ಟ್ಯಾರೋ ಕಾರ್ಡ್ ರೀಡರ್, ಜ್ಯೋತಿಷಿ, ಮನೋಚಿಕಿತ್ಸಕಿ ವಿದ್ಯಾ ರಕ್ಷಿತ್‌ರವರಿಗೆ ಬಸವ ಪ್ರಶಸ್ತಿ ಪ್ರದಾನ

0

ಪುತ್ತೂರು: ಟ್ಯಾರೋ ಕಾರ್ಡ್ ರೀಡರ್ ಪರಿಣತಿ ಹೊಂದಿರುವ ವೈಜ್ಞಾನಿಕ ಚಿಕಿತ್ಸಕಿ ಡಾ.ವಿದ್ಯಾ ರಕ್ಷಿತ್‌ರವರಿಗೆ ಅಖಿಲ ಕರ್ನಾಟಕ ಬಸವ ಬಳಗ ಹುಬ್ಬಳ್ಳಿ ಇದರ ವತಿಯಿಂದ ಬಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಖಿಲ ಕರ್ನಾಟಕ ಬಸವ ಬಳಗ ಹುಬ್ಬಳ್ಳಿ ಇದರ 21ನೆಯ ವಾರ್ಷಿಕೋತ್ಸವ ಮತ್ತು ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ವೈದ್ಯರಂಗದಲ್ಲಿ ಸೇವೆ ಸಲ್ಲಿಸಿದ ಮತ್ತು ಇತರ ರಂಗಗಳಲ್ಲಿ ಸೇವೆ ಮಾಡಿರುವ ಮಹನೀಯರಿಗೆ ಬಸವ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಜುಲೈ ಒಂದರಂದು ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಶರಣಪ್ಪ ಎಂ. ಕೊಟ್ಟಗಿರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾಜಸೇವಕ ಡಾ. ರಮೇಶ್ ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸಿದ್ದರು.

ಪುತ್ತೂರಿನ ಕೇಪುಳು ನಿವಾಸಿಯಾದ ವಿದ್ಯಾ ರಕ್ಷಿತ್‌ರವರು ಟ್ಯಾರೋ ಕಾರ್ಡ್ ರೀಡರ್ ಪರಿಣತಿ ಹೊಂದಿರುವ ವೈಜ್ಞಾನಿಕ ಚಿಕಿತ್ಸಕರಲ್ಲಿ ಒಬ್ಬರು. ಇದುವರೆಗೆ ಸುಮಾರು ಐದು ಸಾವಿರ ಜನರಿಗೆ ತಮ್ಮ ಕೌಶಲ್ಯ ಬಳಸಿ ಚಿಕಿತ್ಸೆ ನೀಡಿದ್ದು ಸಮಲೋಚನೆಯಿಂದ ಬಹಳಷ್ಟು ಜನರು ಧನಾತ್ಮಕ ಸುಧಾರಣೆಗಳನ್ನು ಕಂಡುಕೊಂಡಿದ್ದಾರೆ. ಇತ್ತಿಚೆಗೆ ಕನ್ನಡ ಭವನ ಕಾಸರಗೋಡು ಪ್ರಕಾಶಿತ ಇವರ ’ವಿಶ್ರುತ’ ಕವನ ಸಂಕಲನ ಲೋಕಾರ್ಪಣೆಗೊಂಡಿತ್ತು. ದೇಶ ವಿದೇಶಗಳಲ್ಲಿ ಸುಮಾರು 16 ವರ್ಷ ವಾಣಿಜ್ಯ ರಂಗದಲ್ಲಿ ದುಡಿದ ಅನುಭವ ಹೊಂದಿರುವ ಇವರನ್ನು (+91 9741331906) ಜ್ಯೋತಿಷ್ಯ ಸಲಹೆ ಹಾಗೂ ಮಾರ್ಗದರ್ಶನ, ಅತೀಂದ್ರಿಯ ಸಲಹೆ, ಟ್ಯಾರೋ ಭವಿಷ್ಯದ ಸಲಹೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here