ಪುತ್ತೂರು: ಸವಣೂರು ಪದ್ಮಾಂಭಾ ಪೆಟ್ರೋಲ್ ಪಂಪ್ ಹತ್ತಿರ ವಿದ್ಯಾರಶ್ಮಿ ಕ್ಯಾಂಟೀನ್ (ಮಾಂಸಾಹಾರಿ ಮತ್ತು ಸಸ್ಯಹಾರಿ ಊಟ ಮತ್ತು ಉಪಹಾರದ ಹೋಟೆಲ್) ಜು. 9 ರಂದು ಹೊಸ ಆಡಳಿತದೊಂದಿಗೆ ಶುಭಾರಂಭಗೊಂಡಿತು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರು ದೀಪ ಬೆಳಗಿಸಿ, ವಿದ್ಯಾರಶ್ಮಿ ಕ್ಯಾಂಟೀನ್ ಅನ್ನು ಉದ್ಘಾಟಿಸಿ, ಶುಭಕೋರಿದರು. ಅರ್ಚಕ ಶಿವ ಭಟ್ ಸಾಮಗಾನರವರು ಪೂಜಾ ವಿಧಿವಿಧಾನವನ್ನು ನಡೆಸಿಕೊಟ್ಟರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಆಶ್ವಿನ್ ಎಲ್ ಶೆಟ್ಟಿ, ವಿದ್ಯಾರಶ್ಮಿ ಸಂಸ್ಥೆಯ ಟ್ರಸ್ಟಿಗಳಾದ ರಶ್ಮಿ ಆಶ್ವಿನ್ ಶೆಟ್ಟಿ, ಎನ್.ಸುಂದರ ರೈ ಸವಣೂರು, ಪ್ರಾಂಶುಪಾಲರುಗಳಾದ ಸೀತಾರಾಮ ಕೇವಳ, ಡಾ. ನಾರಾಯಣ ಮೂರ್ತಿ, ವಿದ್ಯಾರಶ್ಮಿ ಹುಡುಗರ ವಸತಿ ನಿಲಯದ ವಾರ್ಡನ್ ಕೃಷ್ಣಪ್ಪ ಬಿ.ಕೆ, ವಿದ್ಯಾರಶ್ಮಿ ಹುಡುಗಿಯರ ವಸತಿ ನಿಲಯದ ವಾರ್ಡನ್ ಪೂರ್ಣಿಮ, ಶಿಕ್ಷಕಿ ಲಿಖಿತ, ಪದ್ಮಾಂಭ ಪೆಟ್ರೋಲ್ ಪಂಪ್ ಮೇನೇಜರ್ ಗಣೇಶ್ ರೈ, ವಿದ್ಯಾರಶ್ಮಿ ಸಂಸ್ಥೆಯ ಸಿಬ್ಬಂಧಿಗಳಾದ ಜಯರಾಮ ರೈ ಮೂಡಂಬೈಲು, ಬಾಲಚಂದ್ರ ರೈ ಕೆರೆಕೋಡಿ, ಲಲಿತಾ, ರೋಹಿಣಿ, ಶೀಲಾ, ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರಶ್ಮಿ ಕ್ಯಾಂಟೀನ್ ಮೇನೇಜರ್ ದಿನೇಶ್ ಶೆಟ್ಟಿ ಸ್ವಾಗತಿಸಿ, ಅತಿಥಿಗಳನ್ನು ಗೌರವಿಸಿದರು. ನಿಶಾ ದಿನೇಶ್ ಶೆಟ್ಟಿ, ಯೋಗೀಶ್ ಶೆಟ್ಟಿ, ಮೀನಾಕ್ಷಿ ಶೆಟ್ಟಿ ಕಾರ್‍ಯಕ್ರಮದಲ್ಲಿ ಸಹಕರಿಸಿದರು
ಶುಚಿ-ರುಚಿಯಾದ ಊಟ, ಉಪಹಾರ
ಸವಣೂರು ವಿದ್ಯಾರಶ್ಮಿ ಕ್ಯಾಂಟೀನ್ನಲ್ಲಿ ಶುಚಿ-ರುಚಿಯಾದ ಮಾಂಸಾಹಾರಿ ಮತ್ತು ಸಸ್ಯಹಾರಿ ಊಟ-ಉಪಹಾರದ ವ್ಯವಸ್ಥೆ ಇದ್ದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬಿರಿಯಾಣಿ, ವಿವಿಧ ರೀತಿಯ ಮೀನು ಮತ್ತು ಚಿಕನ್ ಪದಾರ್ಥಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು.
-ದಿನೇಶ್ ಶೆಟ್ಟಿ ಮೇನೇಜರ್ ವಿದ್ಯಾರಶ್ಮಿ ಕ್ಯಾಂಟೀನ್