ಪಂಜಳ: ಶಾಂತಿಗಿರಿ ವಿದ್ಯಾ ನಿಕೇತನ ಶಾಲಾ ಮಂತ್ರಿ ಮಂಡಲ ರಚನೆ

0

ಪುತ್ತೂರು:ಶಾಂತಿಗಿರಿ ವಿದ್ಯಾ ನಿಕೇತನ ಶಾಲೆಯ 2024- 25 ನೇ ಶೈಕ್ಷಣಿಕ ಸಾಲಿನ ಮಂತ್ರಿಮಂಡಲವನ್ನು ರಚಿಸಲಾಯಿತು.
ಮತದಾನದ ಮೂಲಕ ಶಾಲಾ ನಾಯಕರನ್ನು ಆಯ್ಕೆ ಮಾಡಲಾಗಿದ್ದು, 2024- 25ನೇ ಸಾಲಿನ ಶಾಲಾ ನಾಯಕನಾಗಿ ಮಾ.ಮುಹಮ್ಮದ್ ಶಹೀಮ್ ಎಂ.(7 ನೇ ತರಗತಿ) ಹಾಗೂ ಉಪನಾಯಕಿಯಾಗಿ ಕು.ಸೋನಾಲಿ ರೈ ಪಿ (5 ನೇ ತರಗತಿ) ಇವರು ಆಯ್ಕೆಯಾಗಿರುತ್ತಾರೆ. ಈ ಚುನಾವಣಾ ಪ್ರಕ್ರಿಯೆ ಮೂಲಕ ವಿದ್ಯಾರ್ಥಿಗಳಿಗೆ ಮತದಾನದ ಚುನಾವಣಾ ಅರಿವನ್ನು ಮೂಡಿಸಲಾಯಿತು. ಈ ಚುನಾವಣಾ ಪ್ರಕ್ರಿಯೆಯಲ್ಲಿ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದದವರು ಸಹಕಾರ ನೀಡಿದ್ದರು. ಆಯ್ಕೆಯಾದ ಶಾಲಾ ನಾಯಕರನ್ನು ಮುಖ್ಯ ಶಿಕ್ಷಕಿ ಶ್ರೀಮತಿ ಅಸ್ವತಿ ಅರವಿಂದ್ ರವರು ಅಭಿನಂದಿಸಿದರು .

LEAVE A REPLY

Please enter your comment!
Please enter your name here