ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ ಜು.4ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಫಾದರ್ ಲಾರೆನ್ಸ್ ಮಸ್ಕರೇನಸ್ ವಹಿಸಿದ್ದರು .
ಸಂಪನ್ಮೂಲ ವ್ಯಕ್ತಿ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಮಾತನಾಡಿ ಮಕ್ಕಳು ಸಂಸ್ಕಾರ ಕಲಿಯುವುದು ತಮ್ಮ ಮನೆಯಿಂದಲೇ, ಬದುಕುವ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು, ಜೀವನ ಮೌಲ್ಯಗಳನ್ನು ಕಲಿಸಬೇಕು , ಮಕ್ಕಳ ನಿಯಂತ್ರಣ ನಮ್ಮ ಕೈಯಲ್ಲಿದೆ. ಮಕ್ಕಳು ಹೂವಿನ ಹಾಗೆ, ಪರಿಮಳವನ್ನು ಪಸರಿಸುವ ಹಾಗೆ , ಮಕ್ಕಳ ನಾಳೆಯ ಬದುಕು ಉತ್ತಮವಾಗಿರಬೇಕು ಎಂದರು.
2023- 24 ನೇ ಸಾಲಿನ ಪ್ರಗತಿಯ ಪರಿಚಯವನ್ನು ಶಿಕ್ಷಕಿ ಮೋಲಿ ಫೆರ್ನಾಂಡಿಸ್ ತಿಳಿಸಿದರು. ಶಿಕ್ಷಕಿ ಆಶಾ ರೆಬೆಲ್ಲೋ 2023-24ನೆ ಸಾಲಿನ ಆಯವ್ಯಯ ಪಟ್ಟಿಯನ್ನು ವಾಚಿಸಿದರು.ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾದರ್ ಲಾರೆನ್ಸ್ ಮಸ್ಕರೇನಸ್ ಇವರು ಮಾತನಾಡಿ ಇಂದಿನ ಮಕ್ಕಳು ಶಿಸ್ತು, ಜವಾಬ್ದಾರಿ. ದೇವರಲ್ಲಿ ಭಕ್ತಿ ,ಹಿರಿಯರನ್ನು ಗೌರವಿಸುವ ಗುಣ, ಆತ್ಮಸ್ಥೈರ್ಯ ಮುಂತಾದ ಒಳ್ಳೆಯ ಮಾನವೀಯ ಗುಣಗಳನ್ನು ಬೆಳೆಸಿ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಬೇಕು ಎಂದು ಕರೆ ನೀಡಿದರು.
ಶಾಲೆಯ ಮುಖ್ಯ ಗುರು ಮ್ಯಾಕ್ಸಿಮ್ ಡಿಸೋಜಾ ಎಂ ಇ ಶಾಲೆಯ ಕಾರ್ಯ ಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಿದರು. ಹಿಂದಿನ ಸಾಲಿನ ಉಪಾಧ್ಯಕ್ಷ ಮೌರಿಸ್ ಕುಟಿನ್ಹ ಅವರು ಈ ಶಾಲೆಯ ಕಾರ್ಯವೈಖರಿಗಳ ಬಗ್ಗೆ ತಿಳಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ ಅವರು ಪೋಷಕರಿಗೆ ತಮ್ಮ ಜವಾಬ್ದಾರಿಯ ಕುರಿತು ತಿಳಿಸಿದರು. 2024 -25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು. ಎಂಟು ಮಂದಿ ಪೋಷಕರು ನೂತನ ಸಮಿತಿಗೆ ಆಯ್ಕೆಯಾದರು.
2024 -25 ನೇ ಸಾಲಿನ ಉಪಾಧ್ಯಕ್ಷರಾಗಿ ಸೌಮ್ಯ ಭಟ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ಶಾಫಿ ಆಯ್ಕೆಗೊಂಡರು. ಶಾಲಾ ಶಿಕ್ಷಕಿ ಕಾರ್ಮಿನ್ ಪಾಯಸ್ ಸ್ವಾಗತಿಸಿ,ಶಿಕ್ಷಕಿ ಸವಿತಾ ಮೊಂತೆ ರೋ ವಂದಿಸಿ, ಶಾಲಾ ಶಿಕ್ಷಕ ಕ್ಲೆಮೆಂಟ್ ಪಿಂಟೊ ನಿರೂಪಿಸಿ, ಎಲ್ಲಾ ಶಿಕ್ಷಕ ವೃಂದದವರು ಸಹಕರಿಸಿದರು.