ಕಡಬ: ಇಲ್ಲಿನ ವಿದ್ಯಾನಗರಸಲ್ಲಿರುವ ಸರಸ್ವತಿ ವಿದ್ಯಾಲಯದ ಪ್ರಾಥಮಿಕ ವಿಭಾಗದ ವತಿಯಿಂದ ನಡೆದ 2024- 25ನೇ ಸಾಲಿನಲ್ಲಿ ನೂತನವಾಗಿ ದಾಖಲಾತಿಗೊಂಡ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬರೋಡ ಬ್ಯಾಂಕ್ ನೂಜಿಬಾಳ್ತಿಲ ಶಾಖೆಯ ಶಿವಪ್ರಸಾದ್ ಸುರಿಯ ಮಾತನಾಡಿ ಭವ್ಯ ಭಾರತದ ಕನಸು ನನಸಾಗಬೇಕಾದರೆ ಇಂದಿನ ಶಿಕ್ಷಣ ಪದ್ಧತಿಯು ಉತ್ತಮ ವಿದ್ಯಾಭ್ಯಾಸದ ನೀಡುವುದರ ಜೊತೆಗೆ ಸಂಸ್ಕಾರ ಸಂಸ್ಕೃತಿಯನ್ನು ಕಲಿಸುವ ಗರಡಿಮನೆ ಆಗಬೇಕು ಹೇಳಿದರು.
ಸಂಸ್ಥೆಯ ಮಾತಾಜಿ ವೃಂದದವರು ಈ ವರ್ಷ ದಾಖಲಾತಿ ಗೊಂಡ ಮಕ್ಕಳಿಗೆ ಆರತಿ ಬೆಳಗಿಸಿ ಘ್ರತಾಹುತಿಗೆ ಹವಿಸನ್ನು ಅರ್ಪಿಸಿ ಭಾರತಮಾತೆಗೆ ಪುಷ್ಪರ್ಚನೆ ಮಾಡಿ ಹಿರಿಯರಿಂದ ಸಿಹಿ ಹಾಗು ತಿಲಕಧಾರಣೆ ಪಡೆದು ನಂತರ ಆಶೀರ್ವಾದ ಪಡೆದರು.
ಇನ್ನೋರ್ವ ಅತಿಥಿಯಾದ ಸಂಸ್ಥೆಯ ಹಳೆಯ ವಿದ್ಯಾರ್ಥಿ ಸನತ್ ಕುಮಾರ್ ಪಿ. ಬಿ,ತನ್ನ ವಿದ್ಯಾರ್ಥಿ ಜೀವನದ ಸಿಂಹಾವಲೋಕನ ಮಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರವಿರಾಜ್ ಶೆಟ್ಟಿ ಕಡಬ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಪ್ರಮೀಳಾ ಲೋಕೇಶ ಮತ್ತು ಮುಖ್ಯ ಗುರುಗಳಾದ ಮಾಧವ ಕೋಲ್ಪೆ ಉಪಸ್ಥಿತರಿದ್ದರು. ಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವೆಂಕಟರಮಣರಾವ್ ಮಂಕುಡೆ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳ ಮೂಲಕ ಸಂಸ್ಥೆ ನಡೆದು ಬಂದ ಹಾದಿಯನ್ನು ಪೋಷಕರಿಗೆ ತಿಳಿಸಿದರು.
ಶಿಕ್ಷಕರಾದ ವಸಂತ್ ಕರ್oಬೋಡಿ ವಂದಿಸಿದರು, ಶಿಕ್ಷಕಿ ಪ್ರೇಮಲತಾ ಕೇಪುಂಜ ಕಾರ್ಯಕ್ರಮ ನಿರೂಪಿಸಿದರು.