





ನಿಡ್ಪಳ್ಳಿ; ಶ್ರೀ ಕಾರ್ತಿಕೇಯ ಭಜನಾ ಮಂಡಳಿ ವತಿಯಿಂದ ಅಗಸ್ಟ್.16 ರಂದು ನಡೆಯಲಿರುವ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಆರ್ಲಪದವು ಶ್ರೀ ದುರ್ಗಾ ಸಭಾಭವನದಲ್ಲಿ ಜು.10 ರಂದು ನಡೆಯಿತು.


ಖ್ಯಾತ ದಾಸ ಭಜನಾ ಸಂಕೀರ್ತನಾಕಾರ ರಾಮಕೃಷ್ಣ ಕಾಟುಕುಕ್ಕೆ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಪುರೋಹಿತ ಶ್ರೀಕೃಷ್ಣ ಭಟ್ ಬಟ್ಯಮೂಲೆ, ನಿವೃತ್ತ ಮುಖ್ಯ ಗುರು ಬಿ.ಎಸ್.ಒಕುಣ್ಣಾಯ, ನಿವೃತ್ತ ಯೋಧ ರಮಾನಾಥ ರೈ ಪಡ್ಯಂಬೆಟ್ಟು, ಸದಾಶಿವ ರೈ ಸೂರಂಬೈಲು, ಸ್ನೇಹ ಟೆಕ್ಸ್ ಟೈಲ್ಸ್ ಮಾಲಕ ವರದರಾಜ ನಾಯಕ್, ಜಯರಾಮ ಆಳ್ವ ಸೂರಂಬೈಲು, ಯೋಜನೆಯ ಸೇವಾ ಪ್ರತಿನಿಧಿ ಜಯಶ್ರೀ. ಡಿ, ಮಮತಾ, ಶಂಕರಿ, ದುರ್ಗಾ ಸಭಾಭಾವನದ ಮಾಲಕ ಸುಬ್ರಹ್ಮಣ್ಯ ಭಟ್, ಕೆ.ಎಸ್.ಅರ್.ಟಿ.ಸಿಯ ನಿವೃತ್ತ ಅಧಿಕಾರಿ ತಮ್ಮಣ್ಣ ನಾಯ್ಕ, ಪೂಜಾ ಸಮಿತಿ ಅಧ್ಯಕ್ಷೆ ದುರ್ಗಾಂಬಿಕಾ ಆಳ್ವ, ಕಾರ್ಯದರ್ಶಿ ಜಯಶೀಲ, ಕಾರ್ತಿಕೇಯ ಭಜನಾ ಮಂಡಳಿ ಅಧ್ಯಕ್ಷೆ ಶಾರದಾ ಗೋಪಾಲ, ಕಾರ್ಯದರ್ಶಿ ಸುಜಾತ.ಕೆ, ಭಜನಾ ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯರಾದ ಮಮತಾ, ಹರಿಣಾಕ್ಷಿ ರೈ, ಸುಪ್ರೀತಾ, ಸೌಮ್ಯ, ಇಂದಿರಾ, ನಮಿತಾ, ಸವಿತಾ, ಶಶಿಕಲಾ, ವಾರಿಜ, ತಾರಾ ರೈ, ರತ್ನಾಕುಮಾರಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.













