ಪುತ್ತೂರು: ಶಿಕ್ಷಕಿಯೊಬ್ಬರಿಗೆ ಅಶ್ಲೀಲ ಪದ ಬಳಕೆ ಮಾಡಿ ಬೆದರಿಕೆಯೊಡ್ಡಿರುವ ಆರೋಪದಡಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಕ್ರಂಪಾಡಿ ಸಾಂತೋಮ್ ಗುರುಮಂದಿರದ ಬಳಿಯ ನಿವಾಸಿಯಾಗಿರುವ ಶಿಕ್ಷಕಿ ರೇಶ್ಮಾ ಮರಿಯ ರೆಬೆಲ್ಲೋ ಅವರು ದೂರು ನೀಡಿದವರು.‘ಆ.19ರಂದು ಸಂಜೆ ಕಲ್ಲಾರೆ ಅಂಗಡಿಯ ಬಳಿ ಹೋಗುತ್ತಿದ್ದ ವೇಳೆ ಗುರುಪ್ರಸಾದ್ ನಾಯಕ್ ಎಂಬವರು ಅಶ್ಲೀಲ ಪದ ಬಳಕೆ ಮಾಡಿದ್ದಲ್ಲದೆ ಕಳೆದ ನಾಲ್ಕು ತಿಂಗಳಿನಿಂದ ಹಣ ಕೊಡುವಂತೆ ಪದೇ ಪದೇ ಶಾಲೆಯ ಬಳಿ ಬಂದು ಕೈ ಸನ್ನೆ ಮಾಡುತ್ತಿದ್ದರು.ಹಣ ಕೊಡದಿದ್ದರೆ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದರು’ಎಂದು ದೂರಿನಲ್ಲಿ ಅವರು ಆರೋಪಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.