ಪುತ್ತೂರು: ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾರಕ ಡೆಂಗ್ಯೂ ರೋಗ ಹರಡದಂತೆ ಪುಣಚ ಗ್ರಾಮ ಪಂಚಾಯತ್ ಹಾಗೂ ಶಿಕ್ಷಣ ಫೌಂಡೇಶನ್ ವತಿಯಿಂದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಆಶಾ ಕಾರ್ಯಕರ್ತೆ ಜನೆಟ್ ರವರು ಡೆಂಗಿ ರೋಗ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೇಬಿ ಯಾನೆ ಯಶೋಧ ಪಟಿಕಲ್ಲು, ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ , ದ್ವಿತೀಯ ದರ್ಜೆಲೆಕ್ಕ ಸಹಾಯಕರಾದ ಪಾರ್ವತಿ, ಪಂಚಾಯತ್ ಸದಸ್ಯರಾದ ಉದಯಕುಮಾರ್ ದಂಬೆ, ರಾಮಕೃಷ್ಣ ಮೂಡಂಬೈಲು ಹಾಗೂ ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕರಾದ ಸುಮತಿ, ಗ್ರಂಥಾಲಯ ಮೇಲ್ವಿಚಾರಕರಾದ ಜಯಲಕ್ಷ್ಮಿ, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಗ್ರಂಥಾಲಯದ ವಿದ್ಯಾರ್ಥಿ ಓದುಗರು ಭಾಗವಹಿಸಿದ್ದರು.