್ರ ಭಟ್‌ರವರು ಉತ್ತಮ ರೀತಿಯಲ್ಲಿ ಬ್ಲಡ್‌ಬ್ಯಾಂಕ್‌ನ ಉಸ್ತುವಾರಿಯನ್ನು ಯಶಸ್ವಿಯಾಗಿ ನೋಡಿಕೊಂಡು ಬರುತ್ತಿದ್ದು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿರುವುದು ವೈದ್ಯರ ದಿನಾಚರಣೆಗೆ ವಿಶೇಷ ಕಲೆ ತಂದಿದೆ. ಮುಂದಿನ ದಿನಗಳಲ್ಲಿ ಅವರ ವಿಶ್ರಾಂತ ಜೀವನ ಸುಖಕರವಾಗಲಿ ಎಂದು ಹೇಳಿ ಶುಭ ಹಾರೈಸಿದರು.


ಡಾ.ರಾಮಚಂದ್ರರವರು ಸತ್ಯ, ಧರ್ಮ, ನಿಷ್ಟೆ, ಬದ್ಧತೆಗೆ ಆದರ್ಶಪ್ರಾಯರು-ಸುರೇಶ್ ಶೆಟ್ಟಿ:
ರೋಟರಿ ಕ್ಲಬ್ ಪುತ್ತೂರು ಹಿರಿಯ ಸದಸ್ಯ, ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಮಾತನಾಡಿ, ರಾಮಚಂದ್ರ ಭಟ್‌ರವರು ಸತ್ಯ, ಧರ್ಮ, ನಿಷ್ಟೆ, ಬದ್ಧತೆಗೆ ಆದರ್ಶಪ್ರಾಯರು. 1998ರಲ್ಲಿ ಬ್ಲಡ್‌ಬ್ಯಾಂಕ್ ಆರಂಭಗೊಂಡಾಗ ಬ್ಲಡ್‌ಬ್ಯಾಂಕ್‌ನಲ್ಲಿ ಪಾರದರ್ಶಕವಾಗಿ ಸೇವೆ ಸಲ್ಲಿಸುವವರು ಯಾರಾಗಬಹುದು ಎಂಬ ಚಿಂತನೆಯು ಕ್ಲಬ್‌ದಾಗಿತ್ತು. ಆದರೆ ಈ ಚಿಂತನೆಯನ್ನು ಹೋಗಲಾಡಿಸಿದವರು ಡಾ.ರಾಮಚಂದ್ರ ಭಟ್‌ರವರು. ಉತ್ತಮ ಸೇವೆಯ ಜೊತೆಗೆ ಸರಿಯಾದ ಮಾಹಿತಿ ಕೊಟ್ಟು ಬ್ಲಡ್‌ಬ್ಯಾಂಕ್‌ಗೆ ಆಗಮಿಸಿದವರ ಹೆದರಿಕೆಯನ್ನು ಹೋಗಲಾಡಿಸುತ್ತಿದ್ದರು. ಅವರ ಸೇವೆಗೆ ನಾವು ಚಿರಋಣಿ ಎಂದರು.


ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ದಾಮೋದರ್ ಕೆ, ನಿಕಟಪೂರ್ವ ಕಾರ್ಯದರ್ಶಿ ಸುಜಿತ್ ಡಿ.ರೈ, ಸಮುದಾಯ ಸೇವಾ ನಿರ್ದೇಶಕ ರಾಜ್‌ಗೋಪಾಲ್ ಬಲ್ಲಾಳ್, ಸದಸ್ಯರಾದ ದತ್ತಾತ್ರೇಯ ರಾವ್, ಮಧು ನರಿಯೂರು, ಹೆರಾಲ್ಡ್ ಮಾಡ್ತಾ, ಶ್ರೀಕಾಂತ್ ಕೊಳತ್ತಾಯ, ಶ್ರೀಧರ್ ಗೌಡ ಕಣಜಾಲು, ಗುರುರಾಜ್ ಕೊಳತ್ತಾಯ, ನಯಾ ಚಪ್ಪಲ್ ಬಜಾರ್ ಸಿಬ್ಬಂದಿ ಉಪಸ್ಥಿತರಿದ್ದರು. ನಯಾ ಚಪ್ಪಲ್ ಬಜಾರ್ ಮಾಲಕ ರಫೀಕ್ ಎಂ.ಜಿ ಸ್ವಾಗತಿಸಿ, ಸಿಬ್ಬಂದಿ ಸುಮಲತಾ ವಂದಿಸಿದರು. ಕ್ಲಬ್ ಸದಸ್ಯ ವಿ.ಜೆ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

ಡಾ.ರಾಮಚಂದ್ರ ಭಟ್‌ರವರ ಸನ್ಮಾನ,ವೈದ್ಯರುಗಳಿಗೆ ಸಂದ ಗೌರವ..
ಡಾ.ರಾಮಚಂದ್ರ ಭಟ್‌ರವರನ್ನು ಸನ್ಮಾನಿಸುವುದು ಇಡೀ ಪುತ್ತೂರಿನ ಜನತೆಗೆ ಖುಷಿಯ ವಿಷಯ. ಅವರನ್ನು ಗೊತ್ತಿಲ್ಲದದವರು ಯಾರೂ ಇಲ್ಲ. ನಾನು ಕ್ಲಬ್ ಅಧ್ಯಕ್ಷನಾಗಿದ್ದಾಗ ರಾಮಚಂದ್ರ ಭಟ್‌ರವರ ಮತ್ತು ನನ್ನ ಒಡನಾಟ ಮತ್ತೂ ಜಾಸ್ತಿಯಾಯಿತು. ಎಲ್ಲಿವರೆಗೆ ಅಂದರೆ ಡಾ.ರಾಮಚಂದ್ರ ಭಟ್ ಹಾಗೂ ಅವರ ಪತ್ನಿಯನ್ನು ನಾವು ನಮ್ಮ ರೋಟರಿ ಕುಟುಂಬದವರ ಜೊತೆ ಮಲೇಶಿಯಾಕ್ಕೆ ಪ್ರವಾಸಕ್ಕೆ ಕರೆದೊಯ್ದಿದ್ದೇವೆ. ಎಲ್ಲಾ ವೈದ್ಯರುಗಳ ಪರವಾಗಿ ಡಾಕ್ಟರ‍್ಸ್ ಡೇ ಸಂದರ್ಭ ಡಾ.ರಾಮಚಂದ್ರ ಭಟ್‌ರವರನ್ನು ಗೌರವಿಸಿರುವುದು ವೈದ್ಯರುಗಳಿಗೆ ಸಂದ ಗೌರವವಾಗಿದೆ.
-ಎಂ.ಜಿ ರಫೀಕ್, ಮಾಲಕರು, ನಯಾ ಚಪ್ಪಲ್ ಬಜಾರ್

ಬ್ಲಡ್‌ಬ್ಯಾಂಕ್ ಪುತ್ತೂರಿಗೆ ಅನನ್ಯ ಕೊಡುಗೆ..
ಐದು ದಶಕಗಳ ಕಾಲ ವೈದ್ಯ ವೃತ್ತಿಯಲ್ಲಿ, 20 ವರ್ಷ ಕಾಲ ಬ್ಲಡ್ ಬ್ಯಾಂಕಿನಲ್ಲಿ ಸೇವೆ ನೀಡಿದ್ದೇನೆ. ಆದರೆ ನನ್ನನ್ನು ಪ್ರಚಾರ ಮಾಡಿದವರು ಮಾತ್ರ ರೋಟರಿ ಸಂಸ್ಥೆಯಾಗಿದೆ. ಪುತ್ತೂರು ಬ್ಲಡ್‌ಬ್ಯಾಂಕ್ ಐದು ತಾಲೂಕಿಗೆ ರಕ್ತವನ್ನು ಅಗತ್ಯ ಸಂದರ್ಭದಲ್ಲಿ ಪೂರೈಸುತ್ತಿದೆ. ಹಿಂದೆ ರೋಗಿಗೆ ರಕ್ತದ ಅವಶ್ಯಕತೆ ಬೇಕಾದಾಗ ಮಂಗಳೂರನ್ನು ಆಶ್ರಯಿಸಬೇಕಿತ್ತು. ಇದೀಗ ರೋಟರಿ ಪುತ್ತೂರುರವರ ಅನನ್ಯ ಚಿಂತನೆಯ ಕೊಡುಗೆಯೊಂದಿಗೆ ಪುತ್ತೂರಿನಲ್ಲಿ ಬ್ಲಡ್‌ಬ್ಯಾಂಕ್ ಸ್ಥಾಪನೆಗೊಂಡು ಜನರ ಅವಶ್ಯಕತೆಗಳಿಗೆ ನೆರವಾಗುತ್ತಿದೆ. ಜಾತಿ-ಮತ-ಧರ್ಮವಿಲ್ಲದೆ ಬ್ಲಡ್‌ಬ್ಯಾಂಕ್ ಸೇವೆಯನ್ನು ಎಲ್ಲರೂ ಗೌರವಿಸುತ್ತಿದ್ದಾರೆ. ಈ ಬ್ಲಡ್‌ಬ್ಯಾಂಕ್ ಮುಖೇನ ತಲಸೇಮಿಯಾ ರೋಗಿಗಳಿಗೆ ಉಚಿತವಾಗಿ ರಕ್ತದ ನೆರವು ನೀಡುತ್ತಿದೆ ಮಾತ್ರವಲ್ಲ ಹಲವಾರು ಮಂದಿಗೆ ಉಪಯುಕ್ತವಾಗಿದೆ.
-ಡಾ.ರಾಮಚಂದ್ರ ಭಟ್, ಡಾಕ್ಟರ‍್ಸ್ ಡೇ ಸನ್ಮಾನಿತರು

LEAVE A REPLY

Please enter your comment!
Please enter your name here