ಪುತ್ತೂರು: ಟೆಂಪೋ ಚಾಲಕರಾಗಿದ್ದ ಮೂಲತಃ ದರ್ಬೆ ನಿವಾಸಿಯಾಗಿದ್ದು ಪ್ರಸ್ತುತ ಬನ್ನೂರಿನಲ್ಲಿ ವಾಸವಿರುವ ಚಂದ್ರಶೇಖರ ನಾಯ್ಕ್ (68ವ) ನಿಧನರಾಗಿದ್ದಾರೆ.
ದರ್ಬೆ ಗೇಟ್ ದಿ.ಗುಡ್ಡಣ್ಣ ನಾಯ್ಕ್ ಅವರ ಪುತ್ರರಾಗಿರುವ ಚಂದ್ರಶೇಖರ್ ಅವರನ್ನು ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು (ಜು.7ರಂದು) ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಮತ್ತು ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಜು.12ರಂದು ಮಗಳ ಮದುವೆ ನಡೆಯಬೇಕಾಗಿತ್ತು. ಆಮಂತ್ರಣ ಪತ್ರಿಕೆಯನ್ನು ಹಂಚಲಾಗಿದ್ದು, ಮನೆ ಮುಂದೆ ಚಪ್ಪರ ಕೂಡ ಹಾಕಲಾಗಿತ್ತು. ಮರಣದ ಹಿನ್ನಲೆಯಲ್ಲಿ ಮದುವೆಯನ್ನು ಮುಂದೂಡಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ. ಶುಭಕಾರ್ಯ ನಡೆಯಬೇಕಿದ್ದ ಮನೆಯಲ್ಲಿ ಈಗ ಶೋಕದ ವಾತಾವರಣ ಸೃಷ್ಟಿಯಾಗಿದೆ.