





ಪುತ್ತೂರು: ಮಾಹಿ ಚಿತ್ರದ ಪ್ರಥಮ ಪ್ರಿಮಿಯರ್ ಶೋ ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ನಡೆಯಿತು. ಒಟ್ಟು ನಾಲ್ಕು ಶೋ ಗಳು ನಡೆದಿದ್ದು ಇದರಲ್ಲಿ ಎಲ್ಲಾ ಶೋ ಗಳು ಭರ್ತಿಯಾಗಿದ್ದವು.


ಈ ನಾಲ್ಕೂ ಶೋ ಗಳಲ್ಲಿ ಅತಿಥಿ ಅಭ್ಯಾಗತರಾಗಿ ಅನೇಕ ಗಣ್ಯರು ಆಗಮಿಸಿದ್ದರು. ವಿಜಯ್ ಸಾಮ್ರಾಟ್ ನ ಅಧ್ಯಕ್ಷ ಸಹಜ್ ರೈ, ಹಿಂದೂಪರ ಸಂಘಟನೆಗಾರ ಅರುಣ್ ಕುಮಾರ್ ಪುತ್ತಿಲ, ಚಲನಚಿತ್ರ ನಟ ಎಂಕೆ ಮಠ, ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಸ್ಥಾನದ ಅನುವoಶೀಯ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ರೈ, ಸುದ್ದಿ ನ್ಯೂಸ್ ಚಾನೆಲ್ ಪ್ರಧಾನ ನಿರೂಪಕಿ ಹೇಮಾ ಜಯರಾಮ್ ರೈ, ಚಲನಚಿತ್ರ ನಿರ್ದೇಶಕರಾದ ನಿತಿನ್ ರೈ ಕುಕ್ಕುವಳ್ಳಿ, ಚಲನಚಿತ್ರ ವಿತರಕರಾದ ಬಾಲಕೃಷ್ಣ ಶೆಟ್ಟಿ, ಈಶ್ವರಮಂಗಲ ಗಜಾನನ ಶಾಲೆಯ ಸಂಚಾಲಕ ಅಚ್ಚುತ ಮೂಡಿತ್ತಾಯ, ತುಳುನಾಡ ವಾರ್ತೆ ಯ ಸಂಪಾದಕ ಪುನೀತ್,ಚಾವಡಿ ಪೇಜ್ ನ ಮುಖ್ಯಸ್ಥ ಪ್ರಸಾದ್ ಕುಮಾರ್, ಶ್ರೀನಾಥ್ ಡವಾರ್, ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ, ಉಮೇಶ್ ನಾಯಕ್, ಸಾಯಿಶ್ರುತಿ ಪಿಲಿಕಜೆ, ಜೋಹನ್, ಹೇಮನಾಥ ಶೆಟ್ಟಿ ಕಾವು, ಕೃಷ್ಣಪ್ರಸಾದ್ ಆಳ್ವ, ವಿನೋದ್ ರೈ ಗುತ್ತು, ಭಾಗ್ಯೇಶ್ ರೈ, ಪ್ರಸಾದ್ ಶಾನುಭೋಗ, ಜಯಂತ್ ನಡುಬೈಲು, ವಿಜಯ್ ಹರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.





ಈ ಚಿತ್ರವನ್ನು ಕೀರ್ತನ್ ಶೆಟ್ಟಿ ನಿರ್ದೇಶಿಸಿ, ಅಜಿತ್ ಬಿಟಿ ನಿರ್ಮಿಸಿದ್ದಾರೆ. ಸುಪ್ರೀತ ಕೆ ಎಸ್, ಜೈದೀಪ್ ಕೊರಂಗ, ಹಿತಾಶ್ರೀ ಶೆಟ್ಟಿ ಇವರ ಸಹಬರಹದಲ್ಲಿ, ಪ್ರಶಾಂತ್ ಶೇಣಿಯವರ ಛಾಯಾಗ್ರಾಹಣದಲ್ಲಿ, ಶ್ರೀನಾಥ್ ಪಾವೂರ್ ಇವರ ಸಂಕಲನದಲ್ಲಿ, ರೋಹಿತ್ ಪೂಜಾರಿ ಇವರ ಸಂಗೀತದಲ್ಲಿ, ಈ ಚಿತ್ರ ಮೂಡಿ ಬಂದಿದೆ. ಚಿತ್ರದ ಇನ್ನೊಂದು ಪ್ರಿಮಿಯರ್ ಶೋ ಸದ್ಯದಲ್ಲೇ ಆಯೋಜಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.










