ಪುತ್ತೂರು: ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಇದರ ಪುತ್ತೂರು ತಾಲೂಕು ಆದಿದ್ರಾವಿಡ ಯುವ ವೇದಿಕೆ ರಚನೆ ಮತ್ತು ಮಾಹಿತಿ ಕಾರ್ಯಾಗಾರವು ಜು. 7 ರಂದು ಸಂಪ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಿದ್ರಾವಿಡ ಸಮಾಜ ಸೇವಾ ಸಂಘ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಬಾಬು ಮರಿಕೆ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಾನಂದ ಬಲ್ಲಾಳ್ ಬಾಗ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಪುತ್ತೂರು ಘಟಕದ ಗೌರವಾಧ್ಯಕ್ಷ ಸೋಮನಾಥ ಉಪ್ಪಿನಂಗಡಿ, ಕಾರ್ಯದರ್ಶಿ ರಮೇಶ್ ಉಳ್ಳಾಲ್ , ಸಂಚಾಲಕ ಪ್ರೇಮನಾಥ ಪಿ.ಬಿ, ಜೊತೆ ಕಾರ್ಯದರ್ಶಿ ತನಿಯಪ್ಪ ಪಡ್ಡಾಯೂರು ,ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಗೌರವ ಸಲಹೆಗಾರರಾದ ಮೋಹನ್ ನೆಲ್ಲಿಗುಂಡಿ, ದಕ್ಷಿಣ ಕನ್ನಡ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಅರ್ಬಿಗುಡ್ಡೆ , ಹಿರಿಯ ಆದಿದ್ರಾವಿಡ ಮುಖಂಡರಾದ ಬಾಬು ಜಾಲ್ಸೂರು, ಸುಳ್ಯ ಘಟಕದ ಅಧ್ಯಕ್ಷ ಬಾಲಕೃಷ್ಣ ದೊಡ್ಡೇರಿ, ಪುತ್ತೂರು ತಾಲೂಕು ಘಟಕದ ಗೌರವಾಧ್ಯಕ್ಷರಾದ ಲೋಹಿತ್ ಅಮ್ಚಿನಡ್ಕ , ವಕೀಲ ಸುರೇಂದ್ರ ಧರ್ಮನಗರ , ಆದಿದ್ರಾವಿಡ ಮುಖಂಡರಾದ ಸುರೇಶ್ ಸಂಪ್ಯ, ಜಯಣ್ಣ ಕಾರೆಕಾಡು , ಅಣ್ಣಪ್ಪ ನೆಹರೂನಗರ, ನಿಕಟಪೂರ್ವ ಕಾರ್ಯದರ್ಶಿ ಅಣ್ಣು ತಿಂಗಳಾಡಿ ಮುಂತಾದವರು ಉಪಸ್ಥಿತರಿದ್ದರು.
ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆಯ ಆರಕ್ಷಕರಾದ ಪಿ.ಎಸ್.ವೆಂಕಪ್ಪ ಇವರು ಯುವವೇದಿಕೆಯ ರಚನೆ ಮತ್ತು ಮುಂದಿನ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಸಂವಿಧಾನದಲ್ಲಿ ನಮಗೆ ಇರುವ ಹಕ್ಕುಗಳ ಬಗ್ಗೆ ತಿಳಿದುಕೊಂಡು ,ಅಂಬೇಡ್ಕರ್ ರವರ ಚಿಂತನೆಗಳನ್ನು ಅರಿತು ಕೊಂಡು ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಳ್ಳಬೇಕು. ಹಿರಿಯರಿಗೆ ಗೌರವ ನೀಡುವುದು, ಅವರ ಸೇವೆ ಮಾಡುವುದು ಯುವಕರ ಧ್ಯೇಯವಾಗ ಬೇಕು , ಶಿಕ್ಷಣವನ್ನು ಪಡೆಯುವ ಮೂಲಕ ಸಂಘಟಿತರಾಗಿರಿ ಎಂದು ಯುವಕರಿಗೆ ಕರೆನೀಡಿದರು.
ಚೆನ್ನಪ್ಪ ಮರಿಕೆ ಪ್ರಾರ್ಥನೆಗೈದರು. ಅಣ್ಣು ತಿಂಗಳಾಡಿ ಸ್ವಾಗತಿಸಿ, ಕೆ ಕೆ ಮಾಸ್ಟರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೋಹಿತ್ ಅಮ್ಚಿನಡ್ಕ ಧನ್ಯವಾದವಿತ್ತರು. ಪ್ರಸಾದ್ ಶೇಡಿಗುರಿ ಕಾರ್ಯಕ್ರಮ ನಿರೂಪಿಸಿದರು.
ಆ ಬಳಿಕ ಪುತ್ತೂರು ತಾಲೂಕು ಆದಿದ್ರಾವಿಡ ಯುವವೇದಿಕೆಯನ್ನು ರಚನೆ ಮಾಡಲಾಗಿ, ಅಧ್ಯಕ್ಷರಾಗಿ ಮಹೇಶ್ ಮರಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಶಿವ ಗುತ್ತು, ಕೋಶಾಧಿಕಾರಿ ಕರುಣಾಕರ ಬೈಲಾಡಿ, ಉಪಾಧ್ಯಕ್ಷರಾಗಿ ಪ್ರಸಾದ್ ಸೇಡಿಗುರಿ, ವರುಣ್ ತಿಂಗಳಾಡಿ, ರಂಜನ್ ತೋಟದ ಮೂಲೆ ,ಪ್ರವೀಣ್ ಅಮ್ಚಿನಡ್ಕ, ಪ್ರಕಾಶ್ ಹಾರಾಡಿ ,ಜೊತೆ ಕಾರ್ಯದರ್ಶಿಯಾಗಿ ಹೊನ್ನಪ್ಪ ಜಿಡೆ ಕಲ್ಲು, ಸಂಘಟನಾ ಕಾರ್ಯದರ್ಶಿಗಳಾಗಿ ಶೇಖರ ಬ್ರಹ್ಮನಗರ,ರವಿ ಕಜೆಕ್ಕಾರು, ಬಾಲಕೃಷ್ಣ ಭಕ್ತಕೋಡಿ ,ರಂಜಿತ್ ಮೈರೋಳು, ಯೋಗೇಶ್ ಪುರುಷರ ಕಟ್ಟೆ , ಭಾಸ್ಕರ ನೆಲ್ಲಿ ಗುಂಡಿ ಕ್ರೀಡಾ ಕಾರ್ಯದರ್ಶಿಗಳಾಗಿ ಸತೀಶ್ ಪರ್ಲಡ್ಕ , ಪ್ರಶಾಂತ್ ಮರಿಕೆ , ನವೀನ್ ಈಶ್ವರ ಮಂಗಳ , ಸಂದೇಶ್ ಕಜೆಕ್ಕಾರ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರವಿ ರಾಮನಗರ, ರವಿ ಬೆಟ್ಟಂಪಾಡಿ ,ರವಿ ಶೇಡಿಗುರಿ, ಪ್ರಶಾಂತ ಪರ್ಲಡ್ಕ, ಗೌರವಾಧ್ಯಕ್ಷರಾಗಿ ಸುರೇಶ್ ಆರ್ಯಾಪು, ಸಾಂತಪ್ಪ ಸಜಂಕಾಡಿ, ಸಲಹೆಗಾರರಾಗಿ ಸುರೇಂದ್ರ ಧರ್ಮನಗರ , ಕೆ ಕೆ ಮಾಸ್ಟರ್, ಅಣ್ಣು ತಿಂಗಳಾಡಿ, ರಾಮು ಸಂಟ್ಯಾರ್ , ಉಪೇಂದ್ರ ಇವರುಗಳನ್ನು ಆಯ್ಕೆ ಮಾಡಲಾಯಿತು.
ಯುವವೇದಿಕೆಯ ರಚನೆಯನ್ನು ಆದಿದ್ರಾವಿಡ ಮುಖಂಡರಾದ ಮೋಹನ್ ನೆಲ್ಲಿಗುಂಡಿ ನಿರ್ವಹಿಸಿದರು.