ಶಾಸಕ ಹರೀಶ್ ಪೂಂಜರು ಲಂಚ, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಬಗ್ಗೆ ಮಾಡಿದ ಘೋಷಣೆಗೆ (ಕಾನೂನು ಬಾಹಿರ ವಿಷಯಗಳನ್ನು ಹೊರತು ಪಡಿಸಿ) ಸುದ್ದಿ ಜನಾಂದೋಲನ ವೇದಿಕೆಯ ಪೂರ್ಣ ಬೆಂಬಲ

0

ಮೇ 200 ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಶಾಸಕ ಹರೀಶ್ ಪೂಂಜ, ಈಗ ಸಂಸದರಾಗಿರುವ ಕೋಟ ಶ್ರೀನಿವಾಸ ಪೂಜಾರಿ,ಸಂಸದರಾಗಿರುವ ಬ್ರಿಜೇಶ್ ಚೌಟ,ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ , ತಾಲೂಕು ಅಧ್ಯಕ್ಷ ಶ್ರೀನಿವಾಸ ರಾವ್, ಹರಿಕೃಷ್ಣ ಬಂಟ್ವಾಳ ಮತ್ತು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.

ಶಶಿರಾಜ್ ಶೆಟ್ಟಿ ಎಂಬ ಕಾರ್ಯಕರ್ತ ನಿರಪರಾಧಿಯಾಗಿದ್ದರೂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧನವಾಗಿದೆ. ಅದನ್ನು ವಿಚಾರಿಸಿದಕ್ಕಾಗಿ ಶಾಸಕನಾದ ನನ್ನ ಮೇಲೆ ಕೇಸ್ ಆಗಿದೆ. ಪ್ರಮೋದ್ ಗೌಡ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದರೂ ಅವರು ತಹಶೀಲ್ದಾರರಿಗೆ ಹಣ ಕೊಡದಿರುವುದೇ ಕೇಸ್ ಮಾಡಲು ಕಾರಣ. ತಾಲೂಕು ಕಚೇರಿಯಲ್ಲಿ, ಪೊಲೀಸ್ ಇಲಾಖೆಯಲ್ಲಿ ಮೊದಲಿಗಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ವ್ಯಾಪಕ ಭ್ರಷ್ಟಾಚಾರವಿದೆ. ಕಾಂಗ್ರೆಸ್ ಏಜೆಂಟರಂತೆ ಇಲಾಖೆಯವರು ವರ್ತಿಸುತ್ತಿದ್ದಾರೆ. ಅವರ ಕುಮ್ಮಕ್ಕಿನಿಂದ ಕೇಸು ಆಗಿದೆ ಮತ್ತು ಭ್ರಷ್ಟಾಚಾರ ನಡೆಯುತ್ತಿದೆ. ಅದರ ವಿರುದ್ದ ಹೋರಾಟ ಮಾಡುತ್ತೇವೆ. ಅಕ್ರಮ ವ್ಯವಹಾರಗಳನ್ನು ಭ್ರಷ್ಟಾಚಾರಗಳನ್ನು ಕಾಂಗ್ರೆಸ್‌ನವರೇ ಆಗಲಿ ಬಿಜೆಪಿಯವರೇ ಆಗಲಿ ಯಾರೇ ಮಾಡಿದರೂ ಕೇಸು ಮಾಡಿ. ಇಲ್ಲದಿದ್ದರೆ ನಾವೇ ರೈಡ್ ಮಾಡಿ ನಿಲ್ಲಿಸುತ್ತೇವೆ, ಕಾರ್ಯಕರ್ತರ ಮೇಲೆ ಅನ್ಯಾಯವಾದಲ್ಲಿ ಅದನ್ನು ಪ್ರತಿಭಟಿಸುತ್ತೇವೆ. ಪೊಲೀಸರ ಕಾಲರ್‌ಗೆ ಕೈ ಹಾಕಿ ಎಳೆದು ಹಾಕುತ್ತೇನೆ. ಅದಕ್ಕಾಗಿ ಕೇಸ್ ಆದರೂ ಪರವಾಗಿಲ್ಲ, ಬೇಲ್ ತೆಗೆದುಕೊಳ್ಳದೆ ಜೈಲಿಗೆ ಹೋಗಲು ಸಿದ್ದ ಎಂದು ಶಾಸಕ ಹರೀಶ್ ಪೂಂಜರು ಘೋಷಿಸಿದ್ದರು. ಅದಕ್ಕೆ ಅಲ್ಲಿ ಸೇರಿದ ಎಲ್ಲರೂ ಬೆಂಬಲ ಸೂಚಿಸಿದ್ದರು.

ಲಂಚ, ಭ್ರಷ್ಟಾಚಾರದ ವಿರುದ್ಧದ ಶಾಸಕ ಹರೀಶ್ ಪೂಂಜ ಮತ್ತು ಅವರ ತಂಡದ ಈ ಹೋರಾಟಕ್ಕೆ ಸುದ್ದಿ ಜನಾಂದೋಲನ ವೇದಿಕೆ ಬೆಂಬಲ ಘೋಷಿಸಿದೆ. ಅಲ್ಲಿ ನಡೆದ, ಭಾಷಣದ ಕೆಲವು ವಿಷಯಗಳಿಗೆ ಮತ್ತು ಕಾನೂನು ಬಾಹಿರ ವಿಚಾರಗಳಿಗೆ ಆಂದೋಲನದ ಬೆಂಬಲವಿಲ್ಲ. ಪ್ರಜಾಸತ್ತಾತ್ಮಕ ಹೋರಾಟಕ್ಕೆ ಮಾತ್ರ ಸಂಪೂರ್ಣ ಬೆಂಬಲ ಎಂದು ಹೇಳಿಕೆ ನೀಡಿದ್ದೇವೆ. ಶಾಸಕರು ಜನಸೇವಕರು, ರಾಜರಲ್ಲ. ಅಧಿಕಾರಿಗಳು ಜನಸೇವಕರು, ಪ್ರಜೆಗಳು ರಾಜರು ಎಂಬುವುದನ್ನು ಅವರ ಗಮನಕ್ಕೆ ತಂದಿದ್ದೇವೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರು ಲಂಚ, ಭ್ರಷ್ಟಾಚಾರದ ವಿರುದ್ದ ನಡೆಸುತ್ತಿರುವ ಕಾರ್ಯಾಚರಣೆಯನ್ನು ವಿವರಿಸಿದ್ದೇವೆ. ಆ ವಿವರಣೆಗಳನ್ನು ಜನರು ತಿಳಿಯಲಿಕ್ಕಾಗಿ ಶಾಸಕ ಹರೀಶ್ ಪೂಂಜರು ಮಾಡಿದ ಭಾಷಣದ ವೀಡಿಯೋ ಮತ್ತು ಸುದ್ದಿ ಜನಾಂದೋಲನ ವೇದಿಕೆಯ ವತಿಯಿಂದ ನೀಡಿದ ಹೇಳಿಕೆಗಳ ವೀಡಿಯೋವನ್ನು ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಗೊಳಿಸಿದ್ದೇವೆ. ಈ ಹೋರಾಟಕ್ಕೆ ಜನತೆಯ ಬೆಂಬಲವನ್ನು ಕೋರುತ್ತಿದ್ದೇವೆ.

ಡಾ. ಯು.ಪಿ. ಶಿವಾನಂದ, ಸುದ್ದಿ ಜನಾಂದೋಲನ ವೇದಿಕೆ ಸುಳ್ಯ, ಪುತ್ತೂರು, ಬೆಳ್ತಂಗಡಿ

LEAVE A REPLY

Please enter your comment!
Please enter your name here