ಕೌಡಿಚ್ಚಾರು: ಕೌಡಿಚ್ಚಾರು ಪೇಟೆಯ ಬಳಿಯ ಮರವೊಂದು ಗಾಳಿ ಮನಳೆಗೆ ರಸ್ತೆಗೆ ಬಿದ್ದ ಪರಿಣಾಮ ಕೆಲಹೊತ್ತು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಜು.14ರಂದು ನಡೆದಿದೆ.
ಮಧ್ಯಾಹ್ನ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಕೌಡಿಚ್ಚಾರು ಪೇಟೆ ಸಮೀಪ ಕೋಳಿ ಮಾರಾಟದ ಅಂಗಡಿಯೊಂದರ ಬಳಿ ಇದ್ದ ಮರವೊಂದು ಮುರಿದು ರಸ್ತೆಗೆ ಬಿದ್ದಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನ ಸಾಗಾಟಕ್ಕೆ ಅಡಚಣೆ ಉಂಟಾಗಿತ್ತು. ಬಳಿಕ ಸ್ಥಳೀಯರು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇನ್ನಷ್ಟೂ ಅಪಾಯಕಾರಿ ಮರ:
ಕೌಡಿಚ್ಚಾರು ಪೇಟೆ ಅಸುಪಾಸಿನಲ್ಲಿ ಇನ್ನಷ್ಟೂ ಅಪಾಯಕಾರಿ ಮರಗಳಿವೆ. ಕೌಡಿಚ್ಚಾರು ಬಸ್ಸು ತಂಗುದಾಣ ಹಾಗೂ ಇಲ್ಲಿ ಹೆದ್ದಾರಿ ಬದಿ ಅಪಾಯಕಾರಿ ಮರಗಳಿವೆ. ಈ ಬಗ್ಗೆ ಈಗಾಗಲೇ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಇನ್ನಾದರೂ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ಅಪಾಯಕಾರಿ ಮರಗಳಿಂದ ಅಪಾಯ ಸಂಭವಿಸುವ ಮೊದಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರು ಗಮನಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.