ರೋಟರಿ ಕ್ಲಬ್ ಪುತ್ತೂರು ಯುವ-ಅಧ್ಯಕ್ಷೆ:ಅಶ್ವಿನಿಕೃಷ್ಣ,ಕಾರ್ಯದರ್ಶಿ:ವಚನ ಜಯರಾಮ್,ಕೋಶಾಧಿಕಾರಿ:ಅಭಿಷ್ ಕೆ

0

ಪುತ್ತೂರು:ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಯುವ ಇದರ 2024-25ನೇ ಸಾಲಿನ ಅಧ್ಯಕ್ಷೆಯಾಗಿ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿಯಾಗಿ ವಚನ ಜಯರಾಮ್, ಕೋಶಾಧಿಕಾರಿಯಾಗಿ ಅಭಿಷ್ ಕೆ.ರವರು ಆಯ್ಕೆಯಾಗಿದ್ದಾರೆ.


ಉಳಿದಂತೆ ಉಪಾಧ್ಯಕ್ಷ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಕುಸುಮ್‌ರಾಜ್, ನಿಕಟಪೂರ್ವ ಅಧ್ಯಕ್ಷರಾಗಿ ಪಶುಪತಿ ಶರ್ಮ, ಜೊತೆ ಕಾರ್ಯದರ್ಶಿಯಾಗಿ ವೀಕ್ಷಾ ಪಾದೆ, ಬುಲೆಟಿನ್ ಸಂಪಾದಕರಾಗಿ ಡಾ|ದೀಪಕ್ ಕೆ.ಬಿ, ಸಾರ್ಜಂಟ್ ಎಟ್ ಆರ್ಮ್ಸ್ ಆಗಿ ತ್ರಿವೇಣಿ ಗಣೇಶ್, ಕ್ಲಬ್ ಕಲಿಕಾ ಮಾರ್ಗದರ್ಶಕರಾಗಿ ಉಮೇಶ್ ನಾಯಕ್, ಸಮುದಾಯ ಸೇವಾ ವಿಭಾಗದ ನಿರ್ದೇಶಕರಾಗಿ ನಿಹಾಲ್ ಶೆಟ್ಟಿ, ವೃತ್ತಿಪರ ಸೇವಾ ವಿಭಾಗದ ನಿರ್ದೇಶಕರಾಗಿ ಗೌರವ್ ಭಾರದ್ವಾಜ್, ಅಂತರ್ರಾಷ್ಟ್ರೀಯ ಸೇವಾ ವಿಭಾಗದ ನಿರ್ದೇಶಕರಾಗಿ ವಿನಿತ್ ಶೆಣೈ, ಯುವಜನ ಸೇವಾ ವಿಭಾಗದ ನಿರ್ದೇಶಕರಾಗಿ ಸುದರ್ಶನ್ ರೈ, ಚೇರ್ಮನ್‌ಗಳಾಗಿ ಡಾ.ಯದುರಾಜ್(ಸದಸ್ಯತನ ಅಭಿವೃದ್ಧಿ), ಸ್ವಸ್ತಿಕ ಶೆಟ್ಟಿ(ಟಿಆರ್‌ಎಫ್), ಸುದರ್ಶನ್ ಹಾರಕೆರೆ(ಪಬ್ಲಿಕ್ ಇಮೇಜ್), ಕನಿಷ್ಕಾ(ಸಿಎಲ್‌ಸಿಸಿ/ವಿನ್ಸ್), ರತ್ನಾಕರ್ ರೈ(ಜಿಲ್ಲಾ ಯೋಜನೆ), ಸೋನಾ ಪ್ರದೀಪ್(ಪೋಲಿಯೋ ಪ್ಲಸ್)ರವರು ಆಯ್ಕೆಯಾಗಿದ್ದಾರೆ.


ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಅಶ್ವಿನಿಕೃಷ್ಣ ಮುಳಿಯರವರು ಪುತ್ತೂರಿನ ಸಮೀಪದ ಪಾಣಾಜೆ ಎಂಬ ಹಳ್ಳಿಯಲ್ಲಿ ಜನಿಸಿದ್ದು, ಬಿಇ ಹಾಗೂ ಎಂಬಿಎ ಪದವೀಧರರಾಗಿರುತ್ತಾರೆ. ಪ್ರಸ್ತುತ “ಮುಳಿಯ ಜ್ಯುವೆಲ್ಸ್”ನ ನಿರ್ದೇಶಕರಾಗಿರುವ ಇವರು ಇವರ ಕುಟುಂಬದ ಸದಸ್ಯರೆಲ್ಲರೂ ರೋಟರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೆಸಿಐ ಸಂಸ್ಥೆಯ ಸದಸ್ಯೆಯಾಗಿದ್ದು, ಮಾಜಿ ಅಧ್ಯಕ್ಷರಾಗಿ, ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಪತಿ ಕೃಷ್ಣನಾರಾಯಣ್ ಮುಳಿಯ, ಪುತ್ರಿ ಇಶಾ ಸುಲೋಚನಾ ಮುಳಿಯ, ಪುತ್ರ ಮುಕುಂದ ಮುಳಿಯರವರನ್ನು ಹೊಂದಿದ್ದು ರೋಟರಿ ಫೌಂಡೇಶನ್‌ನ ಬಿಕ್ವೆಸ್ಟ್ ಸೊಸೈಟಿಯ ಸದಸ್ಯರಾಗಿದ್ದಾರೆ.


ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ವಚನ ಜಯರಾಮ್‌ರವರು ಪುತ್ತೂರಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿ, ನಿಟ್ಟೆಯಲ್ಲಿ ಮಾಹಿತಿ ವಿಜ್ಞಾನದಲ್ಲಿ ಬಿಇ ಪದವಿಯನ್ನು ಪಡೆದಿರುತ್ತಾರೆ. ಬೆಂಗಳೂರಿನಲ್ಲಿ 18 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ವಚನ ಜಯರಾಮ್‌ರವರಿ ಇದೀಗ ಸಮಾಜ ಸೇವೆಯ ಉದ್ಧೇಶದೊಂದಿಗೆ ಪುತ್ತೂರಿಗೆ ಆಗಮಿಸಿರುತ್ತಾರೆ. ಹಲವು ಶಿಕ್ಷಣ ಸಂಸ್ಥೆಗಳ ಸಲಹಾ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಪತಿ ಪ್ರದೀಪ್ ರಾಮಕೃಷ್ಣ ಗೌಡ, ಪುತ್ರ ಯುದಿಷ್ಟಿರ್ ಗೌಡರವರೊಂದಿಗೆ ವಾಸ್ತವ್ಯ ಹೊಂದಿದ್ದು ಹವ್ಯಾಸಿ ಜೀವನ ತರಬೇತುದಾರರೂ ಆಗಿದ್ದಾರೆ.


ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಅಭಿಷ್ ಕೆ.ಸುಬ್ರಾಯ ನಾಕ್ ಹಾಗೂ ದಿ.ಪುಷ್ಪಾ ಎಸ್.ನಾಕ್ ದಂಪತಿ ಪುತ್ರನಾಗಿ ಜನಿಸಿದ್ದು, ವಿವೇಕಾನಂದ ಕಾಲೇಜಿನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ ಪಡೆದಿದ್ದಾರೆ. ಪ್ರಸ್ತುತ ಬೊಳ್ವಾರಿನಲ್ಲಿ ಕಾರ್ಯಾಚರಿಸುತ್ತಿರುವ ಸಪ್ತಗಿರಿ ಸ್ಟೀಲ್ಸ್ ಆಂಡ್ ಮೆಟಲ್ಸ್ ಹಾಗೂ ಸಪ್ತಗಿರಿ ಕನ್‌ಸ್ಟ್ರಕ್ಷನ್ ಆಂಡ್ ರಿಯಲ್ ಎಸ್ಟೇಟ್ ಇದರ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2018ರಲ್ಲಿ ರೋಟರಿ ಯುವಕ್ಕೆ ಸೇರ್ಪಡೆಯಾದ ಬಳಿಕ ಕ್ಲಬ್‌ನಲ್ಲಿ ಸಾರ್ಜಂಟ್ ಎಟ್ ಆರ್ಮ್ಸ್, ಜೊತೆ ಕಾರ್ಯದರ್ಶಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.


ಜು.10 ರಂದು ಪದ ಪ್ರದಾನ..
ಜು.10 ರಂದು ರೋಟರಿ ಬ್ಲಡ್ ಬ್ಯಾಂಕ್ ಬಳಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜರಗಲಿದ್ದು, ರೋಟರಿ ಜಿಲ್ಲೆ ೩೧೮೨ ಇದರ ಮಾಜಿ ಜಿಲ್ಲಾ ಗವರ್ನರ್ ಡಾ.ಜಯಗೌರಿ ಹಡಿಗಾಲ್‌ರವರು ಪದ ಪ್ರದಾನವನ್ನು ನೆರವೇರಿಸಲಿದ್ದಾರೆ. ಗೌರವ ಉಪಸ್ಥಿತಿಯಾಗಿ ರೋಟರಿ ಜಿಲ್ಲೆ 3181, ವಲಯ ಐದರ ಸಹಾಯಕ ಗವರ್ನರ್ ಡಾ.ಹರ್ಷಕುಮಾರ್ ರೈ, ವಲಯ ಸೇನಾನಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆರವರು ಭಾಗವಹಿಸಲಿದ್ದಾರೆ ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here