ಪುತ್ತೂರು: ಬೂರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಇಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಮಾಹಿತಿ ಕಾರ್ಯಾಗಾರ ನಡೆಯಿತು.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಿದ್ದಣ್ಣ ಪಾಟೀಲ್ ಹಾಗೂ ಆರೋಗ್ಯ ಸಹಾಯಕಿ ಸಂಧ್ಯಾ ಪಿ ವಿದ್ಯಾರ್ಥಿಗಳಿಗೆ ಡೆಂಗ್ಯೂ ಜ್ವರ ಹೇಗೆ ಬರುತ್ತದೆ,ಅದರ ಲಕ್ಷಣಗಳನ್ನು ತಿಳಿಸಿ ಡೆಂಗ್ಯೂ ಬರದ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಈಡೀಸ್ ಎಂಬ ಸೊಳ್ಳೆ ಕಚ್ಚಿ ಡೆಂಗ್ಯೂ ಹರಡುತ್ತೆ. ತೆಂಗಿನ ಚಿಪ್ಪಿನಲ್ಲಿ ,ನಿಂತ ನೀರಿನಲ್ಲಿ ತಿಂದು ಬಿಸಾಡಿದ ಸಿಪ್ಪೆಗಳಿಂದ, ಕುರುಕಲು ತಿಂಡಿ ತಿಂದು ಅದರ ಪ್ಲಾಸ್ಟಿಕ್ ಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತದೆ. ಅದಕ್ಕಾಗಿ ನಾವೆಲ್ಲ ಮನೆಯ ಹಾಗೂ ಶಾಲೆಯ ಸುತ್ತ ಅಕ್ಕ ಪಕ್ಕ ಸ್ವಚ್ಚವಾಗಿಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಶಿಕ್ಷಕಿ ಜಯಶ್ರೀ ಬಿ ಸಾಲ್ಯಾನ್ ರವರು ನೆರವೇರಿಸಿದರು. ಶೇಖ್ ಜಲಾಲುದ್ದೀನ್ ರವರು ವಂದಿಸಿದರು. ಎಲ್ಸಿ ಲಸ್ರಾದೊ ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.